ಶನಿವಾರ, ನವೆಂಬರ್ 1, 2025

Janaspandhan News

HomeGeneral NewsSchool ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು...
spot_img
spot_img
spot_img

School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಬಾಲಕನ ಮುದ್ದಾದ ಹಾಗೂ ಹಾಸ್ಯಾಸ್ಪದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಶಾಲೆ (School) ಗೆ ಹೋಗುವುದನ್ನು ನಿರಾಕರಿಸಿದ ಬಾಲಕನನ್ನು, ಮನೆಯವರು ಆತ ಅಂಟಿಕೊಂಡಿದ್ದ ಮಂಚದ ಸಹಿತ ಶಾಲೆಗೆ ಕರೆದುಕೊಂಡು ಬಂದಿದ್ದಾರೆ.

ಈ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದ ಸಾವಿರಾರು ಜನರನ್ನು ನಗಿಸುತ್ತಿದೆ ಮತ್ತು ಅನೇಕರಲ್ಲಿ ಬಾಲ್ಯದ ನೆನಪುಗಳನ್ನು ಜೀವಂತಗೊಳಿಸಿದೆ.

ಹೆಚ್ಚುತ್ತಿರುವ Heart-Attack : ಮನೆಯಲ್ಲಿಯೇ ಆರಂಭಿಕ ಹೃದಯಾಘಾತವನ್ನು ಹೀಗೆ ಗುರುತಿಸಿ.!

ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು Ritesh Kumar Todabhim ಎಂಬವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಲಕನೊಬ್ಬ ಮಂಚದ ಕಾಲಿಗೆ ಬಿಗಿಯಾಗಿ ಹಿಡಿದುಕೊಂಡು “ಶಾಲೆಗೆ (School) ಹೋಗಲ್ಲ” ಎಂದು ಅಳುತ್ತಿದ್ದಾನೆ.

ಆತ ಅಷ್ಟು ಬಿಗಿಯಾಗಿ ಹಿಡಿದಿದ್ದರಿಂದ ಮನೆಯವರು ಮಂಚದ ಸಹಿತ ಆತನನ್ನು ಎತ್ತಿಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಾರೆ.

Fight : ತಿಲಕಕ್ಕಾಗಿ ಮಹಿಳೆಯರ ನಡುವೆ ಜಡೆ ಹಿಡಿದು ಕಿತ್ತಾಟ ; ವಿಡಿಯೋ ವೈರಲ್.!

ಶಾಲೆ (School) ಯ ಆವರಣದಲ್ಲಿ ಬಾಲಕನ ಅಳುವು ಮುಂದುವರಿಯುತ್ತಿದ್ದರೆ, ಇತರ ಮಕ್ಕಳು ನಗುತ್ತಾ ಅದನ್ನು ನೋಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಲ್ಲಿದ್ದವರು ಬಾಲಕನ ಕೈಯನ್ನು ಮಂಚದಿಂದ ಬಿಡಿಸಲು ಪ್ರಯತ್ನಿಸಿದರೂ, ಆತ ತನ್ನ ಹಿಡಿತವನ್ನು ಬಿಡದೆ ಅಳುತ್ತಾ “ಹೋಗಲ್ಲ” ಎಂದು ಹಠ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರಿಗೆ ತಲುಪಿದ್ದು, ನೆಟ್ಟಿಗರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Water : ಬೊಜ್ಜು ಕರಗಿಸಲು ಇಲ್ಲದೇ ಪರಿಹಾರ ; ಆರೋಗ್ಯ ಸಚಿವಾಲಯದ ಪ್ರಮುಖ ಸಲಹೆ.!
  • “ಇದನ್ನು ನೋಡಿ ನನ್ನ ಬಾಲ್ಯದ ದಿನಗಳು ನೆನಪಾಯ್ತು,” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
  • ಇನ್ನೂ ಕೆಲವರು “ಬಾಲಕ ಯಾಕೆ ಶಾಲೆ (School) ಗೆ ಹೋಗಲು ಇಷ್ಟಪಡುತ್ತಿಲ್ಲ ಎಂದು ಕೇಳಬೇಕು, ಶಾಲೆಯಲ್ಲೇ ಏನಾದರೂ ಅಸಹಜ ಘಟನೆ ನಡೆದಿರಬಹುದೇ?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
  • ಅನೇಕರು “ಇಂದಿನ ಪೋಷಕರು ಮಕ್ಕಳಿಗೆ ಅತಿಯಾದ ಮಮತೆ ತೋರಿಸುತ್ತಿದ್ದಾರೆ, ಆದರೆ ಹಳೆಯ ದಿನಗಳಲ್ಲಿ ಪೋಷಕರು ಕಠಿಣ ಶಿಸ್ತಿನಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು” ಎಂದು ಹೇಳಿಕೊಂಡಿದ್ದಾರೆ.

ಪೋಷಕರು ಮತ್ತು ಶಿಕ್ಷಕರ ನಡುವಿನ ಸಂಬಂಧದ ಕುರಿತಂತೆ ಹಲವರು ಚರ್ಚೆ ಆರಂಭಿಸಿದ್ದಾರೆ. ಹಳ್ಳಿಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಮಯದಲ್ಲಿ ಹಠ ಹಿಡಿಯುವಂತಹ ಘಟನೆಗಳು ಸಾಮಾನ್ಯವಾಗಿದ್ದವು.

ಆ ದಿನಗಳಲ್ಲಿ ಶಾಲೆಗೆ ಹೋಗಲು ಆಸಕ್ತಿ ತೋರದ ಮಕ್ಕಳು ಹೊಟ್ಟೆನೋವು, ತಲೆನೋವು, ಅಥವಾ ಬೇರೆ ನೆಪ ಹೇಳಿ ಶಾಲೆ (School) ಯಿಂದ ತಪ್ಪಿಸಿಕೊಳ್ಳುತ್ತಿದ್ದರೆ, ಪೋಷಕರು ಬೆತ್ತದ ಸಹಾಯದಿಂದ ಅವರಿಗೆ ಪಾಠ ಕಲಿಸುತ್ತಿದ್ದರು.

Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!

ಈಗ ವೈರಲ್ ಆಗಿರುವ ಈ ವಿಡಿಯೋ ಕೇವಲ ಹಾಸ್ಯಾಸ್ಪದ ಘಟನೆಯಷ್ಟೇ ಅಲ್ಲ, ಇದು ಇಂದಿನ ಪೋಷಕ-ಮಕ್ಕಳ ಸಂಬಂಧದ ಪ್ರಾಮಾಣಿಕ ಚಿತ್ರಣವಾಗಿದೆ. ಬಾಲ್ಯದ ಮುದ್ದಾದ ಹಠ ಮತ್ತು ಪೋಷಕರ ಸಹನೆ ಎಂಬ ಮಿಶ್ರಣವು ಈ ವಿಡಿಯೋವನ್ನು ಇಂಟರ್ನೆಟ್‌ನ ಅಚ್ಚುಮೆಚ್ಚಿನ ವಿಷಯವನ್ನಾಗಿ ಮಾಡಿದೆ.

ನೀವು ಈ ವಿಡಿಯೋ ನೋಡಿ ನಕ್ಕಿದ್ದೀರಾ ಅಥವಾ ನಿಮ್ಮ ಬಾಲ್ಯದ ನೆನಪುಗಳತ್ತ ಸೆಳೆದಿದೆಯೇ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ.

ಇಲ್ಲಿದೆ ನೋಡಿ ವಿಡಿಯೋ :


Mother : ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ಮಗಳು.!

Mother

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಗರದಲ್ಲಿ ನಡೆದಿರುವ ಒಂದು ಹೃದಯವಿದ್ರಾವಕ ಘಟನೆ ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಬ್ರಹ್ಮಣ್ಯಪುರ ಸರ್ಕಲ್‌ ಬಳಿ ವಾಸಿಸುತ್ತಿದ್ದ 35 ವರ್ಷದ ತಾಯಿ (Mother) ನೇತ್ರಾವತಿ ಕೊ*ಲೆಯಾಗಿದ್ದಾರೆ. ಮನೆಯೊಳಗೆ ಉಂಟಾದ ವಿವಾದವೇ ಈ ದುರಂತಕ್ಕೆ ಕಾರಣವೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.

ಮೃತ ನೇತ್ರಾವತಿ ತಮ್ಮ ಅಪ್ರಾಪ್ತ ಮಗಳೊಂದಿಗೆ ವಾಸಿಸುತ್ತಿದ್ದರು. ಅವರ ಪತಿ ಹಲವು ವರ್ಷಗಳಿಂದ ಬೇರೆ ಇದ್ದ ಕಾರಣ, ಮಗಳು ಮತ್ತು ತಾಯಿ (Mother) ಇಬ್ಬರೂ ಪರಸ್ಪರರ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದರು.

Fight : ತಿಲಕಕ್ಕಾಗಿ ಮಹಿಳೆಯರ ನಡುವೆ ಜಡೆ ಹಿಡಿದು ಕಿತ್ತಾಟ ; ವಿಡಿಯೋ ವೈರಲ್.!

ಆದರೆ ಇತ್ತೀಚಿನ ದಿನಗಳಲ್ಲಿ ಮಗಳ ವರ್ತನೆಗೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ತಾಯಿ (Mother) ಮತ್ತು ಮಗಳ ನಡುವೆ ಅಸಮ್ಮತಿ ಉಂಟಾಗಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ನೇತ್ರಾವತಿ ದಾರಿ ತಪ್ಪುತ್ತಿದ್ದ ತಮ್ಮ ಮಗಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಹಲವಾರು ಬಾರಿ ತಿಳಿ ಹೇಳಿದ್ದರು.

ಘಟನೆಯ ದಿನವಾದ ಅಕ್ಟೋಬರ್‌ 25ರ ರಾತ್ರಿ, ಮನೆಯಲ್ಲಿ ಸಣ್ಣ ವಾಗ್ವಾದ ಉಂಟಾದ ನಂತರ ನೇತ್ರಾವತಿ ಸಾವನ್ನಪ್ಪಿದ್ದರು. ಫೋನ್‌ ಕರೆಗೆ ತಾಯಿ (Mother) ಮತ್ತು ಪುತ್ರಿ ಪ್ರತಿಕ್ರಿಯಿಸದೆ ಇದ್ದ ಹಿನ್ನಲೆಯಲ್ಲಿ ಮೃತರ ಅಕ್ಕ ಮನೆಗೆ ಭೇಟಿ ನೀಡಲು ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

Teacher : ಶಿಕ್ಷಕಿಯ ಮೇಲೆ ಅಮಾನವೀಯ ಕೃತ್ಯ : ಆರೋಪಿ ಪೊಲೀಸ್‌ ವಶಕ್ಕೆ.!

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿಯಿತು. ಮಾಹಿತಿ ಸಿಕ್ಕ ಕೂಡಲೇ ಬ್ರಹ್ಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದರು.

ನೇತ್ರಾವತಿ ಅಂತ್ಯಸಂಸ್ಕಾರಕ್ಕೂ ಪುತ್ರಿಯ ಸುಳಿಯಲಿಲ್ಲ. ಹೀಗಾಗಿ ನೇತ್ರಾವತಿ ಅಕ್ಕ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟೆ ಅಲ್ಲರೆ ತಂಗಿ ನೇತ್ರಾವತಿ ಕೊಲೆ ಹಿಂದೆ ಆಕೆಯ ಪುತ್ರಿ ಮೇಲೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

BSNL ನಲ್ಲಿ ಖಾಲಿ ಇರುವ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ತಾಯಿ (Mother) ಹತ್ಯೆಯ ಹಿನ್ನಲೆ :

ಕೊ*ಲೆಯಾದ ನೇತ್ರಾವತಿಯ ಅಪ್ರಾಪ್ತ ಪುತ್ರಿ, ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪದೇ ಪದೇ ಪ್ರಿಯಕರನ್ನು ಪುತ್ರಿ ಮನೆಗೆ ಕರೆದುಕೊಂಡು ಬರುತ್ತಿದ್ದಳು. ಶನಿವಾರ (ಅ.25) ರಾತ್ರಿ ಪ್ರಿಯಕರ ಜೊತೆಗೆ ನೇತ್ರಾವತಿ ಪುತ್ರಿ ಮನೆಗೆ ಬಂದಿದ್ದಳು.

ಆದರೆ ಶನಿವಾರ ದಿನ ರಾತ್ರಿ ತಾಯಿ ಮಲಗಿದ್ದ ವೇಳೆ ಪುತ್ರಿ ತನ್ನ ಪ್ರಿಯಕರ ಜೊತೆಗೆ ಮೂವರು ಸ್ನೇಹಿತರು ಮನೆಗೆ ಕರೆ ತಂದಿದ್ದಳು. ಮಲಗಿದ್ದ ತಾಯಿ (Mother) ಗೆ ಎಚ್ಚರಗೊಂಡಾಗ ಮಗಳ ಜೊತೆ ನಾಲ್ವರು ಸ್ನೇಹಿತರು ಒಂದೇ ಕೋಣೆಯಲ್ಲಿರುವುದು ಗೊತ್ತಾಗಿದೆ.

Fight : ತಿಲಕಕ್ಕಾಗಿ ಮಹಿಳೆಯರ ನಡುವೆ ಜಡೆ ಹಿಡಿದು ಕಿತ್ತಾಟ ; ವಿಡಿಯೋ ವೈರಲ್.!

ಈ ಹಿನ್ನಲೆಯಲ್ಲಿ ಮಗಳನ್ನು ಬೈದು ಜಗಳವಾಡಿ, ತಕ್ಷಣವೇ ನಾಲ್ವರನ್ನು ಮನೆಯಿಂದ ಹೊರಗೆ ಹೋಗುವಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ಹೋಗದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ತನ್ನ ತಾಯಿ ರಾತ್ರಿ ಪಾರ್ಟಿ (Party) ಗೆ ಅಡ್ಡಿ ಮಾಡಿದಳು ಎಂದು ಪುತ್ರಿ ಕೋಪಗೊಂಡಿದ್ದಾಳೆ. ಆಗ ಪುತ್ರಿಯ ಪ್ರಿಯಕರ ಹಾಗು ಸ್ನೇಹಿತರು ಆಕ್ರೋಶಗೊಂಡಿದ್ದಾರೆ. ಪರಿಣಾಮ ಪುತ್ರಿ ಸೇರಿ ಎಲ್ಲರೂ ತಾಯಿ ನೇತ್ರಾವತಿ ಬಾಯಿಯನ್ನು ಬಲವಂತವಾಗಿ ಮುಚ್ಚಿದ್ದಾರೆ.

Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!

ನಂತರ ಟವಲ್ ಮೂಲಕ ನೇತ್ರಾವತಿಯ ಕುತ್ತಿಗೆಯನ್ನು ಬಿಗಿ ಮಾಡಿ ಕೊ*ಲೆ (Mu*der) ಮಾಡಿದ್ದಾರೆ. ಬಳಿಕ ನೇತ್ರಾವತಿ ಕತ್ತಿಗೆ ಸೀರೆ ಬಿಗಿದು ಫ್ಯಾನ್‌ಗೆ ಕಟ್ಟಿ ಆತ್ಮಹ*ತ್ಯೆ ಎಂದು ಬಿಂಬಿಸಿದ್ದಾರೆ. ಇಷ್ಟೇಲ್ಲ ಬಳಿಕ ನೇತ್ರಾವತಿ ಪುತ್ರಿ ಸೇರಿದಂತೆ ನಾಲ್ವರು ಎಸ್ಕೇಪ್ ಆಗಿದ್ದಾರೆ.

ಇಲ್ಲಿ ಕೊಲೆ ಮಾಡಿದ ಎಲ್ಲರೂ ಅಪ್ರಾಪ್ತರೇ (Minors) ಅನ್ನುವುದು ಗಮನಾರ್ಹ ಸಂಗತಿ. ನೇತ್ರಾವತಿಯ ಅಪ್ರಾಪ್ತ ಮಗಳು ಮತ್ತು ಆಕೆಯ ಕೆಲವು ಸ್ನೇಹಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ಇಲಾಖೆ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಘಟನೆಯ ನಿಖರ ಕಾರಣ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ. ತನಿಖೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸತ್ಯಾಂಶ ಬಹಿರಂಗಗೊಳ್ಳಲಿದೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments