Wednesday, September 17, 2025

Janaspandhan News

HomeCrime Newsಪತ್ನಿ ಕೊಲೆ ಪ್ರಕರಣ : BJP ನಾಯಕ ಹಾಗೂ ಪ್ರೇಯಸಿ ಬಂಧನ.!
spot_img
spot_img
spot_img

ಪತ್ನಿ ಕೊಲೆ ಪ್ರಕರಣ : BJP ನಾಯಕ ಹಾಗೂ ಪ್ರೇಯಸಿ ಬಂಧನ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಜೆಪಿ (BJP) ನಾಯಕ ರೋಹಿತ್ ಸೈನಿ ಮತ್ತು ಅವರ ಪ್ರೇಯಸಿ ರಿತು ಸೈನಿ ಅವರನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ.

ಘಟನೆ ಆಗಸ್ಟ್ 10ರಂದು ನಡೆದಿದ್ದು, ಆರಂಭದಲ್ಲಿ ಕೆಲವು ಕಳ್ಳರು ಮನೆಗೆ ನುಗ್ಗಿ ಆಭರಣಗಳನ್ನು ದೋಚಿ, ಪತ್ನಿ ಸಂಜುವನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿತ BJP ನಾಯಕ ಹೇಳಿಕೆ ನೀಡಿದ್ದ.

Exclusive photo reveal : ಅರೆಸ್ಟ್ ಆದ್ಮೇಲೆ ದರ್ಶನ್-ಪವಿತ್ರಾಗೌಡ ಹೇಗಿದ್ದಾರೆ ನೋಡಿ.!

ಆದರೆ ವಿಚಾರಣೆ ವೇಳೆ BJP ನಾಯಕ ರೋಹಿತ್ ಸೈನಿ ಪದೇಪದೇ ಹೇಳಿಕೆ ಬದಲಾಯಿಸಿದ್ದರಿಂದ ಪೊಲೀಸರಿಗೆ ಅನುಮಾನ ಬಂದು ತೀವ್ರ ವಿಚಾರಣೆ ನಡೆಸಿದರು. ಕೊನೆಗೆ, ಪತ್ನಿಯನ್ನು ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಯಸಿಯ ಒತ್ತಾಯಕ್ಕೆ ತುತ್ತಾದ BJP ನಾಯಕ :

ತನಿಖೆಯಿಂದ ಬಹಿರಂಗವಾದ ಮಾಹಿತಿ ಪ್ರಕಾರ, BJP ನಾಯಕ ರೋಹಿತ್ ಸೈನಿ ದೀರ್ಘಕಾಲದಿಂದ ರಿತು ಸೈನಿಯೊಂದಿಗೆ ಸಂಬಂಧ ಹೊಂದಿದ್ದ. ಒಟ್ಟಿಗೆ ಬಾಳಲು ಪತ್ನಿ ಅಡ್ಡಿಯಾಗುತ್ತಿದ್ದ ಕಾರಣ, ಪ್ರೇಯಸಿಯ ಒತ್ತಡದಲ್ಲಿ BJP ನಾಯಕ ರೋಹಿತ್ ತನ್ನ ಪತ್ನಿ ಸಂಜುವನ್ನು ಕೊಲೆಗೈದಿದ್ದಾನೆ. ಬಳಿಕ ಕಳ್ಳತನವೆಂದು ತೋರಿಸಲು ಸುಳ್ಳು ಕಥೆ ಹೆಣೆದಿದ್ದಾನೆ.

Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!

ಪ್ರಸ್ತುತ BJP ನಾಯಕ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.


Astrology : ಹೇಗಿದೆ ಗೊತ್ತಾ.? ಅಗಷ್ಟ 17 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಅಗಷ್ಟ 17, ರವಿವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಮಳೆಗಾಲದಲ್ಲಿ ಬಟ್ಟೆಗಳಿಂದ bad-smell ಬರುತ್ತಿದೆಯೇ? ಈ 3 ಮನೆಮದ್ದುಗಳಿಂದ 5 ನಿಮಿಷದಲ್ಲಿ ಪರಿಹಾರ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕುಟುಂಬ ಸದಸ್ಯರ ಆರೋಗ್ಯದ ವಿಷಯದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಇರುತ್ತವೆ. ಹೊಸ ಸಾಲದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ದೂರ ಪ್ರಯಾಣ ಸೂಚನೆಗಳಿವೆ. ಮನೆ ವಾತಾವರಣ ಗೊಂದಲಮಯವಾಗಿರುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ವೃತ್ತಿ ವ್ಯಾಪಾರಗಳು ಸಾಮಾನ್ಯವಾಗಿ ಸಾಗುತ್ತವೆ.

*ವೃಷಭ ರಾಶಿ*

ಆರ್ಥಿಕ ವ್ಯವಹಾರಗಳು ನಿರುತ್ಸಾಹಗೊಳ್ಳುತ್ತವೆ. ಗೆಳೆಯರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರಮುಖ ಕೆಲಸಗಳಲ್ಲಿ ಶ್ರಮ ವಹಿಸಿದರೂ ಕೆಲಸಗಳು ಮುಂದೆ ಸಾಗುವುದಿಲ್ಲ. ದೈವ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ . ವ್ಯಾಪಾರಗಳಲ್ಲಿ ಅಲ್ಪ ಲಾಭ ದೊರೆಯುತ್ತದೆ, ಉದ್ಯೋಗಗಳಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.

*ಮಿಥುನ ರಾಶಿ*

ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನಗಳು ದೊರೆಯುತ್ತವೆ. ಹಠಾತ್ ಧನಪ್ರಾಪ್ತಿ ಉಂಟಾಗುತ್ತದೆ. ಮನೆಯ ಹೊರಗೆ ಒಳ್ಳೆಯ ಮಾತಿನ ನಡತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಹೊಸ ಉತ್ಸಾಹದಿಂದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವ್ಯಾಪಾರ ಉದ್ಯೋಗಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮಾನ್ಯತೆ ದೊರೆಯುತ್ತದೆ.

ಬೆಳಗಾವಿ : 30 beauty-parlour ಗಳ ಮೇಲೆ ಆರೋಗ್ಯ ಇಲಾಖೆಯ ದಾಳಿ ; 10 ಸೀಜ್, 20ಕ್ಕೆ ನೋಟಿಸ್.!
*ಕಟಕ ರಾಶಿ*

ಪ್ರಮುಖ ಪರಿಚಯಗಳು ವಿಸ್ತಾರಗೊಳ್ಳುತ್ತವೆ. ನೂತನ ವಾಹನ ಖರೀದಿಸುತ್ತೀರಿ. ಕೆಲವು ವ್ಯವಹಾರಗಳಲ್ಲಿ ಅಕಸ್ಮಿಕವಾಗಿ ನಿರ್ಧಾರಗಳು ಬದಲಾಗುತ್ತವೆ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ನೂತನ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ. ಆರ್ಥಿಕವಾಗಿ ಅನುಕೂಲಕರ ವಾತಾವರಣ ಇರುತ್ತದೆ. ವ್ಯಾಪಾರಗಳು, ಉದ್ಯೋಗಗಳಲ್ಲಿ ನಿಮ್ಮ ನಿರೀಕ್ಷೆಗಳು ನಿಜವಾಗುತ್ತವೆ.

*ಸಿಂಹ ರಾಶಿ*

ಖರ್ಚುಗಳ ವಿಷಯದಲ್ಲಿ ಮರು ಚಿಂತನೆ ಮಾಡುವುದು ಒಳ್ಳೆಯದು. ಅಲ್ಪ ಅನಾರೋಗ್ಯ ಸಮಸ್ಯೆಗಳಿವೆ. ಮನೆ ವಾತಾವರಣ ಕಿರಿ ಕಿರಿ ಉಂಟುಮಾಡುತ್ತದೆ. ಆಧ್ಯಾತ್ಮಿಕ ಚಿಂತನ ಹೆಚ್ಚಾಗುತ್ತದೆ. ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಸಮಸ್ಯೆಗಳು ಇರುತ್ತವೆ. ವೃತ್ತಿ ಉದ್ಯೋಗಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.

*ಕನ್ಯಾ ರಾಶಿ*

ಆರ್ಥಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಫಲ ನೀಡುವುದಿಲ್ಲ. ಮನೆಯಲ್ಲಿ ಸದಸ್ಯರ ವರ್ತನೆಯು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬಂಧುಮಿತ್ರರೊಡನೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

Coaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!
*ತುಲಾ ರಾಶಿ*

ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ. ಒಂದು ವ್ಯವಹಾರದಲ್ಲಿ ಎಲ್ಲರನ್ನೂ ಮೆಚ್ಚಿಸುತ್ತೀರಿ. ಹೊಸ ವಾಹನ ಯೋಗವಿದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರಗಳು ಸ್ವಲ್ಪಮಟ್ಟಿಗೆ ಸಾಮಾನ್ಯವಾಗಿ ಸಾಗುತ್ತವೆ, ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ.

*ವೃಶ್ಚಿಕ ರಾಶಿ*

ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಗೊಂದಲ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಧನದ ವಿಷಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುವುದು ಉತ್ತಮ. ವ್ಯಾಪಾರದಲ್ಲಿ ಅಲ್ಪ ಲಾಭ ದೊರೆಯುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.

*ಧನುಸ್ಸು ರಾಶಿ*

ನಿರುದ್ಯೋಗಿಗಳ ಶ್ರಮದಿಂದ ಹೊಸ ಅವಕಾಶಗಳು ದೊರೆಯುತ್ತವೆ. ಸ್ಥಿರಾಸ್ತಿ ಮಾರಾಟ ಲಾಭದಾಯಕವಾಗಿರುತ್ತದೆ. ಹೊಸ ಸ್ನೇಹಿತರ ಪರಿಚಯಗಳು ಹೆಚ್ಚಾಗುತ್ತವೆ. ಮಕ್ಕಳಿಗೆ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ.

Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!
*ಮಕರ ರಾಶಿ*

ಹಣದ ವಿಚಾರದಲ್ಲಿ ಏರುಪೇರು ಹೆಚ್ಚಾಗುತ್ತದೆ. ಅನಿರೀಕ್ಷಿತ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ.

*ಕುಂಭ ರಾಶಿ*

ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಉದ್ಯಮಿಗಳು ಹೊಸ ಹೂಡಿಕೆಗಳನ್ನು ಪಡೆಯುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ.

*ಮೀನ ರಾಶಿ*

ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ಬಾಲ್ಯದ ಗೆಳೆಯರ ಭೇಟಿ ಸಂತೋಷವನ್ನು ತರುತ್ತದೆ. ವಾಹನ ಅನುಕೂಲತೆ ಉಂಟಾಗುತ್ತದೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ವಿವಾದಗಳು ಬಗೆಹರಿಯುತ್ತವೆ. ಕೈಗೆತ್ತಿಕೊಂಡ ಕೆಲಸಗಳು ವಿಳಂಬವಾದರೂ ನಿಧಾನಗತಿಯಲ್ಲಿ ಪೂರ್ಣಗೊಳಿಸುತ್ತೀರಿ. ಉದ್ಯೋಗಗಳು ಮೊದಲಿಗಿಂತ ಉತ್ತಮ ವಾತಾವರಣವನ್ನು ಹೊಂದಿರುತ್ತವೆ.

Astrology

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments