ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral Newsಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
spot_img
spot_img
spot_img

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ರಾಪಿಡೋ ಬೈಕ್ (Bike) ಸವಾರನಿಂದ ಮಹಿಳಾ ಪ್ರಯಾಣಿಕೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗುತ್ತಿದೆ.

ಮಹಿಳೆಯ ಪ್ರಕಾರ, ನವೆಂಬರ್ 6 ರಂದು ಚರ್ಚ್ ಸ್ಟ್ರೀಟ್‌ನಿಂದ ತಮ್ಮ ಪೇಯಿಂಗ್ ಗೆಸ್ಟ್ ವಸತಿ ಗೃಹದ ಕಡೆಗೆ ಬೈಕ್ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಲೋಕೇಶ್ ಎಂಬ ಹೆಸರಿನ ಬೈಕ್ (Bike) ಚಾಲಕ ಮಹಿಳೆಯನ್ನು ಹತ್ತಿಸಿಕೊಂಡು, ಪ್ರಯಾಣದ ಮಧ್ಯದಲ್ಲಿ ಅವಳ ಕಾಲಿಗೆ ಅಶ್ಲೀಲವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.

School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!

ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದ್ದ ಮಹಿಳೆ, ನಂತರ ಆತ ಪುನಃ ಅದೇ ಕೃತ್ಯವನ್ನು ಮುಂದುವರೆಸುತ್ತಿದ್ದಾನೆಂದು ಗಮನಿಸಿ, ತಮ್ಮ ಮೊಬೈಲ್‌ನಲ್ಲಿ ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. “ಭೈಯಾ ಹೀಗ್ ಮಾಡ್ಬೇಡಿ” ಎಂದು ಎಚ್ಚರಿಸಿದರೂ‌ ಕೂಡಾ ಆತ ತನ್ನ ವರ್ತನೆ ಮುಂದುವರಿಸಿದ್ದ ಎಂದು ಮಹಿಳೆ ತಿಳಿಸಿದ್ದಾರೆ.

ಪಿಜಿ ಹತ್ತಿರ ತಲುಪಿದ ಬಳಿಕ ಸ್ಥಳೀಯರು ಅಳುತ್ತಿದ್ದ ಮಹಿಳೆಯನ್ನು ಗಮನಿಸಿ ವಿಚಾರಿಸಿದಾಗ, ಮಹಿಳೆ ಎಲ್ಲವನ್ನೂ ವಿವರಿಸಿದ್ದಾರೆ. ಬಳಿಕ ಸ್ಥಳೀಯರು ಬೈಕ್ (Bike) ಚಾಲಕನನ್ನು ಪ್ರಶ್ನಿಸಿದಾಗ ಆತ “ಉದ್ದೇಶಪೂರ್ವಕವಾಗಿ ಮಾಡಿಲ್ಲ” ಎಂದು ಹೇಳಿಕೊಂಡು ಕ್ಷಮೆಯಾಚಿಸಿದ್ದಾನೆ.

ಆದರೆ ತೆರಳುವ ವೇಳೆ ಮಹಿಳೆಯ ಕಡೆ ಬೆರಳು ತೋರಿಸಿದ ಬೈಕ್ (Bike) ಚಾಲಕನ ವರ್ತನೆಯಿಂದ ಮಹಿಳೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಮಹಿಳೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಘಟನೆ ನನ್ನಿಗೆ ತೀವ್ರ ಆತಂಕ ತಂದಿದೆ. ಅಸುರಕ್ಷಿತ ಅನ್ನಿಸಿತು” ಎಂದು ಬರೆದಿದ್ದಾರೆ.

ಇದೀಗ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ರಾಪಿಡೋ ಕಂಪನಿಯಿಂದ ಬೈಕ್ (Bike) ಚಾಲಕನ ವಿವರಗಳನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ :

 

View this post on Instagram

 

A post shared by @s4dhnaa


ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

Chilli

ಜನಸ್ಪಂದನ ನ್ಯೂಸ್‌, ಅಹಮದಾಬಾದ್‌ : ಸಾಮಾನ್ಯವಾಗಿ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಕಳ್ಳತನದ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಚಿನ್ನಾಭರಣ ಕಳ್ಳತನದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯೋರ್ವಳು ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿ, ಮಾಲೀಕನ ಕೈಗೆ ಸಿಕ್ಕಿ ಬಿದ್ದು ಸರಿಯಾಗಿ ಬಾರಿಸಿಕೊಂಡಿದ್ದಾಳೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ಮಹಿಳೆಯೊಬ್ಬಳು ನವೆಂಬರ್ 3ರಂದು ಮಧ್ಯಾಹ್ನ ಸುಮಾರು 12.30ರ ಸುಮಾರಿಗೆ ಅಹಮದಾಬಾದ್‌ನ ರಾಣಿಪ್ ಪ್ರದೇಶದ ಜ್ಯುವೆಲ್ಲರಿ ಅಂಗಡಿಗೆ ಪ್ರವೇಶಿಸಿದ್ದಾಳೆ. ಗಾಜಿನ ಬಾಗಿಲು ತೆರೆದು ಒಳಗೆ ಬಂದ ಕೂಡಲೇ ಆಕೆ ಕೈಯಲ್ಲಿದ್ದ ಖಾರದ (Chilli) ಪುಡಿಯನ್ನು ಮಾಲೀಕರ ಮುಖದ ಮೇಲೆ ಎರಚಲು ಪ್ರಯತ್ನಿಸಿದ್ದಾಳೆ.

ಆದರೆ ಆಕೆಯ ಪ್ರಯತ್ನ ವಿಫಲವಾಗಿ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅಷ್ಟೆ ಅಲ್ಲದೇ ಮಾಲೀಕ ಖಾರದ (Chilli) ಪುಡಿ ಎರಚಿದ ಮಹಿಳೆಯ ಕೈ ಹಿಡಿದು ಸರಿಯಾಗಿ ಸುಮಾರು 20 ಬಾರಿ ಬಾರಿಸಿದ್ದಾನೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಘಟನೆಯ ಸಂಪೂರ್ಣ ದೃಶ್ಯವು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಕೇವಲ 25 ಸೆಕೆಂಡುಗಳ ವೀಡಿಯೋದಲ್ಲಿ ಮಾಲೀಕನ ಧೈರ್ಯ ಮತ್ತು ತುರ್ತು ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಖಾರದ (Chilli) ಪುಡಿ ಎರಚಿದ ಘಟನೆಯ ಬಳಿಕ ಅಂಗಡಿ ಮಾಲೀಕರು ಯಾವುದೇ ಅಧಿಕೃತ ದೂರು ದಾಖಲಿಸಲು ನಿರಾಕರಿಸಿದ್ದರೂ, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ರಾಣಿಪ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೇತನ್ ವ್ಯಾಸ್, “ಮಾಲೀಕರಿಂದ ದೂರು ಪಡೆಯಲು ಎರಡು ಬಾರಿ ಭೇಟಿಯಾಗಿದ್ದೇವೆ. ಆದರೂ ಅವರು ದೂರು ನೀಡಲು ನಿರಾಕರಿಸಿದ್ದಾರೆ. ಈಗ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ಗುರುತು ಪತ್ತೆ ಮಾಡಲು ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮಾಲೀಕರ ಧೈರ್ಯಕ್ಕೆ ಶ್ಲಾಘನೆ ಸಲ್ಲಿಸುತ್ತಿದ್ದು, ಕೆಲವರು “ ಖಾರದ (Chilli) ಪುಡಿ ಎರಚುವ ದರೋಡೆಗಾರರಿಗೆ ಕಠಿಣ ಶಿಕ್ಷೆ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಇದಾದ ಬಳಿಕ ಪೊಲೀಸರು ಮಹಿಳೆಯ ಗುರುತು ಪತ್ತೆ ಮಾಡಲು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ, ಜನರು ಇಂತಹ ಘಟನೆಗಳ ವಿರುದ್ಧ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯ ವಿಡಿಯೋ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments