Sunday, October 26, 2025

Janaspandhan News

HomeGeneral NewsTrain ಹಳಿ ಮೇಲೆ ಬೈಕ್‌ ಸ್ಕಿಡ್‌ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು...
spot_img
spot_img
spot_img

Train ಹಳಿ ಮೇಲೆ ಬೈಕ್‌ ಸ್ಕಿಡ್‌ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು ; ಮುಂದೆನಾಯ್ತು.? ವಿಡಿಯೋ ನೋಡಿ.!

- Advertisement -

ಜನಸ್ಪಂದನ ನ್ಯೂಸ್‌, ಗ್ರೇಟರ್ ನೋಯ್ಡಾ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಯ ದಾದ್ರಿ ರೈಲ್ವೆ (Train) ಕ್ರಾಸಿಂಗ್‌ನಲ್ಲಿ ನಡೆದ ದುರ್ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಮೃತ ಯುವಕ ರೈಲ್ವೆ (Train) ಹಳಿ ದಾಟುವ ಪ್ರಯತ್ನದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವಕನ ಬೈಕ್ ರೈಲ್ವೆ ಹಳಿ ಸಮೀಪ ಬರುತ್ತಿದಂತೆಯೇ ಬ್ರೆಕ್ ಹಾಕಿದ್ದಾನೆ. ಆದರೆ ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬೀಳುತ್ತಾನೆ.

IPPB ನಲ್ಲಿ 348 ಹುದ್ದೆಗಳ ನೇಮಕಾತಿ ; ಇಲ್ಲಿದೆ ಸಂಪೂರ್ಣ ವಿವರ.!

ಇದೇ ವೇಳೆ ರೈಲು (Train) ಬರುವ ಶಬ್ದ ಕೇಳಿ ಹಳಿ ಮೇಲೆ ಬಿದ್ದಿದ್ದ ಬೈಕ್‌ ಎತ್ತಲು ಯುವಕ ಪ್ರಯತ್ನಿಸಿದ್ದಾನೆ. ರೈಲು ಸಮೀಪಿಸುತ್ತಿರುವುದನ್ನು ಕಂಡು ಆತಂಕಗೊಂಡು ಓಡಲಾರಂಭಿಸುತ್ತಾನೆ. ಆದರೆ ಕ್ಷಣಾರ್ಧದಲ್ಲಿ ವೇಗವಾಗಿ ಬಂದ ರೈಲು ನೇರವಾಗಿ ಆತನಿಗೆ ಡಿಕ್ಕಿ ಹೊಡೆದಿದೆ.

ಘಟನೆಯ ಸಂಪೂರ್ಣ ದೃಶ್ಯವು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು, ರೈಲು ಅವನನ್ನು ಢಿಕ್ಕಿ ಹೊಡೆದ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಸದ್ಯ ಅದರ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್‌ ಮಸಾಲೆ Water ಕುಡಿಯಿರಿ; ಬೊಜ್ಜು, ಮಧುಮೇಹ ಸೇರಿ 5 ಕಾಯಿಲೆಗಳಿಗೆ ಪರಿಹಾರ.!

ಸ್ಥಳೀಯರ ಪ್ರಕಾರ, ಅಲ್ಲಿ ಸರಿಯಾಗಿ ರೈಲ್ವೆ (Train) ಗೇಟ್ ಇರಬೇಕಾಗಿತ್ತು. ಆದರೆ ಆ ಕ್ರಾಸಿಂಗ್‌ನಲ್ಲಿ ಯಾವುದೇ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಬೋರ್ಡ್ ಕಾಣಿಸದಿರುವುದು ಈ ದುರಂತಕ್ಕೆ ಒಂದು ಪ್ರಮುಖ ಕಾರಣವಾಗಿದೆ. “ಯುವಕ ಬೈಕನ್ನು ಬಿಟ್ಟು ಪಕ್ಕಕ್ಕೆ ಸರಿದಿದ್ದರೆ ಬದುಕುಳಿದಿರುತ್ತಿದ್ದ,” ಎಂದು ಸ್ಥಳೀಯರು ಹೇಳಿದ್ದಾರೆ.

ಅಪಘಾತದ ಬಳಿಕ ರೈಲ್ವೆ (Train) ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತ ಯುವಕನ ಗುರುತು ಬಹಿರಂಗವಾಗಿದ್ದು, ಆತ ಮುಂದಿನ ತಿಂಗಳಲ್ಲಿ ಮದುವೆಯಾಗಬೇಕಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ದುರಂತದ ಸುದ್ದಿ ಕೇಳಿ ಕುಟುಂಬಸ್ಥರು ಶೋಕಸಮುದ್ರದಲ್ಲಿ ಮುಳುಗಿದ್ದಾರೆ.

Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಅನೇಕ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಹಲವರು ಸುರಕ್ಷತೆಯ ಕೊರತೆಯ ಕುರಿತು ರೈಲ್ವೆ (Train) ಇಲಾಖೆಯ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ. ರೈಲ್ವೆ ಹಳಿ ದಾಟುವ ಸ್ಥಳಗಳಲ್ಲಿ ಸರಿಯಾದ ಭದ್ರತಾ ಕ್ರಮಗಳು ಇರದಿರುವುದು ಇಂತಹ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಮತ್ತೊಮ್ಮೆ ಸಾರ್ವಜನಿಕರಿಗೆ ಎಚ್ಚರಿಕೆಯ ಘಂಟೆ ಮೊಳಗಿಸಿದೆ. ರೈಲ್ವೆ (Train) ಹಳಿ ದಾಟುವಾಗ ಯಾವಾಗಲೂ ಜಾಗ್ರತೆ ವಹಿಸಬೇಕು ಎಂಬ ಸಂದೇಶವನ್ನು ಇದು ಸ್ಪಷ್ಟವಾಗಿ ನೀಡಿದೆ.

ವಿಡಿಯೋ :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!

Raju

ಜನಸ್ಪಂದನ ನ್ಯೂಸ್‌, ಉಡುಪಿ : ಉತ್ತರ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ರಾಜು ತಾಳಿಕೋಟೆ (Raju Talikoti) ಅವರು ಅಕ್ಟೋಬರ್ 13, 2025ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು.

Police ಹಲ್ಲೆಯಿಂದ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆರೋಪ ; ಸಿಸಿಟಿವಿ ದೃಶ್ಯ ವೈರಲ್‌

ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿ ತಕ್ಷಣ ಮಣಿಪಾಲ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ನಿರಂತರ ಚಿಕಿತ್ಸೆಯ ಬಳಿಕವೂ ಅವರ ಸ್ಥಿತಿ ಸುಧಾರಿಸದೆ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜು ತಾಳಿಕೋಟೆಯವರ (Raju Talikoti) ನಿಧನದಿಂದ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಕಲಾವಿದರಲ್ಲಿ ಆಳವಾದ ದುಃಖದ ವಾತಾವರಣ ನಿರ್ಮಾಣವಾಗಿದೆ. ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್‌ ಮಸಾಲೆ Water ಕುಡಿಯಿರಿ; ಬೊಜ್ಜು, ಮಧುಮೇಹ ಸೇರಿ 5 ಕಾಯಿಲೆಗಳಿಗೆ ಪರಿಹಾರ.!
ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕ :

ರಾಜು ತಾಳಿಕೋಟೆಯವರ (Raju Talikoti) ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಅವರು ಕೇವಲ ನಟನಾಗಿರದೇ, ಉತ್ತರ ಕರ್ನಾಟಕದ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕರೂ ಆಗಿದ್ದರು. ಅವರು ತಮ್ಮ ಜೀವನದ ಬಹುಭಾಗವನ್ನು ರಂಗಭೂಮಿಗೆ ಸಮರ್ಪಿಸಿ, ಹಳ್ಳಿಹಳ್ಳಿಗೆ ತೆರಳಿ ನಾಟಕಗಳ ಮೂಲಕ ಸಮಾಜದಲ್ಲಿ ನಗು ಮತ್ತು ಸಂದೇಶಗಳನ್ನು ಹಂಚಿಕೊಂಡಿದ್ದರು.

ಕುಡುಕನ ಪಾತ್ರಗಳಿಂದ ಪ್ರೇಕ್ಷಕರ ಮನ ಗೆದ್ದ ಕಲಾವಿದ Raju Talikoti :

ರಾಜು ತಾಳಿಕೋಟೆಯವರು (Raju Talikoti) ವಿಶೇಷವಾಗಿ ಕುಡುಕನ ಪಾತ್ರಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಅವರ ವಿಶಿಷ್ಟ ದೇಹಭಾಷೆ, ಮುಖಾಭಿನಯ ಮತ್ತು ನೈಸರ್ಗಿಕ ಹಾಸ್ಯಭಾವವು ಪ್ರೇಕ್ಷಕರ ಮನಸೆಳೆಯುತ್ತಿತ್ತು.

ಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಎಂಬ ನಾಟಕಗಳು ಅವರ ಅತ್ಯಂತ ಜನಪ್ರಿಯ ಕೃತಿಗಳಾಗಿದ್ದು, ಅವುಗಳ ಆಡಿಯೋ ಕ್ಯಾಸೆಟ್‌ಗಳು ಆ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಪ್ರಸಾರಗೊಂಡು ಮನೆಮಾತಾದುವು.

ನೀರು ಕಾಯಿಸಲು Rod ಬಳಸುತ್ತೀರಾ? ಹಾಗಾದರೆ ಈ ಎಚ್ಚರಿಕೆಯ ಸುದ್ದಿ ಓದಿ.!
ಚಿತ್ರರಂಗದಲ್ಲೂ ಗುರುತಿಸಿಕೊಂಡ ಹಾಸ್ಯನಟ :

ರಂಗಭೂಮಿಯಲ್ಲಿ ಅಪಾರ ಅನುಭವ ಗಳಿಸಿದ ನಂತರ ಅವರು ಕನ್ನಡ ಚಲನಚಿತ್ರರಂಗದಲ್ಲಿಯೂ ತಮ್ಮ ಗುರುತು ಮೂಡಿಸಿದರು.

ಯೋಗರಾಜ್ ಭಟ್ ನಿರ್ದೇಶನದ ‘ಮನಸಾರೆ’ (2009) ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಾಜು ತಾಳಿಕೋಟೆ, ತಮ್ಮ ಹಾಸ್ಯ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದರು. ನಂತರ ಅವರು ‘ಪಂಚರಂಗಿ’, ‘ಮತ್ತೊಂದ್ ಮದುವೇನಾ’, ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಾಜು  (Raju Talikoti) ಅಭಿನಯಿಸಿದರು.

ಅವರ ಹಾಸ್ಯ ಪಾತ್ರಗಳು, ಗ್ರಾಮೀಣ ಉಚ್ಚಾರಣೆ ಮತ್ತು ನೈಸರ್ಗಿಕ ಅಭಿನಯವು ಕನ್ನಡ ಚಲನಚಿತ್ರರಂಗದಲ್ಲಿ ವಿಭಿನ್ನ ಸ್ಥಾನ ಗಳಿಸಿತು.

IPPB ನಲ್ಲಿ 348 ಹುದ್ದೆಗಳ ನೇಮಕಾತಿ ; ಇಲ್ಲಿದೆ ಸಂಪೂರ್ಣ ವಿವರ.!
ಚಿತ್ರರಂಗದ ಶೋಕದ ಅಲೆ :

ರಾಜು ತಾಳಿಕೋಟೆಯವರ (Raju Talikoti) ನಿಧನದ ಸುದ್ದಿ ತಿಳಿದ ಕೂಡಲೇ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಮತ್ತು ಹಾಸ್ಯ ಲೋಕಕ್ಕೆ ಇದು ದೊಡ್ಡ ನಷ್ಟವೆಂದು ಅವರು ಹೇಳಿದ್ದಾರೆ. ಅವರ ಅಂತಿಮ ವಿಧಿವಿಧಾನಗಳು ತಾಳಿಕೋಟಿ ನಗರದಲ್ಲಿ ನಡೆಯಲಿವೆ ಎಂದು ಕುಟುಂಬದವರು ತಿಳಿಸಿದ್ದಾರೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments