ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯಲ್ಲಿ ಅನುಮಾನಾಸ್ಪದ ವಸ್ತುವಿನಿಂದ ಸಂಭವಿಸಿದ ಭಾರೀ ಸ್ಫೋಟ (blast) ದಲ್ಲಿ 8 ವರ್ಷದ ಬಾಲಕ ಮುಬಾರಕ್ ಎಂಬ ಬಾಲಕ ದುರ್ಮರಣಕ್ಕೀಡಾಗಿದ್ದಾನೆ.
ಈ ದುರ್ಘಟನೆಯಲ್ಲಿ 6 ಮಂದಿಗೆ ಗಂಭೀರ ಗಾಯಗಳಾಗಿದ್ದು, ಇನ್ನೂ ಹಲವು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”
ಸ್ಪೋಟ (blast) :
ಸ್ಪೋಟ (blast) ದಲ್ಲಿ ಗಾಯಗೊಂಡವರು ಕಸ್ತೂರಮ್ಮ (35), ಸರಸಮ್ಮ (50), ಶಬೀರನಾ ಬಾನು (35), ಸುಬ್ರಮಣಿ (62), ಶೇಖ್ ನಜೀದ್ ಉಲ್ಲಾ (37) ಹಾಗೂ 8 ವರ್ಷದ ಫಾತಿಮಾ ಸೇರಿದ್ದಾರೆ. ಗಾಯಗೊಂಡವರನ್ನು ತಕ್ಷಣ ಸಂಜಯ್ ಗಾಂಧಿ ಆಸ್ಪತ್ರೆ ಹಾಗೂ ಜಯನಗರ ಆಸ್ಪತ್ರೆಗೆ ಸಾಗಿಸಲಾಗಿದೆ.
ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಈ ಸ್ಪೋಟ (blast) ದ ಘಟನೆ ಕಸ್ತೂರಿಯ ಮನೆಯಲ್ಲೇ ಸಂಭವಿಸಿದ್ದು, ಸ್ಫೋಟದ ತೀವ್ರತೆಯಿಂದ ಮೊದಲ ಮಹಡಿಯ ಗೋಡೆ ಹಾಗೂ ಛಾವಣಿ ಕುಸಿದಿದೆ. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!
ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಸಿಲಿಂಡರ್ ಸ್ಪೋಟ (blast) ದ ಸಾಧ್ಯತೆಯನ್ನು ಸೂಚಿಸಿದ್ದರೂ, ಸ್ಥಳೀಯರು ಸಿಲಿಂಡರ್ ಬ್ಲಾಸ್ಟ್ (blast) ಆಗಿರುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಿದ್ದಾರೆ. ಸ್ಫೋಟದ ಶಕ್ತಿಯಿಂದ ಹಲವರ ಕೈ, ತಲೆಗೆ ಗಂಭೀರ ಗಾಯಗಳಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪೊಲೀಸರು ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
Courtesy : TV9
Sandeepa-Virk : ಮನಿ ಲಾಂಡರಿಂಗ್ ಆರೋಪ : ಬ್ಯೂಟಿ ಇನ್‌ಫ್ಲುಯೆನ್ಸರ್ ಸಂದೀಪಾ ವಿರ್ಕ್ ಅರೆಸ್ಟ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಬ್ಯೂಟಿ ಇನ್‌ಫ್ಲುಯೆನ್ಸರ್ ಆಗಿ ಜನಪ್ರಿಯತೆ ಪಡೆದಿದ್ದ ಹಾಗೂ ಬ್ಯೂಟಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸಂದೀಪಾ ವಿರ್ಕ್ (Sandeepa-Virk) ಅವರನ್ನು ಎನ್ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ಬಂಧಿಸಿದೆ.
ತಮ್ಮ ಆಕರ್ಷಕ ಫೋಟೋಗಳು ಹಾಗೂ ಬ್ಯೂಟಿ ಸಲಹೆಗಳಿಂದ ಅಪಾರ ಫಾಲೋವರ್ಸ್ ಗಳಿಸಿದ್ದ ಸಂದೀಪಾ (Sandeepa), ಆನ್‌ಲೈನ್ ಮೂಲಕ ಬ್ಯೂಟಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು.
Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”
ಸಂದೀಪಾ ವಿರ್ಕ್ (Sandeepa-Virk) :
ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ, ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ಅನುಮೋದಿತ ಉತ್ಪನ್ನ ಎಂದು ಹೇಳಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ, ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಮೂಲಕ ಆಸ್ತಿ ಹೊಂದಿರುವುದಾಗಿ ಆರೋಪಿಸಲಾಗಿದೆ.
ಮನಿ ಲಾಂಡರಿಂಗ್ ಅನುಮಾನ ವ್ಯಕ್ತವಾದ ಬಳಿಕ, ಇಡಿ ಅಧಿಕಾರಿಗಳು ಸಂದೀಪಾ (Sandeepa) ವಿರ್ಕ್ ಅವರ ವೆಬ್‌ಸೈಟ್, ಹಣಕಾಸು ವ್ಯವಹಾರಗಳು ಹಾಗೂ ಉತ್ಪನ್ನ ಮಾರಾಟದ ದಾಖಲಾತಿಗಳ ಕುರಿತು ತನಿಖೆ ನಡೆಸಿದರು. ಸಂಗ್ರಹಿಸಿದ ಸಾಕ್ಷಿಗಳ ಆಧಾರದಲ್ಲಿ Sandeepa-Virk ಅವರನ್ನು ಬಂಧನ ಮಾಡಲಾಗಿದ್ದು, ಪ್ರಸ್ತುತ ಇಡಿ ಕಸ್ಟಡಿಯಲ್ಲಿ ವಿಚಾರಣೆ ನಡೆಯುತ್ತಿದೆ.
Wild boarಗಳ ಹಿಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ್ತಿಗೆ ಗಂಭೀರ ಗಾಯ : ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
ಇದೇ ವೇಳೆ, ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಹೊರಬಂದಿದೆ — ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಅಂಗಾರೈ ನಟರಾಜನ್ ಸೇತುರಾಮನ್ ಜೊತೆ ಸಂಪರ್ಕವಿರುವುದು ಪತ್ತೆಯಾಗಿದೆ. ಆದರೆ, ಸೇತುರಾಮನ್ ಅವರು ತಮ್ಮ ಮೇಲೆ ಇರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ಉತ್ಪನ್ನ ಮಾರಾಟದಲ್ಲಿ ವಂಚನೆ ಪ್ರಕರಣದಲ್ಲಿ, ನಾಳೆ ಸಂದೀಪಾ ವಿರ್ಕ್ (Sandeepa-Virk) ಅವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.
Courtesy : Suvarna New