Wednesday, February 5, 2025
HomeBelagavi NewsBelagavi : ಪ್ರತ್ಯೇಕ ಅಪ*ಘಾತ ; ತಹಶೀಲ್ದಾರ ಆಫೀಸ್ ಸಿಬ್ಬಂದಿ ಸೇರಿ ಮೂವರ ಸಾ*ವು.!
spot_img
spot_img
spot_img
spot_img

Belagavi : ಪ್ರತ್ಯೇಕ ಅಪ*ಘಾತ ; ತಹಶೀಲ್ದಾರ ಆಫೀಸ್ ಸಿಬ್ಬಂದಿ ಸೇರಿ ಮೂವರ ಸಾ*ವು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ (A car hit the lorry from behind) ಪರಿಣಾಮ ಕಾರಿನಲ್ಲಿದ್ದ ಸರ್ಕಾರಿ ನೌಕರ ಮೃತಪಟ್ಟ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಹಶೀಲ್ದಾರ ಕಚೇರಿಯ ನೌಕರ (Chikkodi Tehsildar Office Employee) ಅಮಿತ್ ರಾವ್ ಶಿಂಧೆ (35) ಅವರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Geaser ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಸ್ನಾನ ದೃಶ್ಯ ಸೆರೆ ಹಿಡಿದ ದುಷ್ಕರ್ಮಿ.!

ಅಪಘಾತದ ನಂತರ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಅಮಿತ್ ಅವರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಇನ್ನು ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕಿತ್ತೂರು ಸಮೀಪ ರವಿವಾರ ದಿನವಾದ ಇಂದು ಮತ್ತೊಂದು ಅಪಘಾತ ಸಂಭವಿಸಿದ್ದು, ಅದರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಇದನ್ನು ಓದಿ : ಹೋಟೆಲ್​ನಲ್ಲಿ​ ಥೈಲ್ಯಾಂಡ್ ಸುಂದರಿ ಕರೆಸಿ Hi-Tech ವೇ*ಶ್ಯಾವಾ*ಟಿಕೆ ದಂಧೆ.!

ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಅಂಗವಾಗಿ ನಂದಗಡ ರಾಯಣ್ಣನ ಸಮಾಧಿ ದರ್ಶನ ಪಡೆದು‌ ಮರಳುತ್ತಿದ್ದ ವೇಳೆ ಬೈಕ್ ಹೆದ್ದಾರಿ 48ರ ಬಳಿ ಮರಕ್ಕೆ ಡಿಕ್ಕಿ ಹೊಡೆದ (The bike hit a tree) ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಳೆ ಹುಬ್ಬಳ್ಳಿ ಈಶ್ವರ ನಗರದ ರಮೇಶ ಅಂದೆಪ್ಪ ಅಂಬಿಗೇರ (20) ಮತ್ತು ಎಸ್. ಎಂ. ಕೃಷ್ಣ ನಗರದ ಮದನ ಚಂದ್ರಕಾಂತ ಮೇಟಿ (20) ಈ ಅಪಘಾತದಲ್ಲಿ ಮೃತರಾಗಿದ್ದಾರೆ.

ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!

ಕಿತ್ತೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸಂದರ್ಭ ಈ‌ ಅಪಘಾತ ಸಂಭವಿಸಿದೆ.

ಎರಡು ಅಪಘಾತದ ಪ್ರಕರಣಗಳು ಕಿತ್ತೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಹಿಂದಿನ ಸುದ್ದಿ : ವಿಚ್ಛೇದನದ ಕೇಸ್ ನಲ್ಲಿ ಪುರುಷರು ಸಹ ಸಂತ್ರಸ್ತರು : ಹೈಕೋರ್ಟ್.

ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚೆಗೆ ವೈವಾಹಿಕ ವಿವಾದಗಳ ಪ್ರಕರಣಗಳಲ್ಲಿ (A case of matrimonial disputes) ಮಹಿಳೆಯರು ಹೆಚ್ಚಾಗಿ ಬಲಿಪಶುಗಳಾಗಿದ್ದರೂ, ಅಂತಹ ಪ್ರಕರಣಗಳಲ್ಲಿ ಪುರುಷರು ಸಹ ಸಂತ್ರಸ್ತರು. ಹೀಗಾಗಿ ಲಿಂಗ ಸಮಾನತೆಯ ಸಮಾಜ ಈಗಿನ ಅಗತ್ಯವಾಗಿದೆ (A gender egalitarian society is the need of the hour) ಎಂದು ಕರ್ನಾಟಕ High court ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು ಹೊರಡಿಸಿದ ಆದೇಶದಲ್ಲಿ ಈ ಬಗ್ಗೆ ತಿಳಿಸಲಾಗಿದೆ.

ಮಹಿಳೆಯೊಬ್ಬರು ತಮ್ಮ Divorce ಕುರಿತು ತಾವು ಹಾಜರಾಗಬೇಕಿರುವ ಕೋರ್ಟ್ ತಮ್ಮ ಮನೆಯಿಂದ 130 ಕಿಲೋಮೀಟರ್ ದೂರದಲ್ಲಿದೆ.

ಇದನ್ನು ಓದಿ : ಬೋರ್​​​ವೆಲ್​​ನಿಂದ ಆಕಾಶದೆತ್ತರಕ್ಕೆ ಚಿಮ್ಮಿದ ನೀರು ; Video ನೋಡಿ.!

ಹೀಗಾಗಿ ಪ್ರತಿ ಸಲವೂ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವರ್ಗಾವಣೆ ಅರ್ಜಿಯನ್ನು (Transfer application) ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ (Dismissed).

ಮಹಿಳೆ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ಪ್ರಕರಣದಲ್ಲಿ ಪ್ರತಿವಾದಿ ಆಕೆಯ ಪತಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿದರೆ, ಪತಿಗೆ ಇನ್ನಷ್ಟು ತೊಂದರೆಯಾಗುತ್ತೆ ಎಂದು ವಾದಿಸಿದ್ದು, ಇದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.

ಮಹಿಳೆಗೆ ಪುರುಷನಂತೆಯೇ ಸಮಾನ ಹಕ್ಕುಗಳಿವೆ. ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಪ್ರಾಥಮಿಕ ಬಲಿಪಶುಗಳು. ಆದರೆ ಪುರುಷರು ಸ್ತ್ರೀಯರ ಕ್ರೌರ್ಯದಿಂದ ಪ್ರಭಾವಿತರಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.

ಇದನ್ನು ಓದಿ : ಅಣ್ಣನ ಶವದ ಮುಂದೆ ಸಹೋದರಿಯ Reels ; ವಿಡಿಯೋ ವೈರಲ್.!

ಆದ್ದರಿಂದ, ಲಿಂಗ ಸಮಾನ ಸಮಾಜದ ಅವಶ್ಯಕತೆ ಇದೆ. ಆ ರೀತಿಯ ಸಮಾಜ ಲಿಂಗ ಅಥವಾ ಲಿಂಗದ ಆಧಾರದ ಮೇಲೆ ಕರ್ತವ್ಯಗಳನ್ನು ಬೇರ್ಪಡಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೈಕೋರ್ಟ್ ತಿಳಿಸಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!