ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral News“ಗ್ರಾಹಕರು Drunk ವಾಹನ ಚಲಾಯಿಸಿದ್ರೆ ಅದಕ್ಕೆ ಬಾರ್‌ಗಳೇ ಹೊಣೆ : ಪೊಲೀಸ್‌.”
spot_img
spot_img
spot_img

“ಗ್ರಾಹಕರು Drunk ವಾಹನ ಚಲಾಯಿಸಿದ್ರೆ ಅದಕ್ಕೆ ಬಾರ್‌ಗಳೇ ಹೊಣೆ : ಪೊಲೀಸ್‌.”

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್ : ಗ್ರಾಹಕರು ಮದ್ಯ ಸೇವಿಸಿದ (Drunk) ಬಳಿಕ ವಾಹನ ಚಲಾಯಿಸದಂತೆ ನೋಡಿಕೊಳ್ಳುವುದು ಈಗಿನಿಂದ ಬಾರ್ ಮಾಲೀಕರ ಜವಾಬ್ದಾರಿಯಾಗಿದೆ ಎಂದು ಗುರ್ಗಾಂವ್ ಪೊಲೀಸರು ತಿಳಿಸಿದ್ದಾರೆ.

ಹಿಗೊಂದು ಹೊಸ ನಿಯಮ ಗುರ್ಗಾಂವ್ ನಗರದಲ್ಲಿ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಅನ್ವಯವಾಗಲಿದೆ.

ಹೊಸ ನಿರ್ದೇಶನವು BNSS ಸೆಕ್ಷನ್ 168 ಅಡಿಯಲ್ಲಿ ಹೊರಡಿಸಲ್ಪಟ್ಟಿದ್ದು, ಮದ್ಯಪಾನ (Drunk) ದ ಬಳಿಕ‌ ವ್ಯಕ್ತಿ ವಾಹನ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದರೇ, ಆಗ ಗ್ರಾಹಕನ ಜೊತೆ ಆ ಬಾರ್ ಅಥವಾ ರೆಸ್ಟೋರೆಂಟ್ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುದು ಎಂದು ಎಚ್ಚರಿಸಲಾಗಿದೆ.

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮದ್ಯಪಾನ (Drunk) ಮಾಡಿ ವಾಹನ ಚಲಾಯಿಸುವ ಬಗ್ಗೆ ಆಯುಕ್ತರು ಹೇಳಿದ್ದೇನೆ?

ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅರೋರಾ ಅವರು ಈ ಕುರಿತು ದೃಢಪಡಿಸಿ, ನಗರಾದ್ಯಂತ ಎಲ್ಲ ಬಾರ್ ಹಾಗೂ ಪಬ್‌ಗಳಿಗೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದಿದ್ದಾರೆ. ಇದರ ಪ್ರಕಾರ, ಮದ್ಯ ಸೇವಿಸಿರುವ (Drunk) ಗ್ರಾಹಕರನ್ನು ನಿಗಾ ವಹಿಸಲು ಸಿಬ್ಬಂದಿಯನ್ನು ನೇಮಿಸಬೇಕು, ಅವಶ್ಯಕತೆ ಇದ್ದಲ್ಲಿ ಕ್ಯಾಬ್ ಅಥವಾ ವಿಶೇಷ ಚಾಲಕರ ವ್ಯವಸ್ಥೆ ಮಾಡಬೇಕು ಮತ್ತು ಮದ್ಯಪಾನ (Drunk) ಮಾಡಿದ ಗ್ರಾಹಕರು ಸ್ವತಃ ವಾಹನ ಚಲಾಯಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.

ಓರ್ವ ಪೊಲೀಸ್ ಅಧಿಕಾರಿ ಪ್ರಕಾರ, “ಮದ್ಯಪಾನ (Drunk) ಮಾಡಿದ ಗ್ರಾಹಕರ ಕುರಿತಾದ ಈ ನಿಯಮ ಪಾಲನೆ ಮಾಡಲು ವಿಫಲವಾದರೆ, ಆ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.” ಎಂದಿದ್ದಾರೆ.

Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!

ಈ ನಿರ್ಧಾರವು ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆದಲ್ಲಿ ಕೈಗೊಳ್ಳಲಾಗಿದೆ. ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 810 ಅಪಘಾತಗಳಲ್ಲಿ 333 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ಕ್ರಮದ ಉದ್ದೇಶ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಮದ್ಯಪಾನದಿಂದ ಉಂಟಾಗುವ ಅಜಾಗರೂಕ ಚಾಲನೆಯನ್ನು ತಡೆಯುವುದಾಗಿದೆ.

ಅದೇ ವೇಳೆ, ಈ ಕ್ರಮವು ನಿಯಮಿತ ಪೊಲೀಸ್ ತಪಾಸಣೆಯ ಅಗತ್ಯವನ್ನು ಕಡಿಮೆಗೊಳಿಸಲಿದೆ, ಏಕೆಂದರೆ ಹೊಣೆಗಾರಿಕೆ ಈಗ ಮದ್ಯ ಮಾರಾಟ ಮಾಡುವ ವ್ಯವಹಾರಗಳತ್ತ ವರ್ಗಾಯಿಸಲಾಗಿದೆ.

ಈ ಆದೇಶವನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಅವರು ಶನಿವಾರ ನಡೆದ ವಿಮರ್ಶಾ ಸಭೆಯಲ್ಲಿ ನೀಡಿದ್ದು, ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಸೂಚನೆಯ ಮುಖ್ಯ ಅಂಶಗಳು :
  • 🚫 ಮದ್ಯಪಾನ (Drunk) ಮಾಡಿ ವಾಹನ ಚಲಾಯಿಸಿದವರ ಜೊತೆಗೆ ಮದ್ಯ ಮಾರಿದ ಬಾರ್‌ಗಳ ಮೇಲೂ ಕ್ರಮ.
  • 🚖 ಹೆಚ್ಚು ಕುಡಿದ ಗ್ರಾಹಕರಿಗೆ ಬಾರ್‌ನವರೇ ಟ್ಯಾಕ್ಸಿ ಅಥವಾ ಸಾರಿಗೆ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು.
  • ⚠️ ಪಾರ್ಕಿಂಗ್ ಪ್ರದೇಶದಲ್ಲಿ “ಅಮಲಿನಲ್ಲಿ ಚಾಲನೆ ಅಪಾಯ” ಎಂಬ ಎಚ್ಚರಿಕೆ ಫಲಕ ಕಡ್ಡಾಯ.
  • 📜 ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 168ರ ಅಡಿಯಲ್ಲಿ ಬಾರ್‌ಗಳಿಗೆ ಪೊಲೀಸರ ನೋಟಿಸ್.

Courtesy : Times of India. 


KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನ.!

KKRTC

ಜನಸ್ಪಂದನ ನ್ಯೂಸ್‌, ನೌಕರಿ : ರಾಜ್ಯ ಸರ್ಕಾರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ವತಿಯಿಂದ ಹೊಸ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (KKRTC Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
KKRTC ಹುದ್ದೆಗಳ ವಿವರ :
  • 🔹 ಇಲಾಖೆ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC).
  • 🔹 ಒಟ್ಟು ಹುದ್ದೆಗಳು : 316.
  • 🔹 ಕೆಲಸದ ಸ್ಥಳ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು.
  • 🔹 ತಿಂಗಳಿಗೆ ಸಂಬಳ : ರೂ.18,660 ರಿಂದ ರೂ.42,800 ವರೆಗೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಹಾಯಕ ಲೆಕ್ಕಪತ್ರಗಾರರು ಹಾಗೂ ಆಡಳಿತ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕನ್ನಡಿಗರಿಗೆ ಪ್ರಾಧಾನ್ಯ ನೀಡಲಾಗಿದ್ದು, ಪುರುಷರು ಮತ್ತು ಮಹಿಳೆಯರು ಇಬ್ಬರೂ ಅರ್ಜಿ ಹಾಕಬಹುದು.

ಶೈಕ್ಷಣಿಕ ಅರ್ಹತೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ SSLC / PUC / ಪದವಿ / B.Com / BE ಅಥವಾ B.Tech ಪದವಿ ಪೂರ್ಣಗೊಳಿಸಿರಬೇಕು.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ವಯೋಮಿತಿ :
  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 38 ವರ್ಷ
  • ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
  • ಹಿಂದುಳಿದ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
ಆಯ್ಕೆ ವಿಧಾನ :

ಅಭ್ಯರ್ಥಿಗಳ ಆಯ್ಕೆ ದಾಖಲೆ ಪರಿಶೀಲನೆ, OMR ಆಧಾರಿತ ಲಿಖಿತ ಪರೀಕ್ಷೆ, ಮತ್ತು ಸಂದರ್ಶನದ ಆಧಾರದಲ್ಲಿ ನಡೆಯಲಿದೆ.

ಅರ್ಜಿ ಶುಲ್ಕ :
  • SC / ST / ಮಾಜಿ ಸೈನಿಕರು : ರೂ.500/-
  • ಸಾಮಾನ್ಯ / OBC / ಹಿಂದುಳಿದ ವರ್ಗ : ರೂ.750/-
  • ಪಾವತಿ ವಿಧಾನ : ಆನ್ಲೈನ್ ಮೂಲಕ.
ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆಯ ಪ್ರಾರಂಭಿಸಲು ದಿನಾಂಕ : 09-10-2025.
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 10-11-2025.
  • ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ : 11-11-2025.
ಅರ್ಜಿ ಸಲ್ಲಿಸುವ ವಿಧಾನ :
  1.  KKRTC ಅಧಿಕೃತ ವೆಬ್‌ಸೈಟ್ kkrtc.karnataka.gov.in ಗೆ ಭೇಟಿ ನೀಡಿ.
  2. ಹೊಸ ಖಾತೆ ರಚಿಸಿ ಅಥವಾ ಲಾಗಿನ್ ಮಾಡಿ.
  3. ಅಗತ್ಯವಿರುವ ವಿವರಗಳನ್ನು ಸರಿಯಾಗಿ ನಮೂದಿಸಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  4. ಅರ್ಜಿಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  5. ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ಕಾಪಿ ಸಂಗ್ರಹಿಸಿ.
 KKRTC ಮುಖ್ಯ ಲಿಂಕುಗಳು :
ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮುಖ್ಯ ಮಾಹಿತಿ :

ಈ ನೇಮಕಾತಿ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರದ ನಿಯಮಾನುಸಾರವಾಗಿದ್ದು, ಕನ್ನಡ ಭಾಷಾ ಜ್ಞಾನ ಕಡ್ಡಾಯ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸರ್ಕಾರದ 7ನೇ ವೇತನ ಶ್ರೇಣಿ (CPC) ಪ್ರಕಾರ ವೇತನ ನೀಡಲಾಗುತ್ತದೆ.

ಸೂಚನೆ :

ಈ ಮಾಹಿತಿ ಸಾರ್ವಜನಿಕ ಪ್ರಕಟಣೆಯ ಆಧಾರದ ಮೇಲೆ ನೀಡಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯ. ಯಾವುದೇ ತಪ್ಪು ಮಾಹಿತಿಗೆ Janaspandhan News ಹೊಣೆಗಾರರಾಗುವುದಿಲ್ಲ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments