ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯೊಬ್ಬರಿಂದ ಎದುರಾದ ಅತಿರೇಕದ ಪ್ರೇಮ ಕಾಟ ಇದೀಗ ಗಂಭೀರ ಕಾನೂನು ಪ್ರಕರಣವಾಗಿ ಮಾರ್ಪಟ್ಟಿದೆ. ನಿರಂತರವಾಗಿ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದು, ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಿಳೆ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಇನ್ಸ್‌ಪೆಕ್ಟರ್‌ರಿಗೆ ಪದೇಪದೇ ಫೋನ್ ಕರೆ ಮಾಡಿ, ಸಂದೇಶಗಳನ್ನು ಕಳುಹಿಸಿ “ನನ್ನನ್ನು ಪ್ರೀತಿಸಬೇಕು” ಎಂದು ಮಾನಸಿಕ ಒತ್ತಡ ಹಾಕುತ್ತಿದ್ದಳು ಎನ್ನಲಾಗಿದೆ. ‘‘Chinni love u, u love m’’ ಎಂದು ರಕ್ತದಲ್ಲಿ ಬರೆದ ಪತ್ರವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಮತ್ತೊಂದು ಗಂಭೀರ ಆರೋಪವಾಗಿದೆ.
ಇದನ್ನು ಓದಿ : ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.
ತನ್ನನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೆಂದು ಹೇಳಿಕೊಂಡಿದ್ದ ಮಹಿಳೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಪರಿಚಯವಿದೆ ಎಂದಿದ್ದಾಳೆ. ಜೊತೆಗೆ ಕೆಲ ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಕಳುಹಿಸಿ, ಪ್ರೀತಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಇನ್ಸ್‌ಪೆಕ್ಟರ್ ಮೇಲೆ ಒತ್ತಡ ಹೇರುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಠಾಣೆಗೇ ಹೂಗುಚ್ಛ, ಕಜ್ಜಾಯ ಡಬ್ಬಿ ಕಳುಹಿಸಿದ ಮಹಿಳೆ :
ಮಹಿಳೆಯ ಕಾಟ ಇಷ್ಟರ ಮಟ್ಟಿಗೆ ಹೋಗಿತ್ತು ಎನ್ನಲಾಗಿದ್ದು, ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದ ಸಂದರ್ಭದಲ್ಲೂ ಪೊಲೀಸ್ ಠಾಣೆಗೆ ಹೂಗುಚ್ಛ ಹಾಗೂ ಕಜ್ಜಾಯದ ಡಬ್ಬಿಗಳನ್ನು ತಂದು ಇಟ್ಟು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಕುಡಿದ ಅಮಲಿನಲ್ಲಿ ರಾಪಿಡೋದಿಂದ ಕೆಳಗೆ ಬಿದ್ದ Young woman ; ವಿಡಿಯೋ ವೈರಲ್.
ಒಂದೇ ಅಲ್ಲದೆ, 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ಇನ್ಸ್‌ಪೆಕ್ಟರ್‌ಗೆ ನಿರಂತರವಾಗಿ ಕರೆ ಮಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಎಲ್ಲಾ ಸಂಖ್ಯೆಗಳನ್ನೂ ಬ್ಲಾಕ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ರಕ್ತದಲ್ಲಿ ಬರೆದ ಪ್ರೇಮ ಪತ್ರ, ಆತ್ಮಹತ್ಯೆ ಬೆದರಿಕೆ :
ಇಷ್ಟಕ್ಕೂ ನಿಲ್ಲದ ಮಹಿಳೆ, ಪ್ರೇಮ ಪತ್ರ (Love letter) ಜೊತೆಗೆ ಮಾತ್ರೆಗಳನ್ನೂ ಕಳುಹಿಸಿದ್ದಾಳೆ ಎನ್ನಲಾಗಿದೆ. “ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನೀವೇ ಕಾರಣ” ಎಂದು ಬರೆದು, ರಕ್ತದಲ್ಲಿ ಬರೆಯಲಾಗಿದೆ ಎನ್ನಲಾದ ಪತ್ರ (ಪ್ರೇಮ ಪತ್ರ) ವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.
ಇದನ್ನು ಓದಿ : ಇತರೇ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗೃಹ ಸಚಿವರ ಕಚೇರಿಯಿಂದ ಕರೆ?
ಈ ಮಧ್ಯೆ, ಮಹಿಳೆ ದೂರು ದಾಖಲಿಸಲು ಬಂದಿದ್ದಾಳೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಸಚಿವರ ಕಚೇರಿಯಿಂದಲೂ ಠಾಣೆಗೆ ಕರೆ ಬಂದಿತ್ತು ಎನ್ನಲಾಗಿದೆ. ಆದರೆ ಮಹಿಳೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ಇನ್ಸ್‌ಪೆಕ್ಟರ್ ಸತೀಶ್ ಸ್ಪಷ್ಟಪಡಿಸಿದ್ದಾರೆ.
ಕಾನೂನು ಕ್ರಮಕ್ಕೆ ಮೊರೆ ಹೋದ ಇನ್ಸ್‌ಪೆಕ್ಟರ್ :
ನಿರಂತರ ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿ ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಸತೀಶ್ ಕೊನೆಗೂ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಹಿಳೆ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗಿದೆ.
ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.
ಪ್ರಕರಣದ ಹಿನ್ನೆಲೆ, ಮಹಿಳೆಯ ವರ್ತನೆಯ ನಿಜಾಂಶ ಹಾಗೂ ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Courtesy : TV9 Kannada
ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ






