Saturday, July 27, 2024
spot_img
spot_img
spot_img
spot_img
spot_img
spot_img

ಮತಗಟ್ಟೆಯಲ್ಲಿ BJP ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ.!

spot_img

ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನಗರದ ಕಪಿತಾನಿಯೊ ಮತಗಟ್ಟೆಯಲ್ಲಿ (polling booth) ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತ ಚಲಾಯಿಸಿ (vote) ಹೊರಗೆ ಬಂದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

Health : ಒಂದು ತಿಂಗಳು ಅನ್ನ ಸೇವಿಸುವುದನ್ನು ಬಿಟ್ಟರೆ ಏನಾಗುವುದು.?

ಪದ್ಮರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮಾಧ್ಯಮದವರನ್ನು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಸಂದೀಪ್ ಎಕ್ಕೂರು ಎಂಬಾತ ಎಷ್ಟು ಹೊತ್ತು ಪ್ರತಿಕ್ರಿಯೆ ನೀಡ್ತೀರಾ ಅಂತ ಪ್ರಶ್ನಿಸಿದ್ದಾನೆ. ಈ ವೇಳೆ ಆತನನ್ನು ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಪೊಲೀಸರು ತಳ್ಳಿಕೊಂಡು ಸ್ವಲ್ಪ ದೂರ ಹೋಗಿದ್ದಾರೆ.

ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ (inappropriately) ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಈ ಜನಾಂಗದಲ್ಲಿ ಅಣ್ಣನನ್ನೇ ಮದ್ವೆ ಆಗ್ತಾಳೆ ತಂಗಿ ; ಇಲ್ಲಾಂದ್ರೆ ವಿಧಿಸ್ತಾರೆ ಕಠಿಣ ಶಿಕ್ಷೆ.!

ಪೊಲೀಸರು ಅಲ್ಲಿಂದ ಹಿಂದುರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮದ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಸ್ಥಳದಲ್ಲಿ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಹೀಗಾಗಿ ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img