Sunday, September 8, 2024
spot_img
spot_img
spot_img
spot_img
spot_img
spot_img
spot_img

ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಿಳೆಯರಿಬ್ಬರನ್ನು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜೀವಂತವಾಗಿ ಸಮಾಧಿ ಮಾಡಲು ಮುಂದಾಗಿರುವಂತ ಹೃದಯ ವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ರೇವಾ ಜಿಲ್ಲೆಯ ಹಿನೌಟಾ ಗ್ರಾಮದ ನಿವಾಸಿಗಳಾದ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ದುಷ್ಕರ್ಮಿಗಳು ಮುಂದಾಗಿದ್ದರು. ಸದ್ಯ ಈ ಈಬ್ಬರಲ್ಲಿ ಓರ್ವ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಸೀರೆಯುಟ್ಟ ನಾರಿಯಿಂದ ‘ತೌಬಾ ತೌಬಾ’ ಸಾಂಗ್ ಗೆ ಸಖತ್ ಸ್ಟೆಪ್ಸ್ ; Video ಪುಲ್ ವೈರಲ್..!

ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು ಇದು ಮಹಿಳೆಯರ ಜಮೀನಿನಲ್ಲಿ ಹಾದು ಹೋಗುತ್ತದೆ. ಹೀಗಾಗಿ ಇದಕ್ಕೆ ಮಹಿಳೆಯರು ಮಣ್ಣು ಹಾಕದಂತೆ ಬೆಂಜ್​ ಲಾರಿಯನ್ನು ತಡೆದಿದ್ದಾರೆ. ಅಲ್ಲೇ ಇದ್ದ ಪ್ರಬಲ ವ್ಯಕ್ತಿಗಳು ಇವರನ್ನು ಅಲ್ಲಿಂದ ಕಳುಹಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ.

ಆದರೆ ಇದ್ಯಾವುದಕ್ಕೂ ಮಣಿಯದ ಮಹಿಳೆಯರ ಮೇಲೆ ಮಣ್ಣು ಸುರಿಯುವಂತೆ ಲಾರಿ ಡ್ರೈವರ್​ಗೆ ದುಷ್ಕರ್ಮಿಗಳು ಹೇಳಿದ್ದಾರೆ. ಅವರು ಹೇಳಿದಂತೆ ಲಾರಿಯಲ್ಲಿದ್ದ ಜಲ್ಲಿಕಲ್ಲು ಮಿಶ್ರಿತ ಮಣ್ಣನ್ನು ಮಹಿಳೆಯರ ಮೇಲೆ ಸುರಿದು ಜೀವಂತ ಸಮಾಧಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Health : ಹೆಚ್ಚು ನೀರು ಕುಡಿದರೆ ಈ ಸಮಸ್ಯೆಗಳು ನಿಶ್ಚಿತ.!

ಆದರೆ ಈ ಮಾಹಿತಿ ತಿಳಿಯುತ್ತಿದ್ದಂತೆ ಜಮೀನಿಗೆ ಓಡಿ ಬಂದ ಗ್ರಾಮಸ್ಥರು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಇನ್ನು ಓರ್ವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಈ ಸಂಬಂಧ ಮಂಗಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊಲೆ ಯತ್ನದಡಿ ಕೇಸ್​ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img