Saturday, July 13, 2024
spot_img
spot_img
spot_img
spot_img
spot_img
spot_img

Prostitution : ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ ; ಇಬ್ಬರು ಯುವತಿಯರ ರಕ್ಷಣೆ.!

spot_img

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ಅಡ್ಡೆಯ ಮೇಲೆ ಸಿಸಿಬಿ ಹಾಗೂ ವಿಜಯನಗರ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.

ವಿಜಯನಗರದ ಟ್ಯಾಂಕ್‌ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕಾರ್ಮಿಕನಿಗೆ ಕಚ್ಚಿದ ಹಾವು : ಮರಳಿ ಹಾವಿಗೆ ಕಚ್ಚಿದ ಕಾರ್ಮಿಕ ; ಕಚ್ಚಾಟದಲ್ಲಿ ಗೆದ್ದರ್ಯಾರು, ಸೋತವರ್ಯಾರು.?

ಈ ವೇಳೆ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿದ, ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ರಕ್ಷಿಸಲಾದ ಯುವತಿಯರ ಪೈಕಿ ಒಬ್ಬರು ಜಾರ್ಖಂಡ್‌ ಮೂಲದವರಾದರೇ, ಮತ್ತೊಬ್ಬರು ಹುಣಸೂರಿನವರು ಎಂದು ಹೇಳಲಾಗಿದೆ.

ಇದನ್ನು ಓದಿ : ನಿಮಗಿದು ಗೊತ್ತೇ : ಮುರಿದ ಮೂಳೆಯನ್ನೇ ಜೋಡಿಸುತ್ತೇ ಈ ಸಸ್ಯ ; ಬನ್ನಿ ಇದರ ಉಪಯೋಗ ತಿಳಿಯೋಣ.!

ವೇಶ್ಯವಾಟಿಕೆ ನಡೆಯುತ್ತಿರುವ ಸಂಬಂಧ ಖಚಿತ ಮಾಹಿತಿ ಮೇರೆಗೆ ಹೋಟೆಲ್‌ ಮೇಲೆ ದಾಳಿ ಮಾಡಿದ ಸಿಸಿಬಿ ಹಾಗೂ ವಿಜಯನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯುವತಿಯರನ್ನು ರಕ್ಷಿಸಿದ್ದಾರೆ.

ವೇಶ್ಯವಾಟಿಕೆ ಸಂಬಂಧ ಆರು ತಿಂಗಳ ಹಿಂದೆ ಇದೇ ಹೋಟೆಲ್‌ ಮೇಲೆ ದಾಳಿ ಮಾಡಿದ್ದ ಪೊಲೀಸರು ಖಡಕ್‌ ಎಚ್ಚರಿಕೆ ನೀಡಿದ್ದರು. ಹಾಗಿದ್ದರೂ ಅವರು ಈ ದಂಧೆಯನ್ನು ಮುಂದುವರೆಸಿದ್ದರು ಎನ್ನಲಾಗಿದೆ.

spot_img
spot_img
- Advertisment -spot_img