Tuesday, October 22, 2024
spot_img
spot_img
spot_img
spot_img
spot_img
spot_img
spot_img

ಗ್ರೂಪ್ – C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.08) ಕೊನೆಯ ದಿನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ನೌಕರಿ : ಯುವಕರಿಗೆ ಒಂದು ಸಿಹಿ ಸುದ್ದಿ, ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ 1,526 ಗ್ರೂಪ್ ಸಿ ಹುದ್ದೆಗಳಾದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ & ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಹಾಕಬಹುದು.

ಈ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇತರೆ ವಿವರಗಳನ್ನು ನಾವಿಲ್ಲಿ ಕೊಟ್ಟಿದ್ದೇವೆ.

ಇದನ್ನು ಓದಿ : Video : ರೀಲ್ಸ್‌ಗಾಗಿ ಬೈಕ್ ಸಮೇತ ಸಮುದ್ರದ ನೀರಿಗಿಳಿದ ಯುವಕ ; ಇಂಥಾ ದುಸ್ಸಾಹಸಕ್ಕೆ ಕೈಹಾಕಬೇಡಿ ಅಂದ ನೆಟ್ಟಿಗರು.

ಹುದ್ದೆಗಳ ವಿವರ :
* ಸಬ್ ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್, ವಾರೆಂಟ್ ಆಫೀಸರ್ ಮತ್ತು ಪರ್ಸನಲ್ ಅಸಿಸ್ಟೆಂಟ್) :

ಪಡೆಗಳು ಹುದ್ದೆಗಳ ಸಂಖ್ಯೆ
CRPF 17
BSF 21
ITBP 56
CISF 146
SSB 03

 

* ಮುಖ್ಯ ಪೇದೆ (ಸಚಿವಾಲಯ ಮತ್ತು ಕ್ಲರ್ಕ್) :

ಪಡೆಗಳು ಹುದ್ದೆಗಳ ಸಂಖ್ಯೆ
CRPF 282
BSF 302
ITBP 163
CISF 496
SSB 05
AR 35

 

ವೇತನ ಶ್ರೇಣಿ :
* ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ : ರೂ.25,500 – ರೂ.81,100 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

* ಹೆಡ್ ಕಾನ್ಸ್ಟೇಬಲ್ : ವೇತನ ಶ್ರೇಣಿ: ರೂ.29,200 – ರೂ.92,300 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಶೈಕ್ಷಣಿಕ ಅರ್ಹತೆಗಳು :
ವಿದ್ಯಾರ್ಹತೆ ಕುರಿತು ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಶುಲ್ಕ :
* ಸಾಮಾನ್ಯ/OBC/EWS ಅರ್ಹತಾ ಅಭ್ಯರ್ಥಿಗಳಿಗೆ : ರೂ. 100/-
* ಪ.ಜಾ/ ಪಪಂ/ ಅಂಗವಿಕಲ/ ಮಾಜಿ ಸೈನಿಕ/ ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿರುವುದಿಲ್ಲ.
(ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್‌ಲೈನ್ ಮುಖಾಂತರ ಪಾವತಿ ಮಾಡಬಹುದು.)

ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಮತ್ತು ಗರಿಷ್ಠ 25 ವರ್ಷ.

ವಯೋಮಿತಿ ಸಡಿಲಿಕೆ :
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ : 05 ವರ್ಷ.
* ಇತರೆ ಹಿಂದೂಳಿದ ವರ್ಗ : 03 ವರ್ಷ.

ಆಯ್ಕೆವಿಧಾನ :
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ

ಅರ್ಜಿ ಹಾಕುವ ವಿಧಾನ :
ಆನ್‌ಲೈನ್ ಮೂಲಕ. ಹೆಚ್ಚಿನ ಮಾಹಿತಿಗಳು ಅಧಿಕೃತ ವೆಬ್ ಸೈಟ್ www.rectt.bsf.gov.in ನಲ್ಲಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇದನ್ನು ಓದಿ : ಕಾರ್ಮಿಕನಿಗೆ ಕಚ್ಚಿದ ಹಾವು : ಮರಳಿ ಹಾವಿಗೆ ಕಚ್ಚಿದ ಕಾರ್ಮಿಕ ; ಕಚ್ಚಾಟದಲ್ಲಿ ಗೆದ್ದರ್ಯಾರು, ಸೋತವರ್ಯಾರು.?

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 09, 2024.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 08, 2024 (ನಾಳೆಯೇ).
* ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜುಲೈ 08, 2024.

ಪ್ರಮುಖ ಲಿಂಕುಗಳು :
* ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ.
* ವೆಬ್‌ಸೈಟ್‌ : ಇಲ್ಲಿ ಕ್ಲಿಕ್ ಮಾಡಿ.

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img