Thursday, April 25, 2024
spot_img
spot_img
spot_img
spot_img
spot_img
spot_img

ಬೆಳಗಾವಿ : ಭೀ*ಕರ ರಸ್ತೆ ಅ*ಪಘಾ*ತದಲ್ಲಿ ASI ಸಾ*ವು ; PSI ಸಸ್ಪೆಂಡ್.!

spot_img

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಯರಗಟ್ಟಿ (yaragatti) ಪಟ್ಟಣದ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಎಎಸ್ಐ ಸಾವಿಗೀಡಾದ ಘಟನೆ ನಡೆದಿದೆ.

ಮುರಗೋಡ ಠಾಣೆಯ ಎಎಸ್‌ಐ ವಿಜಯಕಾಂತ ಮಿಕಲಿ (48) ಅವರು ಅಪಘಾತದಲ್ಲಿ (accident) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೆಲ್ಮೆಟ್ ಧರಿಸದ ಹಿನ್ನೆಲೆ ಅವರು ಅಪಘಾತಕ್ಕೆ ಬಲಿಯಾಗಿದ್ದಾರೆ.

ಇದನ್ನು ಓದಿ : ಕ್ಲಾಸ್‌ರೂಮ್‌ನಲ್ಲಿಯೇ ‘ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ ಶಿಕ್ಷಕಿ : ವಿಡಿಯೋ Viral..!

ಇನ್ನೂ ಘಟನೆಗೆ ಸಂಬಂಧಿಸಿದಂತೆ ದೊಡವಾಡ ಠಾಣೆ ಪಿಎಸ್‌ಐ ನಂದೀಶರನ್ನು ಅಮಾನತು ಮಾಡಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.

ಮುರಗೋಡ ಠಾಣೆಯಿಂದ ಯರಗಟ್ಟಿ ಪಟ್ಟಣಕ್ಕೆ (Muragod to Yaragatti) ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

ಎದುರಿನಿಂದ ಬರುತ್ತಿದ್ದ ವಾಹನದ ಹೆಡ್ ಲೈಟ್ ನಿಂದ ಹೈಫೋಕಸ್‌ನಿಂದಾಗಿ ರಸ್ತೆ ಕಾಣದೇ ಬೈಕ್ ರಸ್ತೆ ಡಿವೈಡರ್‍‌ ಗೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಎಎಸ್‌ಐ ವಿಜಯಕಾಂತ ಮಿಕಲಿ ಮೃತಪಟ್ಟಿದ್ದಾರೆ.

ಇದನ್ನು ಓದಿ : ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪಿಎಸ್ಐ.!

ಇನ್ನೂ ಬೆಳಗಾವಿ ಎಸ್ಪಿ ಎಲ್ಲ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕಾರಣಕ್ಕೆ ದೊಡವಾಡ ಠಾಣೆ ಪಿಎಸ್‌ಐ ನಂದೀಶ ಅಮಾನತು ಮಾಡಿ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.

ಯರಗಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

spot_img
spot_img
spot_img
- Advertisment -spot_img