Thursday, April 25, 2024
spot_img
spot_img
spot_img
spot_img
spot_img
spot_img

ಕ್ಲಾಸ್‌ರೂಮ್‌ನಲ್ಲಿಯೇ ‘ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ ಶಿಕ್ಷಕಿ : ವಿಡಿಯೋ Viral..!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲಾ ಶಿಕ್ಷಕಿಯ ವಿಡಿಯೋವೊಂದು (Teacher video) ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಐಟಂ ಸಾಂಗ್ ‘ಕಜ್ರಾ ರೇ’ ಹಾಡಿಗೆ ಶಿಕ್ಷಕಿ ತರಗತಿಯೊಳಗೆ ನೃತ್ಯ ಮಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿರುವ ದೃಶ್ಯ :

ವಿಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯ ಹುಟ್ಟುಹಬ್ಬವನ್ನು (birthday) ಶಾಲಾ ಕೊಠಡಿಯಲ್ಲಿ ಆಚರಿಸಿದ ರೀತಿ ಕಾಣಿಸುತ್ತಿದೆ. ಹೇಗೆಂದರೆ ‘ಜನ್ಮದಿನದ ಶುಭಾಶಯಗಳು ರಶ್ಮಿ ಮೇಡಂ’ ಎಂದು ಹಿಂದೆ ಹಸಿರು ಬೋರ್ಡ್ ಮೇಲೆ ಬರೆಯಲಾಗಿದೆ.

A/C : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ.?

ಶಿಕ್ಷಕಿ ತನ್ನ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ. ಅವರ ವಿದ್ಯಾರ್ಥಿಗಳು ಕೂಡ ಅವರನ್ನು ಬೆಂಬಲಿಸಿದ್ದಾರೆ (support).

ಬಳಿಕ ಶಿಕ್ಷಕಿ ನೃತ್ಯ (dance) ಮಾಡಲು ಪ್ರಾರಂಭಿಸಿದ ತಕ್ಷಣ, ಒಬ್ಬ ಹುಡುಗ ಆಕೆಯನ್ನು ಬೆಂಬಲಿಸಿ, ನಂತರ ಕೆಂಪು ಸ್ಕಾರ್ಫ್ ಅನ್ನು ಎಸೆಯುತ್ತಾನೆ. ಅವರ ಇಬ್ಬರು ವಿದ್ಯಾರ್ಥಿಗಳು ಸಹ ಶಿಕ್ಷಕಿಯೊಂದಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

yeazlas ಹ್ಯಾಂಡಲ್‌ನೊಂದಿಗೆ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ‘ತರಗತಿಯೊಳಗೆ ಶಿಕ್ಷಕಿ ಮಕ್ಕಳೊಂದಿಗೆ ಐಟಂ ಹಾಡುಗಳಲ್ಲಿ (item song) ನೃತ್ಯ ಮಾಡುವ ಇಂತಹ ದಿನವನ್ನು ನಾವು ನೋಡಿರಲಿಲ್ಲ’ ಎಂದು ಶೀರ್ಷಿಕೆ ನೀಡಲಾಗಿದೆ.

ಬಾಯಾರಿಕೆಯಾಗದಿದ್ರೂ ನೀರು ಕುಡಿತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಇದುವರೆಗೆ 80 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಹಲವು ಕಮೆಂಟ್ಸ್’ಗಳು ಬಂದಿವೆ.

ಒಂದು ಕಾಲದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಾದರಿಯಾಗಿದ್ದರು (model). ಆದರೆ ಇಂದು ಅವರೇ ಈ ರೀತಿ ಆಗಿದ್ದರೆ, ವಿದ್ಯಾರ್ಥಿಗಳೂ ಅವರ ಮಾತನ್ನು ಕೇಳುವುದು ಸಹಜ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

spot_img
spot_img
spot_img
- Advertisment -spot_img