Saturday, July 27, 2024
spot_img
spot_img
spot_img
spot_img
spot_img
spot_img

ಹೆಣ್ಣು ಮಕ್ಕಳ ತಂದೆ ತಾಯಿಯರಿಗೆ ಬಂಪರ್‌ ಸುದ್ದಿ ; ರೂ.2 ಲಕ್ಷ ಯೋಜನೆಗೆ ಕೂಡಲೇ ಅಪ್ಲೈ ಮಾಡಿ.!

spot_img

ಜನಸ್ಪಂದನ ನ್ಯೂಸ್ಬೆಂಗಳೂರು : ರಾಜ್ಯದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿ ಆಗಬೇಕು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಂಥ ಯೋಜನೆಗಳಲ್ಲಿ ಒಂದು ಭಾಗ್ಯಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯನ್ನು ನಿಮಗೆ ಹೆಣ್ಣುಮಗು ಹುಟ್ಟಿದ ತಕ್ಷಣವೇ ಮಾಡಿಸಬಹುದು.

ಮಗು ಹುಟ್ಟಿದ ಬಳಿಕ ಮಗುವಿಗೆ 50 ಸಾವಿರ ರೂಪಾಯಿಯ ಬಾಂಡ್ ಕೊಡಲಾಗುತ್ತದೆ. ಹೀಗೆ ಪ್ರತಿ ಹೆಣ್ಣು ಮಗುವಿಗೆ 21 ವರ್ಷಗಳು ತುಂಬಿದ ನಂತರದಲ್ಲಿ ಅ ಮಗುವಿಗೆ 2 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ. ಇದರಿಂದ ವಿವಿಧ ಹಂತದಲ್ಲಿ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳ ಬಹುದಾಗಿದೆ. ಮಗುವಿನ ಶಿಕ್ಷಣಕ್ಕೆ ಹಣ ಕೊಡಲಾಗುತ್ತದೆ.

ಲೋಕಸಭಾ ಚುನಾವಣೆ​ : ಇಲ್ಲಿದೆ ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ 16 ಜನರ ಶಾರ್ಟ್ ಲಿಸ್ಟ್.?

6ನೇ ತರಗತಿಯನ್ನು ಓದುತ್ತಿರುವ ಮಗುವಿಗೆ ಶಾಲೆಗೆ ಸೇರಿಸಲು 3000 ರೂ, ಮತ್ತು 8ನೇ ತರಗತಿ ಮಗುವಿಗೆ 5000, 10ನೇ ತರಗತಿಯನ್ನು ಮಗುವಿಗೆ 7000 ರೂ., 12ನೇ ತರಗತಿ ವಿದ್ಯಾರ್ಥಿನಿಗೆ 8 ಸಾವಿರ. ಒಟ್ಟಾರೆಯಾಗಿ ಶಿಕ್ಷಣಕ್ಕೆ 23,000ರೂ. ಸಿಗುತ್ತದೆ.

ಹೆಣ್ಣು ಮಗುವು ಚೆನ್ನಾಗಿ ಓದಿ ಅಭಿವೃದ್ಧಿಯಾಗಬೇಕು ಹಾಗೂ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಹೆಣ್ಣು ಮಗುವು ತಂದೆ ತಾಯಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಈ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ.. ಹೆಣ್ಣು ಮಗು ಹುಟ್ಟಿದ ಬಳಿಕ ಆಕೆಗೆ 21 ವರ್ಷ ಆದಾಗ ಈ ಬಾಂಡ್ ಮೆಚ್ಯುರ್ ಆಗುತ್ತದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ ; ಪ್ರೊಪೆಸರ್ ಸೇರಿ ಐವರು ಅರೆಸ್ಟ್.!

* ಅರ್ಜಿ ಹಾಕುವವರು ಭಾರತದ ನಾಗರೀಕರೆ ಆಗಿರಬೇಕು.

* ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.

* ನಿಮ್ಮ ಹೆಣ್ಣುಮಗುವಿಗೆ 18 ವರ್ಷ ಆಗುವುದಕ್ಕಿಂತ ಮೊದಲು ಮದುವೆ ಆಗಬಾರದು.

* ಹೆಣ್ಣುಮಗು ಹುಟ್ಟಿದಾಗ ಅಂಗನವಾಡಿ ಕೇಂದ್ರಕ್ಕೆ ಬಂದು ರಿಜಿಸ್ಟರ್ ಮಾಡಿಸಬೇಕು.

* 2006 ಮಾರ್ಚ್ 31ರ ಬಳಿಕ ಹುಟ್ಟಿರುವ ರಾಜ್ಯಾದ ಎಲ್ಲಾ ಹೆಣ್ಣುಮಕ್ಕಳು ಈ ಯೋಜನೆಯ ಸೌಲಭ್ಯ   ಪಡೆಯಬಹುದು.

* ಒಂದು ಫ್ಯಾಮಿಲಿಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಸಿಗುತ್ತದೆ.

* ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್.

* ಅಡ್ರೆಸ್ ಪ್ರೂಫ್.

* ಕ್ಯಾಸ್ಟ್ ಸರ್ಟಿಫಿಕೇಟ್.

* ಇನ್ಕಮ್ ಸರ್ಟಿಫಿಕೇಟ್.

* ತಂದೆ ತಾಯಿಯ ಪಾಸ್ ಪೋರ್ಟ್ ಸೈಜ್ ಫೋಟೋ.

* ಹೆಣ್ಣುಮಗುವಿನ ಬರ್ತ್ ಸರ್ಟಿಫಿಕೇಟ್.

* ಫೋನ್ ನಂಬರ್.

* ಬ್ಯಾಂಕ್ ಪಾಸ್ ಬುಕ್ ಕಾಪಿ. (ಎಜೇನ್ಸಿಸ್)

spot_img
spot_img
- Advertisment -spot_img