Friday, September 20, 2024
spot_img
spot_img
spot_img
spot_img
spot_img
spot_img
spot_img

ವರದಿಗಾರ್ತಿಯನ್ನು ಅಸಭ್ಯವಾಗಿ ಮುಟ್ಟಿ ಕಿರುಕುಳ ನೀಡಿದ ರೋಬೋಟ್ ; Video viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಶದ ಪ್ರಗತಿಯನ್ನ ಕೃತಕ ಬುದ್ಧಿಮತ್ತೆ (Artificial intelligence) ಕ್ಷೇತ್ರದಲ್ಲಿ ಪ್ರದರ್ಶಿಸಲು ಸೌದಿ ಅರೇಬಿಯಾದಲ್ಲಿ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ.

ಇದಕ್ಕೆ ಆಯಂಡ್ರಾಯ್ಡ್‌ ಮೊಹಮ್ಮದ್‌ ಎಂದು ಕೂಡ ಹೆಸರಿಡಲಾಗಿದೆ. ಇದು ದೇಶದ ಮೊದಲ ರೋಬೊ (Country’s first robot) ಆಗಿದ್ದು, ಜನರ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಕೊಡುಗೆ ; ಅರ್ಜಿ ಸಲ್ಲಿಸಿದವರಿಗೆ 20,000 ರೂ.

ಮುಹಮ್ಮದ್ ಎಂಬ ರೋಬೋಟ್’ನ್ನು ಸಾರ್ವಜನಿಕ (public) ವೀಕ್ಷಣೆಗಂತಾ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಳಿಸಲಾಯಿತು.

ಈ ವೇಳೆ ಆಲ್‌ ಅರೇಬಿಯಾ ನ್ಯೂಸ್‌ ಚಾನೆಲ್‌ನ ವರದಿಗಾರ್ತಿಯಾದ (Reporter) ರಾವಿಯಾ ಅಲ್‌ ಖಸಾಮಿ ಅವರು ರೋಬೊದ ಬಳಿ ನಿಂತು, ಅದರ ಮಹತ್ವ, ಕಾರ್ಯನಿರ್ವಹಣೆ ಸೇರಿ ಹಲವು ವಿಷಯಗಳನ್ನು ವೀಕ್ಷಕರಿಗೆ ವಿವರಿಸುತ್ತಿದ್ದರು.

ಇದೇ ವೇಳೆ, ರೋಬೊ ಸುಮ್ಮನಿರದೆ ರಾವಿಯಾ ಅಲ್‌ ಖಸಾಮಿ ಅವರನ್ನು ಅಸಭ್ಯವಾಗಿ ಮುಟ್ಟಿದೆ. ಪುರುಷ ರೋಬೊ ತಮ್ಮನ್ನು ಮುಟ್ಟುತ್ತಲೇ ರಾವಿಯಾ ಅಲ್‌ ಖಸಾಮಿ ಅವರು ಸ್ವಲ್ಪ ವಿಚಲಿತರಾಗಿದ್ದಾರೆ. ಬಳಿಕ ಅವರು ಲೈವ್‌ ಕವರೇಜ್‌ (live coverage) ಮುಂದುವರಿಸಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿದ್ದಿರಾ.? ನಿರ್ಲಕ್ಷ್ಯ ಬೇಡ ; ಇಲ್ಲಿದೆ Easy method.!

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಅಲ್ಲದೇ ಟೀಕೆಗೆ ಗುರಿಯಾಗಿದೆ. “ಸೌದಿ ಅರೇಬಿಯಾದಲ್ಲಿ ರೋಬೊಗಳು ಕೂಡ ಹೆಣ್ಣುಮಕ್ಕಳಿಗೆ ಗೌರವ ಕೊಡುವುದಿಲ್ಲ” ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು “ಸೌದಿ ಅರೇಬಿಯಾದ (Soudi Arabia) ರೋಬೊ ಕೂಡ ಸ್ತ್ರೀಲೋಲನಾಗಿದೆ” ಎಂದು ಟೀಕಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img