Tuesday, September 17, 2024
spot_img
spot_img
spot_img
spot_img
spot_img
spot_img
spot_img

ಮೊಬೈಲ್‌ನಲ್ಲಿ ಮಾತನಾಡುತ್ತಾ ತರಕಾರಿ ಬದಲಿಗೆ ಹೆತ್ತ ಮಗುವನ್ನೇ ಫ್ರಿಡ್ಜ್‌ನಲ್ಲಿಟ್ಟ ಮಹಾತಾಯಿ ; ಭಯಾನಕ Video viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮೊಬೈಲ್‌ನ್ನು ಚಿಕ್ಕಮಕ್ಕಳಿಂದ ಹಿಡಿದು, ದೊಡ್ಡವರ ತನಕ ಎಲ್ಲರೂ ಬಳಸ್ತಾರೆ. ಮೊಬೈಲ್ (mobile) ಬಳಕೆ ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದು. ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಇಲ್ಲೊಬ್ಳು ಮಹಾತಾಯಿಗೆ ಮೊಬೈಲ್ ಹುಚ್ಚು ಅದೆಷ್ಟು ಹಿಡಿದಿದೆ ಎಂದ್ರೆ ನೀವು ನಂಬಲಾರಿರಿ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಾಕಷ್ಟು ಸೌಂಡ್ ಮಾಡ್ತಿದೆ. ಇದನ್ನು ಓದಿ : ಇಂಥಾ ವ್ಯಕ್ತಿಗಳ ಪ್ರೀತಿಯಲ್ಲಿ ಹುಡ್ಗೀರು ಮೊದಲ ನೋಟದಲ್ಲೇ ಬೀಳ್ತಾರೆ ; ಯಾವ ಗುಣ ಅವರನ್ನು ಆಕರ್ಷಿಸುತ್ತೆ ಗೊತ್ತಾ.?

ವಿಡಿಯೋದಲ್ಲಿರುವ ದೃಶ್ಯ :

ಮಗು (baby) ತನ್ನ ಪಾಡಿಗೆ ತಾನೂ ಆಟ ಆಡ್ತಿದೆ. ಅಲ್ಲೇ ಪಕ್ಕದಲ್ಲೇ ಕುಳಿತಿರುವ ತಾಯಿ ತರಕಾರಿ ಕಟ್ ಮಾಡುತ್ತ ಮೊಬೈಲ್ ನಲ್ಲಿಯೇ ಮಾತನಾಡುತ್ತಿರುತ್ತಾಳೆ. ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಮುಳುಗಿರುವ ಆಕೆ ಹೆಚ್ಚಿಟ್ಟ ತರಕಾರಿ (vegetable) ಬದಲಿಗೆ ಮಗುವನ್ನೇ ಫ್ರಿಡ್ಜ್ ಒಳಗೆ ಇಟ್ಟಿದ್ದಾಳೆ.

ಸ್ವಲ್ಪ ಹೊತ್ತಿನ ಬಳಿಕ ಆಕೆಯ ಗಂಡ ಮನೆಗೆ ಬಂದು ಮಗು ಎಲ್ಲಿ ಎಂದು ಕೇಳ್ತಾನೆ. ಆ ಸಂದರ್ಭದಲ್ಲಿ ಇಬ್ಬರೂ ಮಗುವನ್ನು ಕಾಣದೆ ಕಂಗಾಲಾಗುತ್ತಾರೆ. ಹೀಗೆ ಸ್ವಲ್ಪ ಹೊತ್ತು ಹುಡುಕಾಟ (search) ನಡೆಸಿದಾಗ, ಫ್ರಿಡ್ಜ್ ಒಳಗಿಂದ ಮಗು ಅಳುವ ಸದ್ದು ಕೇಳುತ್ತದೆ. ನಂತರ ತಂದೆ ಮಗುವನ್ನು ಫ್ರಿಡ್ಜ್ ನಿಂದ ಹೊರ ತೆಗೆಯುವಂತಹ ದೃಶ್ಯವನ್ನು ಕಾಣಬಹುದು

ಈ ವಿಡಿಯೋವನ್ನು @Prof_Cheems ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಭಯಾನಕ ಮೊಬೈಲ್ ಚಟ” ಎಂಬ ಶೀರ್ಷಿಕೆ ನೀಡಲಾಗಿದೆ. ಮಾರ್ಚ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು (view’s), ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ : ಭಾರತದ ಈ ರಾಜ್ಯಗಳಲ್ಲಿ ಅತಿಹೆಚ್ಚು ಮದ್ಯ ಸೇವಿಸ್ತಾರಂತೆ ; listನಲ್ಲಿ ಕರ್ನಾಟಕವೂ ಇದೆಯಾ.?

ಇಂದಿನ ದಿನಗಳಲ್ಲಿ ನಾವೆಲ್ಲರೂ ಮೊಬೈಲ್ ಎಂಬ ಮಾಯಾಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಒಬ್ಬ ಬಳಕೆದಾರರು ಈ ವಿಡಿಯೋ ಸ್ಕ್ರಿಪ್ಟೆಡ್ ಆಗಿರಬಹುದು, ಆದರೆ ಪ್ರತಿಯೊಬ್ಬ ಪೋಷಕರಿಗೂ ಒಂದೊಳ್ಳೆ ಪಾಠವನ್ನು ಕಲಿಸುವಂತಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img