Tuesday, September 17, 2024
spot_img
spot_img
spot_img
spot_img
spot_img
spot_img
spot_img

ಈ ಸಿನಿಮಾವನ್ನು ಹಾಡಿ ಹೊಗಳಿದ PM ಮೋದಿ : ಯಾವುದು ಆ ಸಿನಿಮಾ? ; ಟ್ರೈಲರ್ ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಸಿನೆಮಾ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜಮ್ಮುವಿನಲ್ಲಿ ಈ ಚಿತ್ರದ ಬಗ್ಗೆ ಪ್ರಸ್ತಾವಿಸಿ, ಮೆಚ್ಚುಗೆ ಸೂಚಿಸಿದ್ದರು. ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿಯವರಿಗೆ ನಟಿ ಯಾಮಿ ಗೌತಮ್‌ ಕೂಡ ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಪ್ರಸ್ತಾಲಿಸಿ ಮೆಚ್ಚುಗೆ ಸೂಚಿಸಿದ ಚಿತ್ರವಾದರೂ ಯಾವುದು.?

ಫೆಬ್ರವರಿ 23ರಂದು ಈ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದ್ದು, ಈಗಾಗಲೇ ನಿರೀಕ್ಷೆ ಮೂಡಿಸಿದೆ. ಅದುವೇ ಬಾಲಿವುಡ್‌ ಚಿತ್ರ “ಆರ್ಟಿಕಲ್‌ 370” (Article 370). ಈ ಚಿತ್ರ ಭಾರಿ ಕುತೂಹಲ ಕೆರಳಿಸಿದೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಸ್ಕಾಲರ್ಶಿಪ್ ; ಅರ್ಜಿ ಸಲ್ಲಿಸಲು ಡೈರೆಕ್ಟ್ link ಇಲ್ಲಿದೆ.!

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಆದಿತ್ಯ ಸುಹಾಸ್‌ ಜಂಬಳೆ (Aditya Suhas Jambhale) ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

‘ಆರ್ಟಿಕಲ್ 370’ ಚಿತ್ರದಲ್ಲಿ ಯಾಮಿ ಗೌತಮ್‌ (Yami Gautam), ಪ್ರಿಯಾಮಣಿ (Priyamani) ಸೇರಿದಂತೆ ಅನೇಕರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, “ಈ ವಾರ ಆರ್ಟಿಕಲ್ 370 ರ ಚಲನಚಿತ್ರ ಬಿಡುಗಡೆಯಾಗಲಿದೆ ಎಂದು ನಾನು ಕೇಳಿದ್ದೇನೆ, ಇದು ಒಳ್ಳೆಯದು. ಏಕೆಂದರೆ ಇದು ಜನರಿಗೆ ಸರಿಯಾದ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ”. ಎಂದು ಜಮ್ಮುವಿನಲ್ಲಿ ಹೇಳಿದ್ದಾರೆ.

ನಟಿ ಯಾಮಿ ಗೌತಮ್ ಅವರ ವೃತ್ತಿ ಜೀವನದ ಮಹತ್ವದ ಚಿತ್ರ ‘ಆರ್ಟಿಕಲ್ 360’ ಎಂದೇ ಪರಿಗಣಿಸಲಾಗಿದೆ. ಇನ್ನು ಯಾಮಿ ಗೌತಮ್ ಗುಪ್ತಚರ ಅಧಿಕಾರಿ ಝೂನಿ ಹಕ್ಸರ್ ಪಾತ್ರ ಮಾಡಿದ್ದು, ದೇಶವನ್ನು ಬಾಹ್ಯ ಬೆದರಿಕೆಯಿಂದ ರಕ್ಷಿಸುವ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.

ಇದನ್ನು ಓದಿ : ಬಡ ರೈತನಿಂದ 1 ಸಾವಿರ ರೂ. ಕೇಳಿದ ASI ; ಏಕೆ ಗೊತ್ತೇ.?

‘ಆರ್ಟಿಕಲ್ 360’ ನೈಜ ಘಟನೆಗಳ ಹಿನ್ನೆಲೆಯಲ್ಲಿ ರಾಜಕೀಯ, ರಾಷ್ಟ್ರೀಯ ಭದ್ರತಾ ವಿಷಯಗಳತ್ತ ಬೆಳಕು ಚೆಲ್ಲಲಿದೆ. ಜತೆಗೆ ಕಾಶ್ಮೀರದಲ್ಲಿನ ಭಯೋತ್ಪಾದನೆ, ಭ್ರಷ್ಟಾಚಾರವನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಇತ್ತೀಚೆಗೆ ರಿಲೀಸ್‌ ಆದ ಟ್ರೈಲರ್‌ ಗಮನ ಸೆಳೆದಿದ್ದು, ನಿರೀಕ್ಷೆ ಹೆಚ್ಚಿಸದೆ.

 

View this post on Instagram

 

A post shared by Jio Studios (@officialjiostudios)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img