Friday, May 2, 2025
spot_img
HomeGeneral Newsಮಹಿಳಾ PSI ಯಿಂದ ಕಿರುಕುಳ ಆರೋಪ ; ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಯುವಕ.!
spot_img
spot_img
spot_img

ಮಹಿಳಾ PSI ಯಿಂದ ಕಿರುಕುಳ ಆರೋಪ ; ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಯುವಕ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ಸುದ್ದಿ, ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಹಿಳಾ ಪಿಎಸ್ಐ (PSI) ಕಿರುಕುಳದಿಂದ ಬೇಸತ್ತ ಯುವಕನೊಬ್ಬ ಮದ್ಯದಲ್ಲಿ ಡೊಮ್ಯಾಕ್ಸ್ (Domax) ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕೊಳ್ಳೇಗಾಲ ಪೊಲೀಸ್ ಠಾಣೆಯ ಪಿಎಸ್ಐ ಸುಮಾರು ಒಂದು ವರ್ಷದಿಂದ ಯುವಕನಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನು ಓದಿ : ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದ ವೈದ್ಯೆ ವಿರುದ್ಧ ದಾಖಲಾಯ್ತು FIR.!

ಪಿಎಸ್ಐ ವರ್ಷಾ ಅವರು ಯುವಕನನ್ನು ಠಾಣೆಗೆ ಕರೆಸಿ ಪದೇ ಪದೇ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ. ದುಷ್ಯಂತ್ ಎಂಬ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಿವಾಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನಿನ್ನೆ ದುಷ್ಯಂತ್ ಮನೆ ಬಳಿಗೆ ಹೋಗಿ ಪಿಎಸ್ಐ ಅವರು ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಯುವಕನಿಗೆ ಹಣ ನೀಡದಿದ್ದರೆ ರೌಡಿ ಶೀಟರ್ (Rowdy sheeter) ತೆರೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಹಿಂದೆ ದೃಶ್ಯಂತ್ ಯುವಕರೊಂದಿಗೆ ಜಗಳವಾಡಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಪಿಎಸ್ಐ ವರ್ಷಾ ದುಷ್ಯಂತಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳದಿಂದ ಬೇಸತ್ತ (Tired of being harassed) ದುಷ್ಯಂತ್ ಮದ್ಯದಲ್ಲಿ ಡೊಮ್ಯಾಕ್ಸ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನು ಓದಿ : Astrology : ಎಪ್ರಿಲ್‌ 29 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ದುಷ್ಯಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ದುಷ್ಯಂತ್ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪಿಎಸ್ಐ ವರ್ಷಾ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಇದನ್ನು ಓದಿ : ಕಾರಿನಲ್ಲಿ‌ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆಗೆ ಶರಣಾದ Businessman.!

ಏಪ್ರಿಲ್ 8 ರಂದು ಯುವಕ ದುಷ್ಯಂತ್ ಬಿಲ್ ವಿಚಾರದಲ್ಲಿ ಕ್ಯಾಷಿಯರ್ ಜೊತೆ ವಾಗ್ವಾದ ನಡೆದಿತ್ತು. ರಾಜಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಈಗ ಪಿಎಸ್ಐ ವರ್ಷಾ ಈ ವಿಡಿಯೋವನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ, ಮಹಿಳಾ ಅಧಿಕಾರಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ದೃಶ್ಯಂತ ಅವರ ಕುಟುಂಬ ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ.

ಹಿಂದಿನ ಸುದ್ದಿ : ಅತ್ಯಂತ ದುರ್ಬಲ ಪಾಸ್‌ವರ್ಡ್ ಗಳಿವು ; 1 ನಿ‌ಮಿಷ ಸಾಕು ಖಾತೆ ಹ್ಯಾಕ್ ಮಾಡಲು.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ಪ್ರಮುಖ ಖಾತೆಗಳ ಪಾಸ್‌ವರ್ಡ್ ಸ್ಟ್ರಾಂಗ್ ಇದೆಯಾ? ನಾರ್ಡ್ ಪಾಸ್ 2024 ಕೆಲ ಪಟ್ಟಿ ಮಾಡಿದೆ. ಈ 45 ಪಾಸ್‌ವರ್ಡ್ ನೀವು ಬಳಸುತ್ತಿದ್ದರೆ, 1 ನಿ‌ಮಿಷವೂ ಬೇಕಾಗಿಲ್ಲ ನಿಮ್ಮ ಖಾತೆ ಹ್ಯಾಕ್ ಮಾಡಲು. ಈ ಪಟ್ಟಿಯಲ್ಲಿ ನೀವಿದ್ದೀರಾ.? ಅಂತ ಚೆಕ್ ಮಾಡ್ಕೊಳ್ಳಿ.

ಸಾಮಾಜಿಕ ಜಾಲತಾಣ, ಇಮೇಲ್ ಖಾತೆ, ಬ್ಯಾಂಕ್ ಖಾತೆ, ಯುಪಿಐ ಪಾವತಿ ಸೇರಿದಂತೆ ಹಲವು ಡಿಜಿಟಲ್ ಖಾತೆಗಳಿಗೆ ಸ್ಟ್ರಾಂಗ್ ಪಾಸ್‌ವರ್ಡ್ ಹಾಕಿರಬೇಕು.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

ಆದರೆ ಹಲವರು ನೆನಪಿಟ್ಟುಕೊಳ್ಳಲು ಸುಲಭವಾಗಲಿ ಅಂತ ದುರ್ಬಲ ಪಾಸ್‌ವರ್ಡ್ (Weak password) ಹಾಕುತ್ತಾರೆ. ಇದು ಅದೆಷ್ಟೋ ಡೇಂಜರ್ ಗೊತ್ತಾ.? ಡೇಟಾ, ಹಣ ಯಾವುದು ಲೀಕ್ ಆಗದಂತೆ ತಡೆಯುವ ಪಾಸ್‌ವರ್ಡ್ ಸ್ಟ್ರಾಂಗ್ ಇರಬೇಕು. ಆದರೆ ಭಾರತದಲ್ಲಿ ಬಹುತೇಕ ಜನರು ಈ 45 ಪಾಸ್‌ವರ್ಡ್ ಬಳಕೆ ಮಾಡುತ್ತಾರೆ.

ನಾರ್ಡ್‌ಪಾಸ್ 2024 ಇದೀಗ 45 ಪಾಸ್‌ವರ್ಡ್ ಪಟ್ಟಿ ನೀಡಿದ್ದು, ಇದು ಅತ್ಯಂತ ದುರ್ಬಲ ಪಾಸ್‌ವರ್ಡ್ಸ್ ಎಂದಿದೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

ಈ ಪಾಸ್‌ವರ್ಡ್ ಹ್ಯಾಕ್ ಮಾಡಲು ಒಂದು ನಿಮಿಷವೂ ಬೇಕಾಗಿಲ್ಲ. ಅಲ್ಲದೇ ಈ ಪಾಸ್‌ವರ್ಡ್ ಹ್ಯಾಕ್ ಮಾಡಲು ಭಾರಿ ತಂತ್ರಜ್ಞಾನ ಗೊತ್ತಿದ್ದ ಹ್ಯಾಕರ್ಸ್ ಬೇಕಿಲ್ಲ ಎಂದಿದೆ.

123456, 123456789, Password, 111111, dragon, Monkey, 123123123, 123321, Password 0 ಮತ್ತು 000000 ದುರ್ಬಲ ಪಾಸ್‌ ವರ್ಡ್‌ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಹೆಸರು , ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಇಟ್ಟುಕೊಳ್ಳುವುದು ಉತ್ತಮವಲ್ಲ. ಈ ರೀತಿಯ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಂತೆ (Easily hackable).

ನಿಮ್ಮ ಸಾಮಾಜಿಕ ಜಾಲತಾಣದ ಖಾತೆ ಅಥವಾ ಇನ್ಯಾವುದೇ ಡಿಜಿಟಲ್ ಮೂಲಕ ವೈಯಕ್ತಿಕ ಮಾಹಿತಿ (Personal information through digital) ಪಡೆದು ಸುಲಭವಾಗಿ ಹ್ಯಾಕ್ ಮಾಡುತ್ತಾರೆ ಹ್ಯಾಕರ್ಸ್.

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

ಇದರ ಫ್ರೀಕೆನ್ಸ್ ಸುಲಭವಾಗಿ ಲಭ್ಯವಿದೆ. ಹೀಗಾಗಿ ಇವುಗಳನ್ನು ಯಾರು ಬೇಕಾದರೂ ಹ್ಯಾಕ್ ಮಾಡಬಹುದು. ಈ ರೀತಿಯ ಪಾಸ್‌ವರ್ಡ್ ನೀಡಿದ್ದರೆ ಬದಲಿಸುವುದು ಉತ್ತಮ.

ನೀವು ಬಳಸುವ ಪಾಸ್‌ವರ್ಡ್‌ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್, ಸಂಖ್ಯೆ, ಅಲ್ಫಾಬೆಟ್ ಸೇರಿದಂತೆ ಕೆಲವು ಕ್ಯಾರೆಕ್ಟರ್ ಇರಲೇಬೇಕೆಂಬ ನಿಯಮವಿದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹೆಸರು, ಪೋಷಕರ ಹೆಸರು, ಮಕ್ಕಳ ಹೆಸರು, ಊರಿನ ಹೆಸರನ್ನು ಪಾಸ್‌ವರ್ಡ್ ಆಗಿ ಬಳಸಬೇಡಿ. ಇನ್ನು ಐಡಿ ಯನ್ನೇ ಪಾಸ್‌ವರ್ಡ್ ಆಗಿ ನೀಡುವುದು ಕೂಡ ಸರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
spot_img
spot_img
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments