ಜನಸ್ಪಂದನ ನ್ಯೂಸ್, ಡೆಸ್ಕ್ : ನಕಲಿ ವೈದ್ಯನೊಬ್ಬ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ 15 ವರ್ಷದ ಬಾಲಕ ಮೃತಪಟ್ಟ ಘಟನೆ ಬಿಹಾರದ ಸಾರಣ್‌ನಲ್ಲಿ ನಡೆದಿದೆ.
ಸಾವಿಗೀಡಾದ ಬಾಲಕ ಕೃಷ್ಣಕುಮಾರ್ (15) ಎಂದು ತಿಳಿದು ಬಂದಿದೆ.
ಇದನ್ನು ಓದಿ : Health : ಸೊಂಟದ ಸುತ್ತಮುತ್ತಲಿನ ಕೊಬ್ಬು ಕರಗಬೇಕಾ? ವಾಕ್ ಮಾಡುವಾಗ ಈ ವಿಧಾನ ಅನುಸರಿಸಿ.
ಪೋಷಕರು, ಕೃಷ್ಣಕುಮಾರ್ ಹಲವು ಬಾರಿ ವಾಂತಿ ಮಾಡಿಕೊಂಡಿದ್ದರಿಂದ ಸಾರಣ್‌ನ ಗಣಪತಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಅಜಿತ್ ಕುಮಾರ್ ಪುರಿ ನಕಲಿ ವೈದ್ಯನಾಗಿದ್ದನು.
ಅಜಿತ್, ಬಾಲಕನಿಗೆ ವಾಂತಿ ನಿಲ್ಲಲು ಚಿಕಿತ್ಸೆ ನೀಡಿದ್ದ. ಬಳಿಕ ಪಿತ್ತಕೋಶದಲ್ಲಿ ಕಲ್ಲು ಆಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಿರ್ಧರಿಸಿದ್ದ. ಬಳಿಕ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗಿ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದ.
ಆದರೆ ಬಾಲಕನಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆ್ಯಂಬುಲೆನ್ಸ್‌ನಲ್ಲಿ ಪಟನಾದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾರ ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ಹೆದರಿದ ಅಜಿತ್ ಕುಮಾರ್ ಹಾಗೂ ಆತನ ಸಿಬ್ಬಂದಿ ಪಟ್ನಾ ಆಸ್ಪತ್ರೆಯಲ್ಲಿ ಬಾಲಕನ ಶವವನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ವೈದ್ಯ ಅಜಿತ್ ಕುಮಾರ್ ಹಾಗೂ ಆತನ ಸಿಬ್ಬಂದಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.