Thursday, March 27, 2025
HomeInternationalಮಾಡೆಲಿಂಗ್ ತೊರೆದು IFS ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್ ಸ್ಪೂರ್ತಿದಾಯಕ ಸ್ಟೋರಿ.!
spot_img
spot_img
spot_img
spot_img
spot_img

ಮಾಡೆಲಿಂಗ್ ತೊರೆದು IFS ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್ ಸ್ಪೂರ್ತಿದಾಯಕ ಸ್ಟೋರಿ.!

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಾವು ಕಂಡ ಕನಸಿಗಾಗಿ ಕೆಲವರು ತಮ್ಮ ಆಸಕ್ತಿಯ ಕ್ಷೇತ್ರವನ್ನು ಬಿಟ್ಟು ಬಿಡುತ್ತಾರೆ. ಹೀಗೆ ತಮ್ಮ ಮಾಡೆಲಿಂಗ್ (modeling) ಕ್ಷೇತ್ರವನ್ನು ತೊರೆದು UPSC ಪರೀಕ್ಷೆಯನ್ನು ಬರೆದು IFS ಅಧಿಕಾರಿಯಾದ ಐಶ್ವರ್ಯಾ ಶೆಯೋರಾನ್ ಅವರ ಕಥೆ ಇದು.

ರಾಜಸ್ಥಾನದಲ್ಲಿ (Rajasthan) ಜನಿಸಿದ ಐಶ್ವರ್ಯಾ ಶೆಯೋರಾನ್ ಅವರ ತಂದೆ commanding officer ಅಜಯ್ ಕುಮಾರ್, ಕರೀಂನಗರದ 9 ನೇ ತೆಲಂಗಾಣ ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

ಐಶ್ವರ್ಯಾ ಅವರ ಪೋಷಕರು ಆಬಳಿಕ ದೆಹಲಿಗೆ ಬರುತ್ತಾರೆ. ಅಲ್ಲಿ ಐಶ್ವರ್ಯಾ ಶೆಯೋರಾನ್ ಅವರು ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಅವರು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 97.5% ಗಳಿಸುತ್ತಾರೆ. ಬಳಿಕ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ (commerce) ಪದವಿ ಸಹ ಪಡೆಯುತ್ತಾರೆ.

ಕಾಲೇಜು ದಿನಗಳಲ್ಲಿ ಐಶ್ವರ್ಯಾ ಮಾಡೆಲಿಂಗ್‌ಗೆ ಸೇರಿಕೊಂಡರು. ನಂತರ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು. 2014 ರಲ್ಲಿ ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ನಂತಹ ಪ್ರಶಸ್ತಿ ಗೆದ್ದರು. 2015 ರಲ್ಲಿ ಮಿಸ್ ದೆಹಲಿ, ಬಳಿಕ 2016 ರಲ್ಲಿ ಐಶ್ವರ್ಯಾ Miss India ಸ್ಪರ್ಧೆಯಲ್ಲಿ ಫೈನಲಿಸ್ಟ್ ಆದರು.

ಐಶ್ವರ್ಯಾ ಶೆಯೋರಾನ್ ಅವರು 2018 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಿದರು. ಯಾವುದೇ Training ಪಡೆಯದೇ 10 ತಿಂಗಳುಗಳ ಕಾಲ ಸ್ವಯಂ ಅಧ್ಯಯನ ನಡೆಸುತ್ತಾರೆ. ಪ್ರತಿಫಲವೆಂಬಂತೆ ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ರ‍್ಯಾಂಕ್ ಪಡೆಯುತ್ತಾರೆ.

ಪ್ರಸ್ತುತ ಐಶ್ವರ್ಯಾ ಶೆಯೋರನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (India\’s Ministry of External Affairs) ಐಎಫ್‌ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ

WhatsApp Channel Join Now
Telegram Group Join Now
Instagram Account Follow Now
- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!