ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯೂಟಿ ಪಾರ್ಲರ್ ಆ್ಯಂಡ್ ಸ್ಪಾ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ದಾಳಿ ವೇಳೆ ಮೂವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಇದನ್ನು ಓದಿ : BSNL : 197 ರೂ.ನಲ್ಲಿ ಪಡೆಯಿರಿ 70 ದಿನಗಳ ರೀಚಾರ್ಜ್, ದಿನಕ್ಕೆ 2GB ಡೇಟಾ ಪ್ಲ್ಯಾನ್.!
ಈ ವೇಳೆ ಮೂವರು ಮಹಿಳೆಯರಿಗೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಬ್ಯೂಟಿ ಪಾರ್ಲರ್ ಆ್ಯಂಡ್ ಸ್ಪಾ ಸೆಂಟರ್ ನ ಮಾಲೀಕಳು ಆಪ್ ಮೂಲಕ ಗ್ರಾಹಕರನ್ನ ಸೆಳೆಯುತ್ತಿದ್ದರು, ಆನ್ ಲೈನ್ ನಲ್ಲೇ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನು ಓದಿ : ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಸದ್ಯ ಸ್ಪಾ ಮಾಲೀಕಳನ್ನು ಅರೆಸ್ಟ್ ಮಾಡಲಾಗಿದ್ದು, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.