Thursday, September 19, 2024
spot_img
spot_img
spot_img
spot_img
spot_img
spot_img
spot_img

ನಡುರಸ್ತೆಯಲ್ಲೇ ಯುವಕ, ಯುವತಿಯ ಬೆತ್ತಲೆ ಓಡಾಟ ; ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ Alert.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ರೊಮ್ಯಾನ್ಸ್, ಅಶ್ಲೀಲ ನಡೆಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಇಂತದ್ದೆವೊಂದು ವಿಡಿಯೋ ವೈರಲ್ ಆಗಿದ್ದು, ಇಂಟರ್ನೆಟ್ ನಲ್ಲಿ ಕೋಲಾಹಲ ಉಂಟು ಮಾಡಿದೆ.

ಬೆತ್ತಲಾಗಿರುವ ಜೋಡಿ ನಡು ರಸ್ತೆಯಲ್ಲಿ ವಾಗ್ವಾದ ನಡೆಸುತ್ತಾ ಸಾಗಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನು ಓದಿ : ಮಗುವಿನ ಮೇಲೆ ಬೀದಿ ನಾಯಿಯಿಂದ ದಾಳಿ : ಹಿರೋನಂತೆ ಎಂಟ್ರಿ ಕೊಟ್ಟು ರಕ್ಷಿಸಿದ ಸಾಕು ನಾಯಿ, ವಿಡಿಯೋ Viral.!

ನಾಗ್ಪುರದ ಲಕ್ಷ್ಮಿ ನಗರದ ರಸ್ತೆಯಲ್ಲಿ ಈ ಘಟನೆ ನಡೆದದ್ದು, ಮಧ್ಯ ರಾತ್ರಿ ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಯಾರೋ ವಾಹನ ಸವಾರರು ಈ ಘಟನೆ ಚಿತ್ರೀಕರಿಸಿದ್ದಾರೆ.

ಜೋಡಿಯ ಮೈಮೇಲೆ ಒಂಚೂರು ಬಟ್ಟೆ ಇಲ್ಲದೇ ಬೆತ್ತಲಾಗಿ ನಡೆದುಕೊಂಡು ಸಾಗಿದೆ. ಇಷ್ಟೇ ಅಲ್ಲ ಇಬ್ಬರು ಪರಸ್ಪರ ಜಗಳವಾಡಿಕೊಂಡು ಹೋಗುತ್ತಿದ್ದಾರೆ. ಯುವಕ ಸಂಪೂರ್ಣ ಬೆತ್ತಲಾಗಿದ್ದಾನೆ. ಆತನ ಜೊತೆಗಿದ್ದ ಯುವತಿಯೂ ಸಹ ಸಂಪೂರ್ಣ ಬೆತ್ತಲಾಗಿದ್ದಾಳೆ.

ಕಾರಿನಲ್ಲಿದ್ದವರು ತಮ್ಮ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ ಅಂತ ಗೊತ್ತಾದ ಮೇಲೆ ಯುವಕ ತಕ್ಷಣವೇ ರಸ್ತೆ ಬದಿಯಲ್ಲಿ ಕತ್ತಲೆ ಜಾಗದ ಕಡೆ ಸರಿದಿದ್ದಾನೆ. ಇತ್ತ ಯುವತಿ ಕಿರುಚಾಡುತ್ತಿದ್ದ ವಾಗ್ವಾದ ನಡೆಸುತ್ತಿರುವ ದೃಶ್ಯವಿದೆ.

ಇದನ್ನು ಓದಿ : ಮದುವೆಯೇ ಆಗಿಲ್ಲ ಎಂದ ಸಂಸದರು KAS ಅಧಿಕಾರಿ ಹಣೆಗೆ ಕುಂಕುಮ ಇಟ್ಟರು ; ಪೋಟೋ ವೈರಲ್.!

ರೆಕಾರ್ಡಿಂಗ್ ಆಗುತ್ತಿದ್ದಂತೆ ಯುವತಿ ಏಕಾಂಗಿಯಾದರೆ, ಯುವಕ ಮನೆಗಳ ಹಿಂದೆ ಮರೆಯಾಗಿದ್ದಾನೆ. ಬಳಿಕ ಏನಾಗಿದೆ ಅನ್ನೋ ಕುರಿತು ಮಾಹಿತಿ ಇಲ್ಲ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷ್ಮಿ ನಗರ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಹಲವರು ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಅಸಭ್ಯ ವರ್ತನೆ ಸರಿಯಲ್ಲ. ಇಬ್ಬರು ನಶೆಯಲ್ಲಿರುವ ಸಾಧ್ಯತೆ ಇದೆ. ಯುವ ಸಮೂಹದಲ್ಲಿ ಈ ರೀತಿಯ ವರ್ತನೆಗಳು ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ವರ್ಷಕ್ಕೊಬ್ಬ ಗಂಡನಿಗೆ ಡಿವೋರ್ಸ್ ಕೊಡ್ತಾಳೆ ಈ lady ; ಇಲ್ಲಿಯವರೆಗೆ ಎಷ್ಟು ಡಿವೋರ್ಸ್ ಪಡೆದಿದ್ದಾಳೆ ಗೊತ್ತಾ.?

ಇಬ್ಬರು ಈ ರೀತಿ ಬೆತ್ತಲೆ ಓಡಾಡಲು ಕಾರಣವೇನು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದ್ರೆ, ವ್ಯಾಪಕವಾಗಿ ಹರಿದಾಡಿದ ವಿಡಿಯೋ ಬೆನ್ನಲ್ಲೇ ಬಜಾಜ್​ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಯಾವುದೇ ದೂರು ದಾಖಲಿಸದೆ ಯುವಕ ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ಠಾಣೆಗೆ ಆಗಮಿಸಿದ್ದು, ಅವರಿಬ್ಬರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದುಹೋಗಿದೆ ಕ್ಷಮಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img