Thursday, September 19, 2024
spot_img
spot_img
spot_img
spot_img
spot_img
spot_img
spot_img

ಪೊಲೀಸರನ್ನೇ Arrest ಮಾಡಿದ ಪೊಲೀಸರು ; ಯಾಕೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಎಡಿಜಿ ವಾರಾಣಸಿ ಮತ್ತು ಡಿಐಜಿ ಅಜಂಗಢ್ ನೇತೃತ್ವದ ಜಂಟಿ ತಂಡಗಳು ಬಲ್ಲಿಯಾದಲ್ಲಿನ ನರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಭರೌಲಿ ತಿರಾಹಾದಲ್ಲಿ ದಾಳಿ ನಡೆಸಿ, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 18 ಜನರನ್ನು ಅರೆಸ್ಟ್ ಮಾಡಿದ್ದು, ಮೂವರು ಪೊಲೀಸರು ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.

ಬಿಹಾರದ ಗಡಿಯಲ್ಲಿ ಚಾಲಕರಿಂದ ಅಕ್ರಮವಾಗಿ ಹಣ ಸುಲಿಗೆ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಬೃಹತ್ ಕಾರ್ಯಾಚರಣೆ ನಡೆಸಿತ್ತು‌.

ಇದನ್ನು ಓದಿ : ವರ್ಷಕ್ಕೊಬ್ಬ ಗಂಡನಿಗೆ ಡಿವೋರ್ಸ್ ಕೊಡ್ತಾಳೆ ಈ lady ; ಇಲ್ಲಿಯವರೆಗೆ ಎಷ್ಟು ಡಿವೋರ್ಸ್ ಪಡೆದಿದ್ದಾಳೆ ಗೊತ್ತಾ.?

ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಸುಲಿಗೆ ಜಾಲವನ್ನು ಪತ್ತೆಹಚ್ಚಿದೆ. ದಾಳಿಯ ವೇಳೆ ಪೊಲೀಸರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಿಕ್ಕಿಬಿದ್ದ ಪೊಲೀಸರನ್ನು ಅಮಾನತು ಮಾಡಲಾಗಿದ್ದು, 18 ಪೊಲೀಸ್ ಅಧಿಕಾರಿಗಳಲ್ಲಿ ಎಸ್‌ಎಚ್‌ಒ ನರ್ಹಿ ಮತ್ತು ಚೌಕಿ ಪ್ರಭಾರಿ ಕೊರಂತಡಿಹ್ ಸೇರಿದಂತೆ 03 ಸಬ್ ಇನ್‌ಸ್ಪೆಕ್ಟರ್‌ಗಳು, 03 ಹೆಡ್ ಕಾನ್‌ಸ್ಟೆಬಲ್‌ಗಳು, 10 ಕಾನ್‌ಸ್ಟೆಬಲ್‌ಗಳು ಮತ್ತು 1 ಕಾನ್ಸ್‌ಟೇಬಲ್ ಡ್ರೈವರ್ ಸಸ್ಪೆಂಡ್ ಆಗಿದ್ದಾರೆ.

ಅಲ್ಲದೇ ಉತ್ತರ ಪ್ರದೇಶ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್‌ಪಿಯನ್ನು ಅಮಾನತುಗೊಳಿಸಿದ್ದು, ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲಿಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.

ತಡರಾತ್ರಿ ನಡೆಸಿದ ದಾಳಿಯಲ್ಲಿ, ಎಡಿಜಿ ವಾರಾಣಸಿ ಮತ್ತು ಡಿಐಜಿ ಅಜಂಗಢ್ ಅವರ ಜಂಟಿ ತಂಡವು ಪ್ರತಿ ಟ್ರಕ್‌ನಿಂದ 500 ರೂಪಾಯಿ ಸುಲಿಗೆ ಮಾಡಿರುವುದನ್ನು ಪತ್ತೆಹಚ್ಚಿದೆ. ಅಕ್ರಮ ಕಾರ್ಯಾಚರಣೆಯಿಂದ ಸುಲಿಗೆಕೋರರಿಗೆ ದಿನಕ್ಕೆ 5 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮದುವೆಯೇ ಆಗಿಲ್ಲ ಎಂದ ಸಂಸದರು KAS ಅಧಿಕಾರಿ ಹಣೆಗೆ ಕುಂಕುಮ ಇಟ್ಟರು ; ಪೋಟೋ ವೈರಲ್.!

ಬಿಹಾರ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶೂನ್ಯ ಸಹಿಷ್ಣುತೆ ನೀತಿಯೊಂದಿಗೆ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ. ನಡೆಸಿತ್ತು‌

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img