ಜನಸ್ಪಂದನ ನ್ಯೂಸ್, ಡೆಸ್ಕ್ : ಸುಂದರವಾಗಿ ಕಾಣುವುದು ನಮ್ಮ ಹಕ್ಕು. ಮುಖ ನಮ್ಮ ಸೌಂದರ್ಯದ ಪ್ರತಿರೂಪ ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ನಮ್ಮ ನೈಜ ಸೌಂದರ್ಯವನ್ನು ಬಿಂಬಿಸುವ ಮುಖದ ಕಾಂತಿ ಮತ್ತು ಹೊಳಪನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ಇದನ್ನು ಓದಿ : 10/12 ನೇ ತರಗತಿ ಪಾಸಾದವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗವಕಾಶ.!
ಅಂತೆಯೇ ಜೀವನದಲ್ಲಿ ಎದುರಿಸಿದ ಸಮಸ್ಯೆಗಳನ್ನ ಸಹಿತ ನಿಮ್ಮ ಗುಣಗಳನ್ನು ಮುಖದ ಆಕೃತಿ ನೋಡಿ ತಿಳಿದುಕೊಳ್ಳಬಹುದು ಎಂದು ಜೀನ್ ಹಾನರ್ ಹೆಸರಿನ ಪ್ರಖ್ಯಾತ ಫೇಸ್ ರೀಡಿಂಗ್ ಎಕ್ಸಪರ್ಟ್ ಹೇಳಿದ್ದಾರೆ.
ಹಾಗಾದರೆ ನಿಮ್ಮ ಮುಖ ಯಾವ ರೀತಿ ಆಕಾರವನ್ನು ಹೊಂದಿದೆ ಎಂಬ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ.
ಅಂಡಾಕಾರ :
ಈ ಆಕಾರದ ಮುಖ ಹೊಂದಿರುವವರು ಜನರನ್ನು ಕರುಣೆಯಿಂದ ಕಾಣುತ್ತಾರೆ, ವ್ಯಕ್ತಿಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ, ಇವರು ದಯಾಮಯಿಗಳು. ಅಲ್ಲದೇ ಅಮಾಯಕತ್ವದ ಕಾರಣಕ್ಕಾಗಿಯೇ ಅತ್ಯಂತ ಸುಲಭವಾಗಿ ಮೋಸ ಹೋಗುತ್ತಾರೆ. ಅವರು ಇತರರು ಹೇಳಿದ ಮಾತುಗಳನ್ನ ಕೇಳುತ್ತಾ ಸುಲಭವಾಗಿ ನಂಬುವ ಸ್ವಭಾವದವರು.
ಇದನ್ನು ಓದಿ : ಹಳೆಯ ಹಾಡಿಗೆ 90 ವರ್ಷದ ಅಜ್ಜಿಯ ಮಸ್ತ್ ಮಸ್ತ್ ಸ್ಟೆಪ್ಸ್ ; ವಿಡಿಯೋ ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ.!
ಚೌಕಾಕಾರ :
ಚೌಕಾಕಾರದ ಮುಖ ಉಳ್ಳವರು ನಾಯಕತ್ವದ ಗುಣಗಳು ಅತ್ಯಂತ ಅಧಿಕವಾಗಿದ್ದು ಪ್ರತೀ ವಿಷಯವನ್ನು ಆಳವಾಗಿ ಯೋಚಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅತ್ಯಂತ ಕ್ರಿಯೇಟಿವಾಗಿ ಆಲೋಚಿಸುತ್ತಾರೆ. ಸಾಮಾಜಿಕವಾಗಿ ಒಳಗೊಳ್ಳುವ ಮತ್ತು ಸದೃಢವಾದ ಮನಸ್ಥಿತಿ ಇವರದ್ದು.
ಕೋಲಾಕಾರ :
ಉದ್ದನೆಯ, ಕೋಲಾಕಾರದ ಮುಖ ಉಳ್ಳವರು ಎಂತಹವರನ್ನಾದರೂ ಬಹು ಬೇಗನೆ ಆಕರ್ಷಿಸುವ ಶಕ್ತಿ ಹೊಂದಿರುತ್ತಾರೆ. ಅತ್ಯಂತ ಬುದ್ಧಿವಂತರು. ಇವರ ಐಕ್ಯೂ ಮಟ್ಟ ಇತರರಿಗಿಂತ ಅಧಿಕವಾಗಿರುತ್ತದೆ.
ಇದನ್ನು ಓದಿ : Video : ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ ; ಎರಡು ಅಮೂಲ್ಯ ಎತ್ತು ಬಲಿ, ರೈತನ ಮೆದುಳು ನಿಷ್ಕ್ರಿಯ.!
ದುಂಡಾಕಾರ :
ದುಂಡಾದ ಮುಖ ಉಳ್ಳವರು ಎಷ್ಟೇ ಒತ್ತಡಗಳಿದ್ದರೂ ಸಮಾಧಾನದಿಂದ ಕೆಲಸ ನಿರ್ವಹಿಸುವ ಚಾಕಚಕ್ಯತೆ ಇವರದ್ದು. ಸ್ಪರ್ಧಾತ್ಮಕ ಮನೋಭಾವವುಳ್ಳ ಇವರಿಗೆ ಬುದ್ಧಿಮಟ್ಟ ಅಧಿಕವಾಗಿರುತ್ತದೆ. ಅತ್ಯಂತ ಚುರುಕಾಗಿರುತ್ತಾರೆ.