ಜನಸ್ಪಂದನ ನ್ಯೂಸ್, ಡೆಸ್ಕ್ : ನೀವು ಶೂಗಳನ್ನು ಧರಿಸುವಾಗ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ ಮಳೆ ಮತ್ತು ಪ್ರವಾಹದಿಂದಾಗಿ ಹಾವುಗಳು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತವೆ.
ಆದ್ದರಿಂದಲೇ ಮಳೆಗಾಲದಲ್ಲಿ ಶೂ, ಹೆಲ್ಮೆಟ್ ಮತ್ತು ಬಟ್ಟೆಗಳನ್ನು ಧರಿಸುವ ಮೊದಲು ಒಂದು ಬಾರಿ ಸರಿಯಾಗಿ ಪರೀಕ್ಷಿಸಿ ಧರಿಸುವುದು ತುಂಬಾ ಅಗತ್ಯ.
ಇದನ್ನು ಓದಿ : Video : ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ ; ಎರಡು ಅಮೂಲ್ಯ ಎತ್ತು ಬಲಿ, ರೈತನ ಮೆದುಳು ನಿಷ್ಕ್ರಿಯ.!
ಇದೀಗ ವ್ಯಕ್ತಿಯೊಬ್ಬ ಶೂ ಒಳಗೆ ಕಾಲು ಹಾಕಬೇಕು ಎನ್ನುವಷ್ಟರಲ್ಲಿ ನಾಗರ ಹಾವೊಂದು ಹೆಡೆ ಎತ್ತಿ ನಿಂತ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವೈರಲ್ ಆಗಿರುವ ವಿಡಿಯೋದಲ್ಲಿ ಶೂ ಒಳಗೆ ಬೃಹತ್ ನಾಗರ ಹಾವು ಬೆಚ್ಚಗೆ ಮಲಗಿರುವುದನ್ನು ಕಾಣಬಹುದು. ಬಳಿಕ ಶೂ ಒಳಗಿನಿಂದ ಏಕಾಏಕಿ ಹಾವು ಬುಸುಗುಟ್ಟುತ್ತಾ ಹೆಡೆ ಎತ್ತಿ ನಿಂತಿದೆ.
ಇದನ್ನು ಓದಿ : Video : ಪೆಟ್ರೋಲ್ ತುಂಬಿದಕ್ಕೆ ಹಣ ಕೇಳಿದ ಬಂಕ್ ಸಿಬ್ಬಂದಿ ; ಕಾರು ಗುದ್ದಿಸಿದ ಪೊಲೀಸ್ ಅಧಿಕಾರಿ ; ಬಂಧನ, ಅಮಾನತು.!
sarpmitra_neerajprajapat ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ಘಟನೆ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಜುಲೈ 13ರಂದು ಹಂಚಿಕೊಂಡಿರುವ ಈ ವಿಡಿಯೋ 5 ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. 792,439 ನೆಟ್ಟಿಗರು ವಿಡಿಯೋಗೆ ಲೈಕ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram