ಜನಸ್ಪಂದನ ನ್ಯೂಸ್, ಡೆಸ್ಕ್ : ಬ್ಯಾಂಕ್‌ಗಳಲ್ಲಿ ಬಡ್ಡಿದರಗಳು ನಿರಂತರವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ, ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಅಂಚೆ ಕಚೇರಿ (Post Office – PO) ಇನ್ನೂ ವಿಶ್ವಾಸಾರ್ಹ ಆಯ್ಕೆಯಾಗಿದೆ. ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು ಮತ್ತೊಮ್ಮೆ ಕಡಿತಗೊಳಿಸಿದರೂ, ಅಂಚೆ ಕಚೇರಿ (Post Office – PO) ಯ ಸಮಯ ಠೇವಣಿ (Time Deposit – TD) ಯೋಜನೆ ಗ್ರಾಹಕರಿಗೆ ಗರಿಷ್ಠ 7.5% ಬಡ್ಡಿದರವನ್ನು ನೀಡುತ್ತಿದೆ.
ಜಂಟಿ ಖಾತೆಗೆ ಹೆಚ್ಚಾದ ಲಾಭ :
ಗಂಡ–ಹೆಂಡತಿ ಇಬ್ಬರೂ ಜಂಟಿ ಖಾತೆ ತೆರೆದು ಹೂಡಿಕೆ ಮಾಡಿದರೆ, 5 ವರ್ಷಗಳ ಕೊನೆಯಲ್ಲಿ ಉತ್ತಮ ಮ್ಯಾಚ್ಯುರಿಟಿ ಮೊತ್ತ ಸಿಗುತ್ತದೆ. ಉದಾಹರಣೆಗೆ, 2 ಲಕ್ಷ ರೂ. ಹೂಡಿಕೆಗೆ 7.5% ಸಂಯುಕ್ತ ಬಡ್ಡಿದರ ಅನ್ವಯ, 5 ವರ್ಷಗಳ ನಂತರ ಒಟ್ಟು ರೂ. 2,89,990 ಸಿಗುತ್ತದೆ. ಅಂದರೆ, ಬಡ್ಡಿಯಲ್ಲಿ ಮಾತ್ರವೇ ರೂ. 89,990 ಲಾಭ.
ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು
ರೆಪೊ ದರ ಇಳಿಕೆ – ಬ್ಯಾಂಕ್ ಎಫ್‌ಡಿ ಬಡ್ಡಿ ಕಡಿಮೆ :
ಆರ್ಥಿಕ ಪರಿಸ್ಥಿತಿ ಬದಲಾವಣೆ ಹಿನ್ನೆಲೆಯಲ್ಲಿ, ಈ ವರ್ಷ ರಿಸರ್ವ್ ಬ್ಯಾಂಕ್ ನಾಲ್ಕು ಬಾರಿ ರೆಪೊ ದರವನ್ನು 0.25% ಇಳಿಸಿದೆ.
ಒಟ್ಟಾರೆ 1.25%ರಷ್ಟು ಇಳಿಕೆ ನಡೆದಿದ್ದು, ಇದರ ಪರಿಣಾಮವಾಗಿ ಬಹುತೇಕ ಎಲ್ಲಾ ಬ್ಯಾಂಕುಗಳು ಎಫ್‌ಡಿ ಬಡ್ಡಿದರಗಳನ್ನು ಕಡಿತಗೊಳಿಸಿವೆ. ಆದರೆ ಅಂಚೆ ಕಚೇರಿ (Post Office – PO) ಮಾತ್ರ ತನ್ನ ಠೇವಣಿ ಯೋಜನೆಗಳ ಬಡ್ಡಿದರಗಳನ್ನು ಹಾಗೇ ಉಳಿಸಿಕೊಂಡಿದೆ.
ಅಂಚೆ ಕಚೇರಿ (Post Office – PO) ಟಿಡಿ ಯೋಜನೆ ಯಾಕೆ ವಿಶೇಷ?
ಅಂಚೆ ಕಚೇರಿ ಸಮಯ ಠೇವಣಿ ಯೋಜನೆಗೆ ಸರ್ಕಾರದ ಭದ್ರತೆ ಇರುವುದೇ ಪ್ರಮುಖ ಆಕರ್ಷಣೆ.
ಅದೇಂತೆ:
ಇದನ್ನು ಓದಿ : ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!
- 5 ವರ್ಷಗಳ ಟಿಡಿಗೆ 7.5% ಬಡ್ಡಿ — ಬ್ಯಾಂಕ್‌ಗಳು ಸಾಮಾನ್ಯವಾಗಿ ನೀಡುವುದಕ್ಕಿಂತ ಹೆಚ್ಚು.
- ಹೂಡಿಕೆ ಸಂಪೂರ್ಣ ಅಪಾಯ–ರಹಿತ.
- ಸಾಮಾನ್ಯರು ಮತ್ತು ಹಿರಿಯ ನಾಗರಿಕರಿಗೆ ಒಂದೇ ಬಡ್ಡಿದರ (ಹಿರಿಯರಿಗೆ ಕೆಲ ಯೋಜನೆಗಳಲ್ಲಿ ಹೆಚ್ಚುವರಿ ಪ್ರಯೋಜನವಿದ್ದರೂ, ಇಲ್ಲಿ ಎರಡಿಗೂ ಸಮಾನ).
- ಮ್ಯಾಚ್ಯುರಿಟಿ ಮೊತ್ತ ಖಚಿತ.
ಹೂಡಿಕೆದಾರರಿಗೆ ದೊಡ್ಡ ಲಾಭ :
ಮಾರುಕಟ್ಟೆ ಅಸ್ಥಿರತೆ ಮತ್ತು ಬ್ಯಾಂಕ್‌ಗಳಲ್ಲಿ ಕಡಿಮೆಯಾಗುತ್ತಿರುವ FD ಬಡ್ಡಿದರಗಳನ್ನು ಗಮನಿಸಿದರೆ, ಅಂಚೆ ಕಚೇರಿ (Post Office – PO) TD ಯೋಜನೆ 5 ವರ್ಷಗಳ ನಿರಂತರ ಮತ್ತು ಭದ್ರ ಆದಾಯಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.
DCC ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ; ಅರ್ಜಿ ಸಲ್ಲಿಕೆ ಆರಂಭ.

ಜನಸ್ಪಂದನ ನ್ಯೂಸ್, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು DCC Bank ಹುದ್ದೆಗಳ ವಿವರ :
- ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
- ಸಹಾಯಕರು (Assistants) – 45 ಹುದ್ದೆಗಳು.
- ಅಟೆಂಡರ್ (Attender) – 10 ಹುದ್ದೆಗಳು.
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
DCC Bank ವಿದ್ಯಾರ್ಹತೆ :
1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.
- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.
2. ಸಹಾಯಕರು – 45 ಹುದ್ದೆಗಳು.
- ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.
3. ಅಟೆಂಡರ್ – 10 ಹುದ್ದೆಗಳು.
- ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
ವಯೋಮಿತಿ :
- ಕನಿಷ್ಠ: 18 ವರ್ಷ
- ಗರಿಷ್ಠ: 35 ವರ್ಷ
ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.
ವಯೋಮಿತಿ ಸಡಿಲಿಕೆ :
- 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
- SC / ST ಅಭ್ಯರ್ಥಿಗಳು : 5 ವರ್ಷಗಳು.
ಅರ್ಜಿ ಶುಲ್ಕ (Application Fee) :
1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :
- ಸಾಮಾನ್ಯ ಮೆರಿಟ್ (GM) : ರೂ.1600/-
- ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-
2. ಅಟೆಂಡರ್ ಹುದ್ದೆ :
- ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
- ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-
ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಆಯ್ಕೆ ವಿಧಾನ :
ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:
- ಲಿಖಿತ ಪರೀಕ್ಷೆ
- ಸಂದರ್ಶನ (Interview)
DCC Bank ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ → https://tascguru.com/raichur-dcc-bank/
- ಹೋಮ್‌ಪೇಜ್‌ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
- ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
- ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
- ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
- ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಲು ಚಲನ್ (Challan) ಪ್ರಿಂಟ್ ತೆಗೆದುಕೊಳ್ಳಿ.
- ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
- ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.
ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ
ಮುಖ್ಯ ದಿನಾಂಕಗಳು :
- ಅರ್ಜಿ ಪ್ರಾರಂಭ : ನವೆಂಬರ್ 21, 2025.
- ಕೊನೆಯ ದಿನ : ಡಿಸೆಂಬರ್ 22, 2025.
ಮುಖ್ಯ ಸೂಚನೆ :
- ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
👉 ascguru.com/raichur-dcc-bank
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






