ಗುರುವಾರ, ನವೆಂಬರ್ 27, 2025

Janaspandhan News

HomeGeneral Newsಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.
spot_img
spot_img
spot_img

ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

- Advertisement -

ಜನಸ್ಪಂದನ ನ್ಯೂಸ್‌, ದಾವಣಗೆರೆ : ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಚಿನ್ನದ ದರೋಡೆ ಪ್ರಕರಣದಲ್ಲಿ ಓರ್ವ PSI ಅವರನ್ನು ವಜಾ ಮಾಡಿ ಮತ್ತು ಇನ್ನೋರ್ವ PSI avrnfnu ಸಸ್ಪೆಂಡ್ ಮಾಡಿ ಆದೇಶಿಸಿಲಾಗದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಹಂಸಭಾವಿ ಪೊಲೀಸ್‌ ಠಾಣೆಯ PSI ಮಾಳಪ್ಪ ಚಿಪ್ಪಲಕಟ್ಟಿ ಸೇವೆಯಿಂದ ವಜಾಗೊಂಡಿದ್ದು, ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್‌ ಠಾಣೆಯ PSI ಪ್ರವೀಣಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಮತ್ತು ಇಲಾಖಾ ವಿಚಾರಣೆಗೆ ಕಳುಹಿಸಲಾಗಿದೆ.

ಇದನ್ನು ಓದಿ : “ಯಮನಿಗೂ ತಡೆದ ವೃದ್ಧ : Train ಹಳಿಯ ಬಳಿ ನಡೆದ ಅಚ್ಚರಿಯ ಘಟನೆ ; ವಿಡಿಯೋ ನೋಡಿ,!”

ನವೆಂಬರ್ 24ರಂದು ಬೆಳಗಿನ ಜಾವ, ಈ ಇಬ್ಬರು PSIಗಳು ತಮ್ಮ ಪರಿಚಯದಲ್ಲಿರುವ ಮೂವರನ್ನು ಸೇರಿಸಿಕೊಂಡು ಕಾರವಾರದ ಚಿನ್ನಾಭರಣ ತಯಾರಕ ವಿಶ್ವನಾಥ್ ಆರ್ಕಸಾಲಿ ಅವರನ್ನು ಆಟಿಕೆ ಗನ್ ತೋರಿಸಿ ಬೆದರಿಸಿ 78.15 ಗ್ರಾಂ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣ ಕಿತ್ತುಕೊಂಡಿದ್ದರು.

ಪ್ರಕರಣದ ಸಂಬಂಧ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಇಬ್ಬರನ್ನೂ ಸೋಮವಾರ ಬಂಧಿಸಲಾಗಿತ್ತು.

ಇದನ್ನು ಓದಿ : IAS ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದುರ್ಮರಣ.

ಸಾರ್ವಜನಿಕರ ಸುರಕ್ಷತೆ ಮತ್ತು ನ್ಯಾಯದ ಪಾಲನೆಯ ಹೊಣೆದಾರಿ ಹುದ್ದೆಯಲ್ಲಿ ಇದ್ದವರು, ಈ ಘೋರ ಅಪರಾಧ ಕೃತ್ಯಕ್ಕೆ ಒಳಗಾದ ಕಾರಣ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.


ಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!

tiger rests on highway

ಜನಸ್ಪಂದನ ನ್ಯೂಸ್‌, ಮುಂಬೈ : ಮಹಾರಾಷ್ಟ್ರದ ಚಂದ್ರಾಪುರ–ಮುಲ್ ಹೆದ್ದಾರಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ದಾಖಲಾಗಿದೆ. ಬೃಹತ್ ಗಾತ್ರದ ಹುಲಿ (Tiger) ಎರಡು ಎತ್ತುಗಳನ್ನು ಬೇಟೆಯಾಡಿದ ನಂತರ, ಹೆದ್ದಾರಿಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದರು.

ಈ ಪ್ರದೇಶವು ತಡೋಬಾ–ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ (TATR) ಬಫರ್ ವಲಯಕ್ಕೆ ಹೊಂದಿಕೊಂಡಿದ್ದು, ಇಲ್ಲಿ ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದ್ದರೂ, ರೋಡ್ ಮಧ್ಯೆ ಕುಳಿತುಕೊಳ್ಳುವ ಘಟನೆ ವಿರಳ.

ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.
‘ಮಾಮಾ ಮೆಲ್’ ಹೆಸರಿನ ಹುಲಿ – ದಿಟ್ಟ ಸ್ವಭಾವಕ್ಕೆ ಪ್ರಸಿದ್ಧ :

ಮಾಮಾ ಮೆಲ್’ ಎಂಬ ಹೆಸರಿನ ಈ ಹುಲಿ (Tiger), ತನ್ನ ಬಲಿಷ್ಠ ದೇಹ ಹಾಗೂ ನಿರ್ಭಯ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ರಸ್ತೆ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಜನರ ಶಬ್ದ ಅಥವಾ ಚಲನೆ ಈ ಹುಲಿಗೆ ಯಾವುದೇ ತೊಂದರೆ ಆಗಲಿಲ್ಲ. ಅದು ಸಮಯದಲ್ಲಿ ನಿರಾಳವಾಗಿ ರಸ್ತೆಯ ಮಧ್ಯೆ ಮಲಗಿ ವಿಶ್ರಾಂತಿ ಮುಂದುವರಿಸಿತು.

ವಾಹನ ಸಂಚಾರ ಅರ್ಧ ಗಂಟೆ ಸ್ಥಗಿತ :

ಹುಲಿ (Tiger) ರಸ್ತೆ ಮಧ್ಯೆ ಕುಳಿತಿದ್ದರಿಂದ, ಚಂದ್ರಾಪುರದಿಂದ ಮುಲ್ ಹಾಗೂ ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳ ಸಂಚಾರವನ್ನು ಅರಣ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದರು.

  • ವಾಹನಗಳ ಮತ್ತು ಹುಲಿಯ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಯಿತು
  • ಜನರು ಮೊಬೈಲ್‌ ತೆಗೆದು ಹತ್ತಿರ ಹೋಗದಂತೆ ಎಚ್ಚರಿಸಲಾಯಿತು
  • ಪ್ರಾಣಿಗೆ ಅಡ್ಡಿಯಾಗದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಹುಲಿ (Tiger) ವಿಡಿಯೋ :
ತಾನಾಗಿಯೇ ಕಾಡಿಗೆ ಮರಳಿದ ಹುಲಿ :

ಸುಮಾರು 30 ನಿಮಿಷಗಳ ಕಾಲ ಹೆದ್ದಾರಿ ಸಂಪೂರ್ಣ ನಿಶ್ಶಬ್ದವಾಗಿತ್ತು. ಬಳಿಕ ಹುಲಿ ನಿಧಾನವಾಗಿ ಎದ್ದುಕೊಂಡು, ತನ್ನಷ್ಟಕ್ಕೆ ತಾನೇ ಕಾಡಿನ ದಿಕ್ಕಿಗೆ ನಡೆದು ಹೊಗಿತು. ಅರಣ್ಯ ಇಲಾಖೆ ಹುಲಿ (Tiger) ಯ ಚಲನವಲನವನ್ನು ಗಮನಿಸಿ, ಪ್ರಯಾಣಿಕರಿಗೆ ಸುರಕ್ಷತೆ ನೀಡಿದ ಬಳಿಕ ಸಂಚಾರವನ್ನು ಮರು ಪ್ರಾರಂಭಿಸಿತು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments