ಶುಕ್ರವಾರ, ನವೆಂಬರ್ 28, 2025

Janaspandhan News

HomeCrime NewsIAS ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದುರ್ಮರಣ.
spot_img
spot_img
spot_img

IAS ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದುರ್ಮರಣ.

- Advertisement -

ಜನಸ್ಪಂದನ ನ್ಯೂಸ್‌, ಕಲಬುರಗಿ : ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (IAS Mahantesh Bilagi) ರಸ್ತೆ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ.

ಈ ದುರ್ಘಟನೆಯಲ್ಲಿ ಅವರ ಸಹೋದರರಾದ ಶಂಕರ ಬೀಳಗಿ ಮತ್ತು ಈರಣ್ಣ ಶಿರಸಂಗಿ ಸ್ಥಳದಲ್ಲೇ ಮರಣ ಹೊಂದಿದ್ದಾರೆ.

ಇದನ್ನು ಓದಿ : “ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.
ಎಲ್ಲಿ ಮತ್ತು ಹೇಗೆ ಅಪಘಾತ ಸಂಭವಿಸಿತು?

ವಿಜಯಪುರದಿಂದ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕಾಗಿ ಕಲಬುರಗಿಗೆ ತೆರಳುತ್ತಿದ್ದ ವೇಳೆ, ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಘಟನೆ ನಡೆದಿರುವ ಮಾಹಿತಿ ದೊರೆತಿದೆ.

ಹಠಾತ್ ರಸ್ತೆ ಮೇಲೆ ಅಡ್ಡ ಬಂದ ಶ್ವಾನವನ್ನು ತಪ್ಪಿಸಲು ಪ್ರಯತ್ನಿಸಿದಾಗ, KA 04 NC 7982 ನಂಬರಿನ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿಕಿತ್ಸೆಯ ವೇಳೆ ಪ್ರಾಣ ಕಳೆದುಕೊಂಡ IAS ಅಧಿಕಾರಿ :

ಅಪಘಾತದ ನಂತರ IAS ಮಹಾಂತೇಶ್ ಬೀಳಗಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ : ಬ್ರೇಕಿಂಗ್ : ವಂದೇ ಭಾರತ್ ರೈಲು ದುರಂತ ; Lover ಆತ್ಮಹತ್ಯೆ ಶಂಕೆ.
ಮಹಾಂತೇಶ್ ಬೀಳಗಿ ಯಾರು?
  • ಜನನ:  27 ಮಾರ್ಚ್ 1974
  • ಕೇಡರ್ : 2012ರ ಕರ್ನಾಟಕ IAS ಕೇಡರ್
  • ಪದವಿ : ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ
  • ಹಿಂದಿನಿಂದ ಬೆಸ್ಕಾಂ (BESCOM) MD ಆಗಿ ಕಾರ್ಯನಿರ್ವಹಿಸಿದ್ದರು.
  • ದಾವಣಗೆರೆ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದರು.

Disclaimer : ಈ ಮಾಹಿತಿ ಅಧಿಕೃತ ಮೂಲಗಳು ಮತ್ತು ಸ್ಥಳೀಯ ವರದಿಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ತನಿಖಾ ವಿವರಗಳು ಅಧಿಕೃತ ದೃಢೀಕರಣಕ್ಕೆ ಒಳಪಟ್ಟಿವೆ. ಯಾವುದೇ ಸಂಶೋಧನಾ ಫಲಿತಾಂಶ ಅಥವಾ ಅಧಿಕೃತ ಪ್ರಕಟಣೆ ಹೊರಬಂದಲ್ಲಿ ಮಾಹಿತಿಯಲ್ಲಿ ಬದಲಾವಣೆ ಸಂಭವಿಸಬಹುದು.


ಬ್ರೇಕಿಂಗ್ : ವಂದೇ ಭಾರತ್ ರೈಲು ದುರಂತ ; Lover ಆತ್ಮಹತ್ಯೆ ಶಂಕೆ.

Lover

ಜನಸ್ಪಂದನ ನ್ಯೂಸ್, ಬೆಂಗಳೂರು : ಉನ್ನತ ಶಿಕ್ಷಣಕ್ಕಾಗಿ ದೂರದ ರಾಜ್ಯದಿಂದ ಯುವಕ – ಯುವತಿ ಬೆಂಗಳೂರಿಗೆ ಬಂದಿದ್ದರು. ಜೊಡಿ ಹಕ್ಕಿಗಳಂತೆ ಓಡಾಡುತ್ತಿದ್ದ ಈ ಪ್ರೇಮಿಗಳು (lover) ಮದುವೆಯ ಕನಸು ಕೂಡ ಕಾಣುತ್ತಿದ್ದರು.
ಆದರೆ ಭಾನುವಾರ ಬೆಳಿಗ್ಗೆ ಎಂದಿನಂತೆ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಿ ತಮ್ಮ ಪಿಜಿಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

 

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments