ಜನಸ್ಪಂದನ ನ್ಯೂಸ್, ಮಡಿಕೇರಿ : ಸೋಮವಾರಪೇಟೆ ತಾಲ್ಲೂಕಿನ ಪ್ರದೇಶದಲ್ಲಿ ಸೋಮವಾರ ವ್ಯಕ್ತಿ (ಪತಿ) ಯೋರ್ವ, ಪತ್ನಿಯೊಂದಿಗೆ ವಿಡಿಯೋ ಕಾಲ್ (Call) ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಡಿಯೋ ಕಾಲ್ (Call) ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಮೃತ ವ್ಯಕ್ತಿ (ಪತಿ) ಯನ್ನು ಕೀರ್ತನ್ (36) ಎಂದು ಗುರುತಿಸಲಾಗಿದೆ.
ಪೊಲೀಸರು ಮಾಹಿತಿ ನೀಡಿರುವಂತೆ, ಕೀರ್ತನ್ ಕೆಲವು ದಿನಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದರು. ಪತಿ ಜೈಲಿಗೆ ಹೋದ ಸಂದರ್ಭದಲ್ಲಿ ಪತ್ನಿ ತವರು ಮನೆ ಸೇರಿಕೊಂಡಿದ್ದರು.
ಇದನ್ನು ಓದಿ : Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!
ಕೆಲವು ದಿನಗಳ ಹಿಂದೆ ಜೈಲಿನಿಂದ ರಿಲೀಸ್ ಆದ ನಂತರ ಪತಿ ತಮ್ಮ ಪತ್ನಿಯನ್ನು ನವೆಂಬರ್ 15 ರಂದು ಮನೆಗೆ ಕರೆತರಲು ಹೋಗಿದ್ದರು. ಆದರೆ ಎಷ್ಟೇ ಕರೆದರೂ ಆದರೆ ಪತ್ನಿ ನಿರಾಕರಿಸಿದ್ದಾರೆ.
ಈ ಕಾರಣದಿಂದ ಮನನೊಂದು, ವಿಡಿಯೋ ಕಾಲ್ (Call) ನಲ್ಲಿ ಮಾತನಾಡುತ್ತಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಗುರುವಾರ ಬೆಳಿಗ್ಗೆ ಪತ್ತೆ ಮಾಡಲಾಗಿದೆ.
ಕೀರ್ತನ್ ಕಳೆದ ಕೆಲ ದಿನಗಳಲ್ಲಿಯೂ ಸಹ ಹಲವು ಬಾರಿ ಆತ್ಮಹತ್ಯೆ ಮಾಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದ ಮಾಹಿತಿ ಕುಟುಂಬದಿಂದ ಲಭ್ಯವಾಗಿದೆ. ಸದ್ಯ ಮೃತದೇಹ ಪತ್ತೆಯಾಗಿದೆ.
ಘಟನೆಯ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಇದನ್ನು ಓದಿ : Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.
ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ : ಈ ತಾಯಿಯ Technique ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸುಮಾರು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮೊಬೈಲ್ ಈಗ ಅವಶ್ಯಕ ವಸ್ತುವಾಗಿ ಪರಿಣಮಿಸಿದೆ. ಎಷ್ಟೇ ಕೆಲಸ ಇದ್ದರೂ ಮಧ್ಯೆ ಒಂದು ಕ್ಷಣ ಫ್ರೀ ಮಾಡಿ ಮೊಬೈಲ್ ನೋಡುವವರು ಅದೆಷ್ಟೋ ಜನ ಇದ್ದಾರೆ.
ವಿಶೇಷವಾಗಿ ಪುಟ್ಟ ಮಕ್ಕಳು ಶಾಲೆಗೆ ಹೋಗುವ ಮುನ್ನ ಅಥವಾ ರಜೆಯ ದಿನಗಳಲ್ಲಿ ಮೊಬೈಲ್ ಬಳಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದನ್ನು ಗಮನಿಸಲಾಗಿದೆ.
ಇದನ್ನು ಓದಿ : ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?
ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿರುವುದು :
- ರಜೆಯ ದಿನಗಳಲ್ಲಿ ಮಕ್ಕಳು ತಾಯಿಯ ಮೊಬೈಲ್ ತೆಗೆದುಕೊಂಡು ರೀಲ್ಸ್, ಗೇಮ್ಸ್, ವಿಡಿಯೋಗಳನ್ನು ನೋಡುತ್ತಾರೆ.
- ಮನೆ ಹೊರಗಿನ ಪರಿಸರದಲ್ಲಿ ಆಟವಾಡುವ ವ್ಯವಸ್ಥೆ ಕಡಿಮೆ ಇದ್ದ ಕಾರಣ, ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವು ಕಡಿಮೆಯಾಗುತ್ತಿದೆ.
- ಮಕ್ಕಳು ಮನೆಯೊಳಗೆ ಕುಳಿತು ಟಿವಿ, ಮೊಬೈಲ್ ಬಳಕೆ ಮಾಡುತ್ತಲೇ ದಿನ ಕಳೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ :
ಇತ್ತೀಚೆಗೆ, ಕ್ರೇಜಿ ಅದಿತಿ (crazy__aditi) ಎಂಬ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಾಯಿ ತನ್ನ ಪುಟ್ಟ ಮಗುವನ್ನು ಮೊಬೈಲ್ ಬಳಕೆಯಿಂದ ದೂರ ಇರಿಸಲು ವಿಶೇಷ ವಿಧಾನ (Technique) ಬಳಸಿದ್ದಾಳೆ:
- ಮಗುವಿನ ಕಣ್ಣುಗಳ ಸುತ್ತ ಕಪ್ಪು ರೇಖೆ ಹಚ್ಚಿ (ಅಂದರೆ Technique ಬಳಸಿ), ಮೊಬೈಲ್ ನೋಡುತ್ತಿದ್ದ ಕಾರಣ ಕಣ್ಣಿನ ಸುತ್ತ ಕಪ್ಪು ಕಲೆ ಉಂಟಾಗಿದೆ ಎಂದು ಮಗುವಿಗೆ ಹೇಳಿದರು.
- ಮಗುವನ್ನು ಕನ್ನಡಿ ಮುಂದೆ ಹೋಗಿ ತನ್ನ ಮುಖ ನೋಡಲು ಹೇಳುತ್ತಾರೆ. ಮಗುವು ತನ್ನ ಮುಖ ನೋಡಿದಾಗ ಅಳಲು ಶುರುಮಾಡುತ್ತಾನೆ.
ಎನಂದ್ರು ನೆಟ್ಟಿಗರು :
- ಕೆಲವು ನೆಟ್ಟಿಗರು ತಾಯಿ ಮೊಬೈಲ್ ನಿಂದ ಮಗುವನ್ನು ದೂರ ಇರಿಸಲು ಒಳ್ಳೆಯ ವಿಧಾನ ಬಳಸಿ ಎಂದೂ ಪ್ರಶಂಸೆ ಮಾಡುತ್ತಿದ್ದಾರೆ.
- ಇತರರು ಕಣ್ಣಿನ ಸುತ್ತ ಕಪ್ಪು ರೇಖೆ ಹಚ್ಚುವುದು ಮಕ್ಕಳಿಗೆ ಅಪಾಯಕಾರಿಯಾಗಿ ಬಿಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!
Technique : ಮಕ್ಕಳಿಗೆ ಮೊಬೈಲ್ ಬಳಕೆ ನಿಯಂತ್ರಿಸುವುದು :
- ಮೊಬೈಲ್ ವೀಕ್ಷಣೆಗೆ ಸಮಯ ನಿರ್ಧರಿಸಿ.
- ಪುಟ್ಟ ಮಕ್ಕಳಿಗೆ ಆಟವಾಡಲು ಮತ್ತು ಹೊರಗೆ ಸುತ್ತಾಡಲು ಅವಕಾಶ ನೀಡಿ.
- ಪೋಷಕರು ಮೊಬೈಲ್ ಬಳಕೆಯಲ್ಲಿ ಮಾದರಿಯಾಗಿರಬೇಕು.
- ಮೊಬೈಲ್ ಗೇಮ್ಸ್ ಮತ್ತು ರೀಲ್ಸ್ ಪರಿಮಿತ ಸಮಯ ಮಾತ್ರ ಬಳಸಲು ಮಕ್ಕಳಿಗೆ ಕಲಿಸಿ.
ತಾಯಿಯ ಮಾಡಿರುವ Technique ವಿಡಿಯೋ :
View this post on Instagram
ಸಂಪಾದಕೀಯ : ಈ ವಿಡಿಯೋ ವಿಶೇಷ ಪ್ರದೇಶದವೋ ಅಥವಾ ಸ್ಥಳೀಯವೋ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಮಕ್ಕಳಲ್ಲಿ ಮೊಬೈಲ್ ಬಳಕೆಯು ಹಾಳು ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಬಗ್ಗೆ ಶೀಘ್ರ ಜಾಗೃತಿ ಅಗತ್ಯವಿದೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







