Thursday, September 19, 2024
spot_img
spot_img
spot_img
spot_img
spot_img
spot_img
spot_img

ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ 3 ವರ್ಷದ ಮಗು ; ಬೆಚ್ಚಿಬೀಳಿಸುವ ವಿಡಿಯೋ‌ ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ.

ಇನ್ನೂ ಕೆಲವು ದೃಶ್ಯಗಳು ಹೀಗೂ ನಡೆಯಲು ಸಾಧ್ಯವೇ ಎಂದು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಜೊತೆ ಜೊತೆಗೆ ಭಯವನ್ನೂ ಹುಟ್ಟಿಸುತ್ತದೆ.

ಇದನ್ನು ಓದಿ : ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಗ್ರೂಪ್ A & B ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ.!

ಗಾಳಿಪಟ ಉತ್ಸವದಲ್ಲಿ ನೆರೆದಿದ್ದ ಜನರೆಲ್ಲರೂ ಗಾಳಿಪಟ ಹಾರಿಸುತ್ತಿದ್ದ ವೇಳೆ, ಮೂರು ವರ್ಷದ ಹೆಣ್ಣು ಮಗುವೊಂದು ದೈತ್ಯ ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಿ ಹೋದ ಘಟನೆ ನಡೆದಿದೆ.

ಆಘಾತಕಾರಿ ಘಟನೆಯ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್‌ ಮಗುವನ್ನು ರಕ್ಷಿಸಲಾಗಿದ್ದು, ಈ ದೃಶ್ಯಾವಳಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

2020 ರಲ್ಲಿ ತೈವಾನ್‌ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹ್ಸಿಂಚು ನಗರದಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಏರ್ಪಡಿಸಲಾಗಿತ್ತು. ಬೃಹತ್‌ ಗಾತ್ರದ ಗಾಳಿಪಟವನ್ನು ಹಾರಿಸುವ ವೇಳೆ, ಆ ಗಾಳಿಪಟವನ್ನು ಹಿಡಿದು ನಿಂತಿದ್ದ ಮೂರು ವರ್ಷ ವಯಸ್ಸಿನ ಪುಟ್ಟ ಬಾಲಕಿಯೊಬ್ಬಳು ಅದರೊಂದಿಗೆ ಎತ್ತರಕ್ಕೆ ಹಾರಿ ಹೋಗಿದ್ದಾಳೆ.

ಇದನ್ನು ಓದಿ : ಮಾವುತನನ್ನೇ ತನ್ನ ಎರಡು ಕಾಲುಗಳಿಂದ ಹಿಸುಕಿ ಹಾಕಿದ ಆನೆ ; ಭಯಾನಕ ವಿಡಿಯೋ ವೈರಲ್.!

ಸೆಕೆಂಡುಗಳ ಬಳಿಕ ಮಗು ಸೇಫ್‌ ಆಗಿ ಕೆಳಗೆ ಬಿದ್ದಿದೆ. ಈ ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ.

@nagiuscorporation ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಈ ಕುರಿತ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ಗಾಳಿಪಟ ಉತ್ಸವದಲ್ಲಿ ನೆರೆದಿದ್ದ ಜನರೆಲ್ಲರೂ ಬೃಹತ್‌ ಗಾಳಿಪಟವನ್ನು ಹಾರಿಸಲು ತಯಾರಿ ನಡೆಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಈ ವೇಳೆ ಗಾಳಿಪಟವನ್ನು ಕೈ ಹಿಡಿದುಕೊಂಡಿದ್ದ ಮೂರು ವರ್ಷದ ಮಗುವೊಂದು ಕೂಡಾ ಗಾಳಿಪಟದ ಸಮೇತ ಮೇಲಕ್ಕೆ ಹಾರಿ ಹೋಗಿದೆ. ಮಗು ಆಕಾಶದಲ್ಲಿ ಹಾರುವುದನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ನಂತರ ಗಾಳಿಪಟ ಕೆಳಗೆ ಬಂದಂತೆ ಮಗುವನ್ನು ರಕ್ಷಿಸಲಾಗಿದೆ.

ಇದನ್ನು ಓದಿ : ಕೇಂದ್ರ ಕಾರ್ಮಿಕ & ಔದ್ಯೋಗಿಕ ಇಲಾಖೆಯ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 22.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ 1.2 ಮಿಲಿಯನ್‌ ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img