Saturday, July 13, 2024
spot_img
spot_img
spot_img
spot_img
spot_img
spot_img

ಮಾವುತನನ್ನೇ ತನ್ನ ಎರಡು ಕಾಲುಗಳಿಂದ ಹಿಸುಕಿ ಹಾಕಿದ ಆನೆ ; ಭಯಾನಕ ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ತಿರುವನಂತಪುರ : ಸಾಕಿದ ಆನೆಯೊಂದು ಮಾವುತನನ್ನೇ ಸೊಂಡಿಲಿನಿಂದ ಬೀಳಿಸಿ ಎರಡು ಕಾಲುಗಳಿಂದ ತುಳಿದು ಸಾಯಿಸಿರುವ ಘಟನೆಯೊಂದು ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಈ ಬೆಚ್ಚಿಬೀಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಆನೆ ನಿರ್ದಯದವಾಗಿ ಮಾವುತನನ್ನು ಕೊಂದಿರುವ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ಇದನ್ನು ಓದಿ : ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಗ್ರೂಪ್ A & B ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ.!

ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಾವುತನ ಸಾವಿನ ಬಳಿಕ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಮೃತ ಮಾವುತನನ್ನು 62 ವರ್ಷದ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಮೃತ ಮಾವುತನನ್ನು ನೀಲೇಶ್ವರಂ ನಿವಾಸಿಯಾಗಿದದ್ದ ಬಾಲಕೃಷ್ಣ ಎಂದು ಹೇಳಲಾಗುತ್ತಿದೆ. ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಇದನ್ನು ಓದಿ : Morning ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

ಇನ್ನೇನು ಮಾವುತ ಬಾಲಕೃಷ್ಣ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಸಿದ್ಧವಾಗುವಾಗಲೇ ಈ ದುರಂತ ಸಂಭವಿಸಿದೆ.

spot_img
spot_img
- Advertisment -spot_img