kiwi fruit benefits for eye health 1

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ಜನಸ್ಪಂದನ ನ್ಯೂಸ್‌, ಆರೋಗ್ಯ : ಆರೋಗ್ಯ ಪ್ರಿಯರಿಗೆ ಕಿವಿ ಹಣ್ಣು ಹೊಸದಾಗಿ ಪರಿಚಯವಾದರೂ, ಇದರ ಪೌಷ್ಟಿಕತೆ ಅಚ್ಚರಿ ಮೂಡಿಸುತ್ತದೆ. ಕಿವಿ ಹಣ್ಣು (Kiwi fruites) ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್ಸ್‌ನಿಂದ ತುಂಬಿದ ಹಣ್ಣಾಗಿದ್ದು, ದೇಹದ ಒಟ್ಟು ಆರೋಗ್ಯದ ಜೊತೆಗೆ ಕಣ್ಣುಗಳ ಆರೋಗ್ಯಕ್ಕೂ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ.

ಪ್ರತಿದಿನ ಒಂದು ಕಿವಿ ಹಣ್ಣು (Kiwi fruites) ಸೇವಿಸುವುದರಿಂದ ಕಣ್ಣಿನ ದೃಷ್ಟಿ ಹೀನತೆ, ಕಣ್ಣಿನ ಪೊರೆ ಹಾಗೂ ಅನೇಕ ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ತಡೆಯಬಹುದು. ಕಿವಿಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಕಣ್ಣುಗಳ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ನರಮಂಡಲವನ್ನು ಬಲಪಡಿಸುತ್ತವೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು ಸಹಜ, ಆದರೆ ಆಹಾರದಲ್ಲಿ ಕಿವಿ ಸೇರಿಸಿಕೊಂಡರೆ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಪೋಷಕಾಂಶಗಳು ಕಣ್ಣುಗಳ ರೆಟಿನಾವನ್ನು ರಕ್ಷಿಸುತ್ತವೆ. ಈ ಪೋಷಕಾಂಶಗಳು ದೃಷ್ಟಿ ಶಕ್ತಿಯನ್ನು ಕಾಪಾಡಿ, ಕಣ್ಣುಗಳನ್ನು ತೇಜಸ್ಸಿನಿಂದ ಕಂಗೊಳಿಸುವಂತೆ ಇಡುತ್ತವೆ.

ಕಿವಿ ಹಣ್ಣಿನ (Kiwi fruites) ರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಣ್ಣಿನ ಉರಿಯೂತ, ಕಿರಿಕಿರಿ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತವೆ. ಹಣ್ಣುಗಳಲ್ಲಿ ಕಿತ್ತಳಿಗಿಂತ ಎರಡು ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇರುವುದರಿಂದ, ಕಿವಿ ಹಣ್ಣು ಕಣ್ಣಿನ ನೈಸರ್ಗಿಕ ರಕ್ಷಣಾ ಕವಚದಂತಿದೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಇದಲ್ಲದೆ, ಕಿವಿ ಹಣ್ಣಿನಲ್ಲಿರುವ (Kiwi fruites) ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಪೊಟ್ಯಾಸಿಯಮ್ ಪ್ರಮಾಣ ಹೆಚ್ಚು ಮತ್ತು ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೂ ಇದು ಉತ್ತಮ ಆಯ್ಕೆ.

ತಾಮ್ರ ಅಂಶ ಹೆಚ್ಚಿರುವುದರಿಂದ ಕಿವಿ ಹಣ್ಣು (Kiwi fruites) ಕಣ್ಣುಗಳ ನರಮಂಡಲಕ್ಕೆ ಶಕ್ತಿ ನೀಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಣ್ಣುಗಳ ಊತ ಮತ್ತು ಅಸಹನೆಯನ್ನು ಕಡಿಮೆ ಮಾಡುತ್ತವೆ. ನಿಯಮಿತವಾಗಿ ಕಿವಿ ಸೇವನೆಯಿಂದ ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನೂ ತಡೆಹಿಡಿಯಬಹುದು, ಏಕೆಂದರೆ ಇವುಗಳೆರಡೂ ಕಣ್ಣಿನ ಆರೋಗ್ಯಕ್ಕೆ ನೇರ ಸಂಬಂಧ ಹೊಂದಿವೆ.

ಬೆಳಗಾವಿ : ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ, lathicharge ; ಕಲ್ಲು ತೂರಾಟ.!

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಕಿವಿ ಹಣ್ಣನ್ನು ಆಹಾರದಲ್ಲಿ ಸೇರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳಿತು.


Road ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ; ಭಯಾನಕ ವಿಡಿಯೋ ವೈರಲ್!

road accident two youths death viral video

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಂಧ್ರಪ್ರದೇಶದ ಬಾಪಟ್ಲಾ (Bapatla) ತಾಲ್ಲೂಕಿನಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಯುವಕರ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ರಾತ್ರಿ ವೇಳೆ ನಡೆದಿದ್ದು, ಬೈಕ್ ಸವಾರ ವೇಗವಾಗಿ ರಸ್ತೆ (Road) ಯಲ್ಲಿ ಸಂಚರಿಸುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿರುವುದರಿಂದ ಈ ಅಪಘಾತ ಸಂಭವಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ರಸ್ತೆ (Road) ಅಪಘಾತ ನಡೆಯುತ್ತಿದಂತೆಯೇ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಗಂಭೀರವಾಗಿ ಗಾಯಗೊಂಡ ಇಬ್ಬರೂ ಯುವಕರು ಆಸ್ಪತ್ರೆಗೆ ದಾಖಲಾಗುವ ಮೊದಲೇ ಪ್ರಾಣ ಕಳೆದುಕೊಂಡರು.

ಈ ರಸ್ತೆ (Road) ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ರಸ್ತೆ (Road) ಅಪಘಾತದ ಕುರಿತಾಗಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಲಾರಿ ಚಾಲಕನನ್ನು ಹುಡುಕಾಟ ಮಾಡುತ್ತಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ಈ ಪ್ರಕರಣವು ರಸ್ತೆ (Road) ಸುರಕ್ಷತೆ ಕುರಿತಾಗಿ ಸಾರ್ವಜನಿಕರಲ್ಲಿ ಎಚ್ಚರಿಕೆಯನ್ನು ಮೂಡಿಸಿದ್ದು, ವಾಹನ ಚಾಲಕರಿಗೆ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ತೋರಿಸುತ್ತದೆ.

ವಿಡಿಯೋ ನೋಡಿ :

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top