ಜನಸ್ಪಂದನ ನ್ಯೂಸ್, ಡೆಸ್ಕ್ : ಕಿಡಿಗೇಡಿ ಕ್ಯಾಬ್ ಡ್ರೈವರ್ (Cab Driver) ಓರ್ವ ದಾಖಲೆ ಪರಿಶೀಲನೆ ವೇಳೆ ಟ್ರಾಫಿಕ್ ಪೊಲೀಸ್ನನ್ನೇ ಕಾರಿನಲ್ಲಿ ಎಳೆದೊಯ್ದ ಘಟನೆ ಹರ್ಯಾಣದ ಬಲ್ಲಾಬ್ಗರ್ (Ballabgarh) ನಲ್ಲಿ ನಡೆದಿದೆ.
ಟ್ರಾಫಿಕ್ ಸಿಗ್ನಲ್ ಬಿದ್ದ ತಕ್ಷಣ ಟ್ರಾಫಿಕ್ ಪೊಲೀಸ್ ಕಾರೊಂದನ್ನು ತಡೆದು ದಾಖಲೆ ಪರಿಶೀಲನೆ ಮುಂದಾಗಿದ್ದಾರೆ. ಆದರೆ ಕ್ಯಾಬ್ ಡ್ರೈವರ್ ಟ್ರಾಫಿಕ್ ಪೊಲೀಸ್ನನ್ನೇ ಕಾರಿನಲ್ಲಿ ಎಳೆದೊಯ್ದಿದ್ದು ಘಟನೆ ನಡೆದಿದೆ. ಸದ್ಯ ಈ ಶಾಕಿಂಗ್ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ಇದನ್ನೂ ಓದಿ : ಪ್ರತಿದಿನ ಬೆಳಿಗ್ಗೆ 3 ಬಾದಾಮಿಯನ್ನು ತಿನ್ನುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೇ ಗೋತ್ತಾ.?
ರಾಜಸ್ಥಾನ ನೋಂದಣಿ ಕಾರನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆ ಪರಿಶೀಲನೆಗೆ ಮುಂದಾಗುತ್ತಾರೆ. ದಾಖಲೆ ಪರಿಶೀಲನೆ ವೇಳೆ ಕಾರು ಚಾಲಕ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ನಡುವೆ ಭಾರೀ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಕೋಪಗೊಂಡ ಚಾಲಕ ಕಾರು ಚಲಾಯಿಸಿದ್ದಾನೆ. ಆದರೆ ಪೊಲೀಸ್ ಕಾರಿನ ಬಾಗಿಲಿನಲ್ಲಿ ನೇತಾಡುತ್ತಾ ಹಾಗೆ ಕಾರಿನಲ್ಲಿ ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ. ಸ್ವಲ್ಪ ಮುಂದಕ್ಕೆ ಕಾರು ಚಲಾಯಿಸಿದ ಬಳಿಕ ತಕ್ಷಣ ನಿಲ್ಲಿಸುತ್ತಾನೆ. ಕಾರಿನಿಂದ ಮತ್ತೊರ್ವ ವ್ಯಕ್ತಿ ಹೊರಗೆ ಬರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ : ಇನ್ಫೋಸಿಸ್ ಹುಬ್ಬಳ್ಳಿ Campus ನಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗಿಗಳಿಗೆ ಆಕರ್ಷಕ ಪ್ಯಾಕೇಜ್.!
ಘಟನೆಯಲ್ಲಿ ಪೊಲೀಸ್ಗೆ ಗಂಭೀರ ಗಾಯಗಳಾಗಿವೆ. ಕಾರು ನಿಲ್ಲುತ್ತಿದ್ದಂತೆ ಚಾಲಕನನ್ನು ಕಾಲರ್ನಿಂದ ಹೊರಗೆಳೆದಿದ್ದಾನೆ.
Ballabgarh, Faridabad: When the traffic signal turned red, an Inspector of Traffic Police requested vehicle documents from a driver, sparking a dispute between them. Subsequently, the driver accelerated, dragging the traffic policeman at high speed pic.twitter.com/LsY32fsGJL
— IANS (@ians_india) June 22, 2024