Saturday, July 13, 2024
spot_img
spot_img
spot_img
spot_img
spot_img
spot_img

ಇನ್ಫೋಸಿಸ್ ಹುಬ್ಬಳ್ಳಿ Campus ನಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗಿಗಳಿಗೆ ಆಕರ್ಷಕ ಪ್ಯಾಕೇಜ್.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಯಾರಾದರೂ ಕೂಡ ಅದರ ಹುಬ್ಬಳ್ಳಿ ಕ್ಯಾಂಪಸ್​ಗೆ ವರ್ಗಾವಣೆ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಅವರಿಗೆ ಆಕರ್ಷಕ ಪ್ಯಾಕೇಜ್ ಸಿಗಲಿದೆ.

ಈ ವರ್ಗಾವಣೆ ನೀತಿಯನ್ನು ಇನ್ಫೋಸಿಸ್ ಸಂಸ್ಥೆ (Infosys employees transfer policy) ಇಂದು ಸೋಮವಾರ ಪ್ರಕಟಿಸಿದೆ. ಇನ್ಫೋಸಿಸ್​ನ ಹುಬ್ಬಳ್ಳಿ ಕ್ಯಾಂಪಸ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಉತ್ತರ ಕರ್ನಾಟಕ ಮೂಲದ ಸಾಫ್ಟ್​ವೇರ್ ಎಂಜಿನಿಯರುಗಳಿಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುವುದು ಬಹಳ ಅನುಕೂಲಕರವಾಗುತ್ತದೆ.

ಇದನ್ನೂ ಓದಿ : ಪ್ರತಿದಿನ ಬೆಳಿಗ್ಗೆ 3 ಬಾದಾಮಿಯನ್ನು ತಿನ್ನುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೇ ಗೋತ್ತಾ.?

ಇದು ಹುಬ್ಬಳ್ಳಿ ನಗರದ ಬೆಳವಣಿಗೆಗೂ ಕಾರಣ ಆಗುವ ನಿರೀಕ್ಷೆ ಇದೆ. ಆದರೆ, ಇನ್ಫೋಸಿಸ್​ನ ಈ ಹುಬ್ಬಳ್ಳಿ ಕ್ಯಾಂಪಸ್​ನಲ್ಲಿ ಕೆಲಸ ಮಾಡಲು ಹೆಚ್ಚು ಮಂದಿ ಆಸಕ್ತಿ ತೋರುತ್ತಿಲ್ಲ. ಈ ಕಾರಣಕ್ಕೆ ಸಂಸ್ಥೆ ಆಕರ್ಷಕ ಪ್ಯಾಕೇಜ್ ಮೂಲಕ ಉತ್ತೇಜನ ನೀಡುತ್ತಿದೆ.

ಎಂಟ್ರಿ ಲೆವೆಲ್ ಎನ್ನಲಾಗುವ ಎರಡು ಮತ್ತು ಮೂರನೇ ಬ್ಯಾಂಡ್​ನಲ್ಲಿನ ಉದ್ಯೋಗಿಗಳು ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್​ಗೆ ವರ್ಗಾವಣೆ ಆದರೆ ತತ್​​ಕ್ಷಣಕ್ಕೆ 25,000 ರೂ ಪ್ರೋತ್ಸಾಹಕ ಧನ ನೀಡಲಾಗುತ್ತದೆ. ಪ್ರತೀ ಆರು ತಿಂಗಳಿಗೊಮ್ಮೆ 25,000 ರೂನಂತೆ ಎರಡು ವರ್ಷದಲ್ಲಿ 1.25 ಲಕ್ಷ ರೂ ಪ್ಯಾಕೇಜ್ ಕೊಡಲಾಗುತ್ತದೆ.

ಇದನ್ನೂ ಓದಿ : ಭಾರತ ಸರ್ಕಾರದ ಹಡಗು ನಿರ್ಮಾಣ ಕಂಪನಿಯಲ್ಲಿ ನೇಮಕಾತಿ ; 8, 10 ಮತ್ತು 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ.!

ಮೂರಕ್ಕಿಂತ ಹೆಚ್ಚಿನ ಮಟ್ಟದ ಬ್ಯಾಂಡ್​ನ ಉದ್ಯೋಗಿಗಳಿಗೆ ಪ್ರೋತ್ಸಾಹಕ ಧನ ಇನ್ನೂ ಹೆಚ್ಚಿರುತ್ತದೆ. ಬ್ಯಾಂಡ್ ಏಳರ ಉದ್ಯೋಗಿಗಳಿಗೆ ಇಲ್ಲಿ ವರ್ಗಾವಣೆ ಆದಾಗ ಒಂದೂವರೆ ಲಕ್ಷ ರೂ ಹಾಗೂ ಎರಡು ವರ್ಷದಲ್ಲಿ ಒಟ್ಟು ಎಂಟು ಲಕ್ಷ ರೂವರೆಗೆ ಧನ ಸಹಾಯ ಕೊಡುವುದಾಗಿ ಇನ್ಫೋಸಿಸ್ ಸಂಸ್ಥೆ ಹೇಳಿದೆ. ಇದು ಸಂಬಳವಲ್ಲದೇ ಹೆಚ್ಚುವರಿಯಾಗಿ ನೀಡುವ ಪ್ರೋತ್ಸಾಹಕ ಧನವಾಗಿದೆ.

ವಾಣಿಜ್ಯ ಮತ್ತ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಇನ್ಫೋಸಿಸ್​ನ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಪ್ರಾದೇಶೀಕ ಆರ್ಥಿಕತೆಗಳ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಅವರು ಇನ್ಫೋಸಿಸ್​ನ ಬದ್ಧತೆಯನ್ನು ಮೆಚ್ಚಿಕೊಂಡಿದ್ದಾರೆ.

spot_img
spot_img
- Advertisment -spot_img