ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral News“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
spot_img
spot_img
spot_img

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ (harassment) ನೀಡಿದ ಘಟನೆ ಕೇರಳದಲ್ಲಿ ನಡೆದಿದೆ.

ಮಹಿಳೆಯೊಂದಿಗೆ ಲೈಂಗಿಕ ಕಿರುಕುಳ (harassment) ನೀಡಿದ ವ್ಯಕ್ತಿಯ ಈ ಕೃತ್ಯ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಿಟ್ಟತನದಿಂದ ಪ್ರತಿಕ್ರಿಯಿಸಿದ ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Drumstick : ನುಗ್ಗೆಕಾಯಿ ಆರೋಗ್ಯಕ್ಕೆ ಲಾಭ ; ಆದರೆ ಈ 4 ಜನರು ತಿನ್ನಲೇಬಾರದು!
ಕಿರುಕುಳ (harassment) ಘಟನೆಯ ವಿಡಿಯೋ ವೈರಲ್ :

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯದಲ್ಲಿ, ಮಹಿಳೆ ಬಸ್‌ನ ಸೀಟಿನಲ್ಲಿ ಕುಳಿತಿರುವಾಗ ಪಕ್ಕದ ವ್ಯಕ್ತಿ ಆಕೆಯ ಖಾಸಗಿ ಭಾಗವನ್ನು ಮುಟ್ಟಲು ಅಸಭ್ಯವಾಗಿ ಕೈ ಚಾಚುತ್ತಿದ್ದಾನೆ. ತಕ್ಷಣ ಆಕೆಯು ಅದನ್ನು ತಡೆಯುತ್ತಾ ಆತನ ಕಪಾಳಕ್ಕೆ ಹೊಡೆತ ನೀಡಿದ್ದಾಳೆ.

ಈ ಸಂದರ್ಭ ಬಸ್ ಕಂಡಕ್ಟರ್ ಸ್ಥಳಕ್ಕೆ ಬಂದು ಕಿರುಕುಳ (harassment) ನೀಡಿದ ವ್ಯಕ್ತಿಯನ್ನು ಪ್ರಶ್ನಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಕಾಣಬಹುದು.

https://twitter.com/i/status/1986291293094629454

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.
ಪ್ರಯಾಣಿಕರ ಮೌನಕ್ಕೆ ಆಕ್ರೋಶ :

ವಿಡಿಯೋ ವೈರಲ್ ಆದ ನಂತರ, ಅನೇಕರು ಆಕೆಯ ಧೈರ್ಯವನ್ನು ಮೆಚ್ಚಿ “ಇಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಧೈರ್ಯವಾಗಿ ಪ್ರತಿಕ್ರಿಯಿಸಬೇಕು” ಎಂದು ಹೇಳಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಕಿರುಕುಳ (harassment) ನೀಡಿದ ಕಾಮುಕ ವ್ಯಕ್ತಿಗೆ ಸರಿಯಾಗಿ ಬುದ್ದಿ ಕಲಿಸದೆ, ಏನೂ ಮಾಡದೆ ಮೌನವಹಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಕರಣ ತನಿಖೆಯಲ್ಲಿದೆ :

ಕಿರುಕುಳ (harassment) ಘಟನೆ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದುಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಬಸ್‌ನಲ್ಲಿದ್ದ ಸಿಸಿಟಿವಿ ದೃಶ್ಯ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಆಧರಿಸಿ ಆರೋಪಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆರೋಪಿಯನ್ನು ಬೇಗನೆ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತೆಯ ಮೇಲೆ Instagram ಸ್ನೇಹಿತರಿಂದ ಗ್ಯಾಂಗ್ ರೇಪ್, ಇಬ್ಬರು ಬಂಧನ.
“ಭೇಷ್!” ಎಂದ ನೆಟ್ಟಿಗರು :

ವಿಡಿಯೋ ಹಂಚಿಕೊಂಡ ಹಲವರು ಆಕೆಯ ಧೈರ್ಯಕ್ಕೆ “ಭೇಷ್!” ಎಂದು ಪ್ರತಿಕ್ರಿಯಿಸಿದ್ದು, “ಅಸಭ್ಯ ವರ್ತಿಸಿ ಕಿರುಕುಳ (harassment) ನೀಡಿದವನಿಗೆ ತಕ್ಕ ಪಾಠ ಕಲಿಸಿದ್ದಾಳೆ” ಎಂದು ಪ್ರಶಂಸಿಸಿದ್ದಾರೆ.

Disclaimer : The information provided in this article is based on a video/post currently circulating on social media. Janaspandan News does not confirm any claim or authenticity regarding this.


Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

Cancer

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ʼಕ್ಯಾನ್ಸರ್‌ (Cancer)ʼ ಎಂಬ ಪದವೇ ಕೇಳಿದರೂ ಹಲವರಿಗೆ ಭಯ ಹುಟ್ಟುತ್ತದೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಈ ಕಾಯಿಲೆಯ ಕೆಲವು ಆರಂಭಿಕ ಲಕ್ಷಣಗಳನ್ನು ಗುರುತಿಸಿದರೆ ಮತ್ತು ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆ ಮಾಡಿದರೆ ಕ್ಯಾನ್ಸರ್‌ನಿಂದ ತಪ್ಪಿಸಿಕೊಳ್ಳುವುದು ಸಾಧ್ಯ.

ಇತ್ತೀಚಿನ ಅಧ್ಯಯನದ ಪ್ರಕಾರ, ರಕ್ತದ ಗುಂಪು ಸಹ ಕ್ಯಾನ್ಸರ್ ಅಪಾಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗಿದೆ.

ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ರಕ್ತದ ಗುಂಪು ಮತ್ತು ಕ್ಯಾನ್ಸರ್ (Cancer) ಅಪಾಯದ ಸಂಪರ್ಕ :

ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ನಮ್ಮ ದೇಹದ ರಕ್ತದ ಪ್ರಕಾರವು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

2017ರಲ್ಲಿ ‘PLOS One’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ‘B’ ರಕ್ತದ ಗುಂಪು ಹೊಂದಿರುವವರಿಗೆ ಇತರ ರಕ್ತದ ಗುಂಪಿನವರಿಗಿಂತ ಕೆಲವು ಕ್ಯಾನ್ಸರ್‌ಗಳ ಅಪಾಯ ಕಡಿಮೆ ಎಂದು ತಿಳಿಸಿದೆ. ವಿಶೇಷವಾಗಿ ಹೊಟ್ಟೆಯ ಕ್ಯಾನ್ಸರ್ (Cancer) ಮತ್ತು ಮೂತ್ರಕೋಶ ಕ್ಯಾನ್ಸರ್ ಅಪಾಯ ಕಡಿಮೆ ಎನ್ನಲಾಗಿದೆ.

ಆದರೆ, ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಇನ್ನೊಂದು ಅಧ್ಯಯನವು ಬೇರೆ ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ, ‘O’ ಹೊರತುಪಡಿಸಿ (A, B, AB) ರಕ್ತದ ಗುಂಪು ಹೊಂದಿರುವವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ (Pancreatic Cancer) ಅಪಾಯಕ್ಕೆ ಹೆಚ್ಚು ಒಳಗಾಗಬಹುದು.

Home
ಅಪಾಯದ ಮಟ್ಟಗಳು ಹೇಗೆ?

ಅಧ್ಯಯನದ ಪ್ರಕಾರ,

  • A ಬ್ಲಡ್ ಗ್ರೂಪ್ ಹೊಂದಿರುವವರು – 32% ಹೆಚ್ಚಿನ ಅಪಾಯ,
  • AB ಬ್ಲಡ್ ಗ್ರೂಪ್ ಹೊಂದಿರುವವರು – 51% ಹೆಚ್ಚಿನ ಅಪಾಯ,
  • B ಬ್ಲಡ್ ಗ್ರೂಪ್ ಹೊಂದಿರುವವರು – 72% ಹೆಚ್ಚಿನ ಅಪಾಯಕ್ಕೆ ಒಳಪಟ್ಟಿದ್ದಾರೆ.

‘O’ ರಕ್ತದ ಗುಂಪಿನವರಿಗಿಂತ ಇತರ ಬ್ಲಡ್ ಗ್ರೂಪ್ ಹೊಂದಿರುವವರಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Cancer) ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಆದರೆ, ಇದು ಒಂದೇ ಕಾರಣವಲ್ಲ — ಆನುವಂಶಿಕತೆ, ಆಹಾರ ಪದ್ಧತಿ ಮತ್ತು ಪರಿಸರದ ಅಂಶಗಳು ಸಹ ಪ್ರಮುಖ ಪಾತ್ರವಹಿಸುತ್ತವೆ.

ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂದರೇನು?

ಮೇದೋಜ್ಜೀರಕ ಗ್ರಂಥಿ (Pancreas) ಹೊಟ್ಟೆಯ ಕೆಳಭಾಗದಲ್ಲಿ ಇರುವ ಒಂದು ಅಂಗ. ಇದು ಆಹಾರ ಜೀರ್ಣಿಸಲು ಅಗತ್ಯವಾದ ಎನ್ಜೈಮ್‌ಗಳು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

ಈ ಗ್ರಂಥಿಯ ಜೀವಕೋಶಗಳು ನಿಯಂತ್ರಣ ತಪ್ಪಿ ಬೆಳೆಯಲು ಆರಂಭಿಸಿದಾಗ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Cancer) ಉಂಟಾಗುತ್ತದೆ. ದುರದೃಷ್ಟವಶಾತ್, ಇದನ್ನು ಸಾಮಾನ್ಯವಾಗಿ ತಡವಾಗಿ ಪತ್ತೆಹಚ್ಚಲಾಗುತ್ತದೆ, ಆದ್ದರಿಂದ ಚಿಕಿತ್ಸೆ ಕಷ್ಟಕರವಾಗುತ್ತದೆ.

“ಸ್ನೇಹಿತನ ಜೊತೆ ಇದ್ದ MBA ವಿದ್ಯಾರ್ಥಿನಿಯನ್ನು ಹೊತ್ತೊಯ್ಯ್ದು ದೌರ್ಜನ್ಯ ; ಪೊಲೀಸರಿಂದ ಶೋಧ.!”
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಲಕ್ಷಣಗಳು :
  • ಹೊಟ್ಟೆ ನೋವು (ಬೆನ್ನಿಗೆ ಹರಿಯುವಂತೆ).
  • ಅತಿಯಾದ ತೂಕ ಇಳಿಕೆ ಅಥವಾ ಹಸಿವಿನ ನಷ್ಟ.
  • ಕಾಮಾಲೆ (ಚರ್ಮ ಮತ್ತು ಕಣ್ಣಿನ ಹಳದಿ ಬಣ್ಣ).
  • ಕಪ್ಪು ಮೂತ್ರ ಮತ್ತು ಬಿಳಿ ಮಲ.
  • ಚರ್ಮ ತುರಿಕೆ ಮತ್ತು ಆಲಸ್ಯ.
  • ಹೊಸ ಮಧುಮೇಹ ಲಕ್ಷಣಗಳು ಅಥವಾ ಹದಗೆಡುವ ಶುಗರ್ ಲೆವೆಲ್‌ಗಳು.

ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಅತಿಮುಖ್ಯ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.
ರಕ್ತದ ಗುಂಪುಗಳ ಪಟ್ಟಿ :

ರಕ್ತವನ್ನು ವೈದ್ಯಕೀಯವಾಗಿ ನಾಲ್ಕು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲಾಗಿದೆ: A, B, AB ಮತ್ತು O, ಹಾಗೂ ಪ್ರತಿಯೊಂದಕ್ಕೂ RhD Positive / RhD Negative ಎಂಬ ಉಪವರ್ಗಗಳಿವೆ. ಒಟ್ಟಾರೆ ಎಂಟು ವಿಧದ ರಕ್ತದ ಗುಂಪುಗಳು ಇವೆ. ವ್ಯಕ್ತಿಯ ರಕ್ತದ ಗುಂಪು ಪೋಷಕರಿಂದ ಆನುವಂಶಿಕವಾಗಿ ದೊರಕುತ್ತದೆ.

ತಜ್ಞರ ಸಲಹೆ :

ರಕ್ತದ ಗುಂಪು ಒಂದು ಸೂಚಕ ಅಂಶ ಮಾತ್ರ. ಇದರ ಮೇಲೆ ಅತಿಯಾಗಿ ಭಯಪಡುವ ಅಗತ್ಯವಿಲ್ಲ.
ನಿತ್ಯ ವ್ಯಾಯಾಮ, ಆರೋಗ್ಯಕರ ಆಹಾರ, ತಂಬಾಕು ಮತ್ತು ಮದ್ಯದಿಂದ ದೂರ, ಹಾಗೂ ನಿಯಮಿತ ವೈದ್ಯಕೀಯ ತಪಾಸಣೆ. — ಇವುಗಳು ಯಾವುದೇ ಕ್ಯಾನ್ಸರ್‌ (Cancer) ನ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತವೆ.


Disclaimer : ಈ ಲೇಖನವು ವಿವಿಧ ಆರೋಗ್ಯ ಸಂಸ್ಥೆಗಳ ಅಧ್ಯಯನಗಳು ಮತ್ತು ವಿಶ್ವಾಸಾರ್ಹ ವೈದ್ಯಕೀಯ ವರದಿಗಳನ್ನು ಆಧರಿಸಿದೆ. ಇದು ಸಾಮಾನ್ಯ ಮಾಹಿತಿ ನೀಡುವುದಕ್ಕಾಗಿ ಮಾತ್ರ. ವೈದ್ಯಕೀಯ ಸಲಹೆಗಾಗಿ ಸದಾ ತಜ್ಞರನ್ನು ಸಂಪರ್ಕಿಸಿ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments