Monday, October 27, 2025

Janaspandhan News

HomeNational NewsAustralian ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ ಪಾಪಿ : ಪೊಲೀಸರ ಟ್ರಿಟ್‌ ನೋಡಿ ವಾಹ್‌...
spot_img
spot_img
spot_img

Australian ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ ಪಾಪಿ : ಪೊಲೀಸರ ಟ್ರಿಟ್‌ ನೋಡಿ ವಾಹ್‌ ಎಂದ ನೆಟ್ಟಿಗರು.!

- Advertisement -

ಜನಸ್ಪಂದನ ನ್ಯೂಸ್‌, ಇಂದೋರ್‌ : ಆಸ್ಟ್ರೇಲಿಯಾ (Australian) ಮಹಿಳಾ ಕ್ರಿಕೆಟ್ ತಂಡದ ಕೆಲ ಸದಸ್ಯರಿಗೆ ಕಿರುಕುಳ ನೀಡಿದ ಅರೋಪಿಗಳಿಗೆ ಇಂದೋರ್‌ ಪೊಲೀಸರಿ ನೀಡಿದ ಟ್ರಿಟ್‌ ಮೆಂಟ್‌ ನೋಡಿ ನೆಟ್ಟಿಗರು ವಾಹ್‌ ಎಂದಿದ್ದರೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ 2025 ತನ್ನ ಅಂತಿಮ ಹಂತದತ್ತ ಸಾಗುತ್ತಿದ್ದಂತೆಯೇ ಕ್ರಿಕೆಟ್ ಲೋಕದಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಟೂರ್ನಿಯು ಒಂದೆಡೆ ಭರ್ಜರಿಯಾಗಿ ಮುಂದುವರಿಯುತ್ತಿದ್ದರೂ, ಮತ್ತೊಂದೆಡೆ ಮಹತ್ವದ ಪಂದ್ಯ ನಡೆದ ಇಂದೋರ್‌ನಲ್ಲಿ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.

20 ಜನರನ್ನು ಬಲಿ ಪಡೆದ ಕರ್ನೂಲ್ Bus ದುರಂತಕ್ಕೆ ಪಾನಮತ್ತ ಬೈಕ್ ಸವಾರನೇ ಕಾರಣ.?

ಆಸ್ಟ್ರೇಲಿಯಾ (Australian) ಮತ್ತು ದಕ್ಷಿಣ ಆಫ್ರಿಕಾ (S A) ನಡುವಿನ ಪಂದ್ಯಕ್ಕಾಗಿ ಇಂದೋರ್‌ನ ಹೋಲ್ಕರ್ ಮೈದಾನಕ್ಕೆ ಬಂದಿದ್ದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಕೆಲ ಸದಸ್ಯರಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು, ನಂತರ ಪೊಲೀಸರು ಶೀಘ್ರ ಕ್ರಮ ಕೈಗೊಂಡಿದ್ದಾರೆ.

ವರದಿಗಳ ಪ್ರಕಾರ, ಆಟಗಾರ್ತಿಯರು ಹೋಟೆಲ್‌ನಿಂದ ಹತ್ತಿರದಲ್ಲಿದ್ದ ಕೆಫೆ ಕಡೆ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಅಸಭ್ಯ ವರ್ತನೆ ನಡೆಸಿದರೆಂದು ಆರೋಪಿಸಲಾಗಿದೆ. ಘಟನೆಯ ನಂತರ ಮಹಿಳಾ ತಂಡದ ಪ್ರತಿನಿಧಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.

Tulasi : “ಜಗಿದು ತಿಂದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುವ ಈ ಎಲೆ.!”

ಘಟನೆಯ ಕುರಿತು ತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಶೋಧ ಕಾರ್ಯ ಕೈಗೊಂಡಿದ್ದರು. ಕೇವಲ ಎರಡು ದಿನಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.

ಇದರಿಂದ ಸ್ಥಳೀಯ ಆಡಳಿತ ಮತ್ತು ಕಾನೂನು ವ್ಯವಸ್ಥೆಯ ತ್ವರಿತ ಕ್ರಮ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಕ್ರೀಡಾ ವಲಯದ ಗೌರವ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಮುಖ್ಯ ಹೆಜ್ಜೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತನ್ನ ಮಾಲಕಿಯ ಪ್ರಾಣ ಉಳಿಸಿದ ವೀರ Dog ; ಹೃದಯಸ್ಪರ್ಶಿ ವಿಡಿಯೋ ವೈರಲ್.!

ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯ್‌ವರ್ಗಿಯ ಅವರು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ಇದು ದೇಶದ ಗೌರವಕ್ಕೆ ಧಕ್ಕೆ ತರುವ ಘಟನೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಅದೇ ವೇಳೆ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಅವರು, “ಯಾವುದೇ ದೇಶದ ಮಹಿಳೆಯರಿಗೂ ಸುರಕ್ಷತೆ ನೀಡುವುದು ನಮ್ಮ ಕರ್ತವ್ಯ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದು ಹೇಳಿದ್ದಾರೆ.

Milk : ಕುದಿಸಿದಾಗ ರಬ್ಬರ್‌ನಂತಾದ ಹಾಲು ; ಎಫ್‌ಡಿಎ ತನಿಖೆ ಆರಂಭ.!

ಪೊಲೀಸರು ಈ ಪ್ರಕರಣದ ತನಿಖೆ ಮುಂದುವರೆಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಮಾತ್ರವಲ್ಲದೆ, ಸಾಮಾಜಿಕ ವಲಯದಲ್ಲಿಯೂ ಮಹಿಳಾ ಸುರಕ್ಷತೆಯ ಕುರಿತ ಚರ್ಚೆಗೆ ಕಾರಣವಾಗಿದೆ.


Pond : ಪ್ರೇಯಸಿ ಜೊತೆ ಜಗಳ, ಕೆರೆಗೆ ಹಾರಿದ ಪ್ರಿಯಕರ ; ವಿಡಿಯೋ ವೈರಲ್.!

Pond

ಜನಸ್ಪಂದನ ನ್ಯೂಸ್‌, ಚೆನ್ನೈ : ತಮಿಳುನಾಡಿನ ತಿರುವಾರೂರಿನಲ್ಲಿ ನಡೆದ ದುರ್ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರೇಯಸಿ ಜೊತೆಗಿನ ಜಗಳದ ಬಳಿಕ 21 ವರ್ಷದ ಯುವಕನೊಬ್ಬ ನೋಡ ನೋಡುತ್ತಿದ್ದಂತೆಯೇ ಕೊಳಕ್ಕೆ (Pond) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಘಟನೆ ಪ್ರೇಮ ಸಂಬಂಧಗಳಲ್ಲಿ ಉದ್ವಿಗ್ನತೆ ಮತ್ತು ನಿರಾಶೆಯಿಂದ ಉಂಟಾಗುವ ಆತಂಕಕಾರಿ ಪರಿಣಾಮಗಳತ್ತ ಮತ್ತೊಮ್ಮೆ ಗಮನ ಸೆಳೆದಿದೆ.

ಹೋಟೆಲ್ ಮೇಲೆ Police ದಾಳಿ‌ : ವಿದೇಶಿ ಯುವತಿ ಸೇರಿ ಮೂವರು ರಕ್ಷಣೆ ; 9 ಜನರ ಬಂಧನ.!
ಘಟನೆ ವಿವರ :

ಮಾಹಿತಿಯ ಪ್ರಕಾರ, ತಿರುವಾರೂರು ಜಿಲ್ಲೆಯ ಮರುದಪ್ಪತ್ತಿನಂ ಗ್ರಾಮದ ಪ್ರವೀಣ್ ಕುಮಾರ್ (21) ಎಂಬ ಯುವಕ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಕುಂಭಕೋಣಂ ಮೂಲದ ಜಯಶ್ರೀ (19) ಎಂಬ ಯುವತಿಗೆ ಪರಿಚಯವಾಗಿತ್ತು. ಆರಂಭದಲ್ಲಿ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರೂ ಪರಸ್ಪರ ನಿಕಟರಾದರು.

ಆದರೆ ಕೆಲ ದಿನಗಳಿಂದ ಇಬ್ಬರ ನಡುವೆ ಸಣ್ಣಪುಟ್ಟ ಅಸಮಾಧಾನಗಳು, ಮನಸ್ತಾಪಗಳು ಶುರುವಾದವು. ಜಯಶ್ರೀ ಕುಟುಂಬದ ಒತ್ತಡದಿಂದ ಪ್ರವೀಣ್‌ನ ಸಂಪರ್ಕವನ್ನು ತಪ್ಪಿಸಲು ನಿರ್ಧರಿಸಿದ್ದಳು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪ್ರವೀಣ್, ಎಲ್ಲವೂ ಸ್ಪಷ್ಟಪಡಿಸಲು ಮತ್ತು ಆಕೆಯನ್ನು ಮನವೊಲಿಸಲು ಕುಂಭಕೋಣಂಗೆ ತೆರಳಿದ್ದಾನೆ.

“ಯಮನಿಗೂ ತಡೆದ ವೃದ್ಧ : Train ಹಳಿಯ ಬಳಿ ನಡೆದ ಅಚ್ಚರಿಯ ಘಟನೆ ; ವಿಡಿಯೋ ನೋಡಿ,!”
ಕೊಳ (ಕೆರೆ) ದ ಬಳಿ ನಡೆದ ಮಾತುಕತೆ ದುರಂತದಲ್ಲಿ ಅಂತ್ಯ :

ಇಬ್ಬರೂ ತಿರುವಾರೂರಿನ ತಿರುಕ್ಕಣ್ಣಮಂಗೈ ಸಮೀಪದ ಸೇಟ್ಟಾಕುಳಂ ಕ್ರಾಸ್ ರಸ್ತೆಯ ಬಳಿ ಭೇಟಿಯಾಗಿ ಮಾತನಾಡಿದ್ದಾರೆ. ಅಲ್ಲಿ ನಡೆದ ಮಾತುಕತೆಯಲ್ಲಿ ಜಯಶ್ರೀ ಸ್ಪಷ್ಟವಾಗಿ ಪ್ರೇಮ ಸಂಬಂಧ ಮುಂದುವರಿಸಲು ತಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ.

ಆಕೆಯ ಮನವಿ ಕೇಳಿ ನಿರಾಶನಾದ ಪ್ರವೀಣ್ ಆಕ್ರೋಶಗೊಂಡು ಅಲ್ಲಿ ಹತ್ತಿರದಲ್ಲಿದ್ದ ಕೊಳದತ್ತ ಓಡಿ ಹೋಗಿ ನೋಡ ನೋಡುತ್ತಿದ್ದಂತೆಯೇ ಹಾರಿ ಬಿದ್ದಿದ್ದಾನೆ.

ಈ ದೃಶ್ಯ ಸ್ಥಳದಲ್ಲಿದ್ದ ಕೆಲವು ಜನರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದೆ. ವಿಡಿಯೋದಲ್ಲಿ ಯುವಕನ ಆತಂಕಭರಿತ ನಡವಳಿಕೆ ಮತ್ತು ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ನೆಟ್ಟಿಗರ ಮನಸ್ಸು ಕಲುಕಿವೆ.

“ಒಂದೇ ಒಂದು Kiss ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭಕರ ಗೊತ್ತೇ?”
ಪೊಲೀಸರು ಮತ್ತು ಅಗ್ನಿಶಾಮಕ ದಳದ ರಕ್ಷಣಾ ಕಾರ್ಯ :

ಘಟನೆ ನಡೆದ ತಕ್ಷಣ ಸ್ಥಳೀಯರು ಯುವಕನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಆಳವಾದ ನೀರಿನಲ್ಲಿ ಪ್ರವೀಣ್ ಕಾಣೆಯಾಗಿದ್ದರಿಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸಿ ಪ್ರವೀಣ್‌ನ ದೇಹವನ್ನು ಹೊರತೆಗೆದಿದ್ದಾರೆ. ತಕ್ಷಣವೇ ಅವರನ್ನು ತಿರುವಾರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದರು.

ಪ್ರೇಯಸಿಗೂ ಚಿಕಿತ್ಸಾ ಸಹಾಯ :

ಘಟನೆಯ ಬಳಿಕ ಆತಂಕಗೊಂಡ ಜಯಶ್ರೀಗೆ ತೀವ್ರ ಮನೋಭಾವನಾತ್ಮಕ ಆಘಾತ ಉಂಟಾಗಿದ್ದು, ಆಕೆಯಿಗೂ ಆರೋಗ್ಯ ಸಂಬಂಧಿತ ತೊಂದರೆ ಕಾಣಿಸಿಕೊಂಡಿದೆ. ಆಕೆಯನ್ನೂ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಕುಡವಾಸಲ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಘಟನೆಯ ಹಿಂದಿನ ನಿಜವಾದ ಕಾರಣ ಹಾಗೂ ಅವರಿಬ್ಬರ ನಡುವಿನ ಸಂಬಂಧದ ಸ್ಥಿತಿ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಿನವೂ ಮಾಡಿ ಈ 7 ಕೆಲಸ ; Heart ಸಂಬಂಧಿ ಸಮಸ್ಯೆಗಳಿಗೆ ಗುಡ್‌ಬೈ ಹೇಳಿ.!
ಸಮಾಜಕ್ಕೆ ಎಚ್ಚರಿಕೆಯ ಸಂದೇಶ :

ಈ ಘಟನೆ ಪ್ರೇಮ ಸಂಬಂಧಗಳಲ್ಲಿ ಉಂಟಾಗುವ ಭಾವನಾತ್ಮಕ ಒತ್ತಡದಿಂದಾಗಿ ಯುವಕರು ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ತಜ್ಞರು ಭಾವನಾತ್ಮಕ ತೊಂದರೆ ಎದುರಿಸುತ್ತಿರುವವರು ತಕ್ಷಣ ಕುಟುಂಬ ಸದಸ್ಯರು ಅಥವಾ ಮನೋವೈದ್ಯರನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದ್ದಾರೆ.

ವಿಡಿಯೋ :

Courtesy : KannadaPrabha

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments