Tuesday, October 14, 2025

Janaspandhan News

HomeGeneral NewsPlane : ತುರ್ತು ಲ್ಯಾಂಡಿಂಗ್‌ ವೇಳೆ ವಿಮಾನ ಪತನ : 2 ಸಾವು, ಒಬ್ಬರಿಗೆ ಗಾಯ.!
spot_img
spot_img
spot_img

Plane : ತುರ್ತು ಲ್ಯಾಂಡಿಂಗ್‌ ವೇಳೆ ವಿಮಾನ ಪತನ : 2 ಸಾವು, ಒಬ್ಬರಿಗೆ ಗಾಯ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಮೆರಿಕದ ಮೆಸಾಚುಸೆಟ್ಸ್ ರಾಜ್ಯದಲ್ಲಿ ಸಣ್ಣ ವಿಮಾನ (Plane) ವೊಂದು ತುರ್ತು ಲ್ಯಾಂಡಿಂಗ್ ವೇಳೆ ಪತನಗೊಂಡು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರಿಗೆ ಗಾಯವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ವಿಮಾನ ಪತನ ಮೆಸಾಚುಸೆಟ್ಸ್‌ನ ಇಂಟರ್‌ಸ್ಟೇಟ್-195 (Interstate-195) (I-195) ಹೆದ್ದಾರಿಯ ಸಮೀಪದಲ್ಲಿ ನಡೆದಿದೆ. ಇತ್ತೀಚೆಗೆ ಏರ್ ಇಂಡಿಯಾ ಸೇರಿದಂತೆ ಹಲವಾರು ವಿಮಾನಗಳಲ್ಲಿ ತಾಂತ್ರಿಕ ದೋಷದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಘಟನೆ ಆತಂಕಕ್ಕೆ ಕಾರಣವಾಗಿದೆ.

Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!
ತಾಂತ್ರಿಕ ತೊಂದರೆಯಿಂದ ಹೆದ್ದಾರಿಯತ್ತ ವಿಮಾನ (Plane) :

ಮಾಹಿತಿಯ ಪ್ರಕಾರ,  ಇಂಟರ್‌ಸ್ಟೇಟ್ 195 ಹೆದ್ದಾರಿಯ ಸಮೀಪ ಹಾರಾಟದಲ್ಲಿದ್ದ ಸಣ್ಣ ವಿಮಾನದಲ್ಲಿ ಹಠಾತ್ ತಾಂತ್ರಿಕ ತೊಂದರೆ (Technical problem) ಉಂಟಾಗಿದೆ. ರೋಡ್ ಐಲ್ಯಾಂಡ್ (Island) ಪ್ರದೇಶದ ಗಗನದಲ್ಲಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಮಸ್ಯೆ ಕಾಣಿಸಿಕೊಂಡ ನಂತರ, ಪೈಲಟ್ ಸಮೀಪದ ಬೆಡ್‌ಫೋರ್ಡ್ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾನೆ.

ಕಂಟ್ರೋಲ್ ರೂಂಗೆ ತುರ್ತು ಸಿಗ್ನಲ್ ಕಳುಹಿಸಲ್ಪಟ್ಟಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಹೋದ ಕಾರಣ ಪೈಲಟ್ ಹೆದ್ದಾರಿಯಲ್ಲೇ ವಿಮಾನ ಇಳಿಸಲು ಪ್ರಯತ್ನಿಸಿದನು. ಆದರೆ ಲ್ಯಾಂಡಿಂಗ್ (Landing) ವೇಳೆ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿದೆ.

Khanapur : ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪ ; ಖಾನಾಪುರದಲ್ಲಿ ಬಾಲಕಿಯ ಆತ್ಮಹತ್ಯೆ.!
ಬೆಂಕಿ ಕಾಣಿಸಿಕೊಂಡು ವಿಮಾನ ಹೊತ್ತಿ ಉರಿದ ದುರಂತ :

ಪತನವಾದ ಕ್ಷಣದಲ್ಲೇ ವಿಮಾನದಲ್ಲಿ (Plane) ಬೆಂಕಿ ಕಾಣಿಸಿಕೊಂಡು ಅದು ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ತಕ್ಷಣ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡವು. ತೀವ್ರ ಮಳೆ ಹಾಗೂ ಬಿರುಗಾಳಿಯ ನಡುವೆಯೇ ರಕ್ಷಣಾ ಕಾರ್ಯ ನಡೆಯಿತು.

ಗಾಯಾಳು ಆಸ್ಪತ್ರೆಗೆ ದಾಖಲು :

ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಮೃತಪಟ್ಟ ಇಬ್ಬರ ಗುರುತು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸುರಕ್ಷತಾ ದೃಷ್ಟಿಯಿಂದ ಬಂದ್ ಮಾಡಲಾಗಿದೆ. ವಿಮಾನ (Plane) ಪತನಗೊಂಡ ಹೆದ್ದಾರಿಯ ಎರಡೂ ದಿಕ್ಕಿನ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಹಾಗೂ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

ದೀಪಾವಳಿ ಕ್ಲೀನಿಂಗ್ ಟಿಪ್ಸ್ : ಮನೆಯ Switch Board ಹೊಳೆಯುವಂತೆ ಮಾಡಲು ಸರಳ ಮನೆಮದ್ದುಗಳು.!
ತನಿಖೆ ಆರಂಭಿಸಿದ ಅಧಿಕಾರಿಗಳು :

ವಿಮಾನ (Plane) ಪತನದ ತಕ್ಷಣವೇ ತನಿಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ವಿಮಾನದ ಅವಶೇಷಗಳನ್ನು ಸಂಗ್ರಹಿಸಿ ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಪತನಕ್ಕೆ ನಿಖರವಾದ ಕಾರಣ ತಿಳಿದುಬರುವ ತನಕ ಅಧಿಕೃತ ವಿವರಗಳನ್ನು ಬಹಿರಂಗಪಡಿಸದಿರಲು ಅಧಿಕಾರಿಗಳು ಸೂಚಿಸಿದ್ದಾರೆ.

ಸ್ಥಳೀಯ ವಿಮಾನಯಾನ ಪ್ರಾಧಿಕಾರವು ಪ್ರಾಥಮಿಕ ತನಿಖೆ ಪ್ರಾರಂಭಿಸಿದ್ದು, ವಿಮಾನದಲ್ಲಿ (Plane) ಉಂಟಾದ ತಾಂತ್ರಿಕ ದೋಷವೇ ಅಥವಾ ವಾತಾವರಣದ ಪರಿಣಾಮವೇ ಈ ಅಪಘಾತಕ್ಕೆ ಕಾರಣ ಎಂಬುದರ ಬಗ್ಗೆ ಸ್ಪಷ್ಟತೆ ಬರಬೇಕಿದೆ.

ಅಪಘಾತಕ್ಕಿಡಾದ ವಿಮಾನದ (Plane) ವಿಡಿಯೋ :


Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!

Raju

ಜನಸ್ಪಂದನ ನ್ಯೂಸ್‌, ಉಡುಪಿ : ಉತ್ತರ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ರಾಜು ತಾಳಿಕೋಟೆ (Raju Talikoti) ಅವರು ಅಕ್ಟೋಬರ್ 13, 2025ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು.

Police ಹಲ್ಲೆಯಿಂದ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆರೋಪ ; ಸಿಸಿಟಿವಿ ದೃಶ್ಯ ವೈರಲ್‌

ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿ ತಕ್ಷಣ ಮಣಿಪಾಲ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ನಿರಂತರ ಚಿಕಿತ್ಸೆಯ ಬಳಿಕವೂ ಅವರ ಸ್ಥಿತಿ ಸುಧಾರಿಸದೆ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜು ತಾಳಿಕೋಟೆಯವರ (Raju Talikoti) ನಿಧನದಿಂದ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಕಲಾವಿದರಲ್ಲಿ ಆಳವಾದ ದುಃಖದ ವಾತಾವರಣ ನಿರ್ಮಾಣವಾಗಿದೆ. ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್‌ ಮಸಾಲೆ Water ಕುಡಿಯಿರಿ; ಬೊಜ್ಜು, ಮಧುಮೇಹ ಸೇರಿ 5 ಕಾಯಿಲೆಗಳಿಗೆ ಪರಿಹಾರ.!
ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕ :

ರಾಜು ತಾಳಿಕೋಟೆಯವರ (Raju Talikoti) ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಅವರು ಕೇವಲ ನಟನಾಗಿರದೇ, ಉತ್ತರ ಕರ್ನಾಟಕದ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕರೂ ಆಗಿದ್ದರು. ಅವರು ತಮ್ಮ ಜೀವನದ ಬಹುಭಾಗವನ್ನು ರಂಗಭೂಮಿಗೆ ಸಮರ್ಪಿಸಿ, ಹಳ್ಳಿಹಳ್ಳಿಗೆ ತೆರಳಿ ನಾಟಕಗಳ ಮೂಲಕ ಸಮಾಜದಲ್ಲಿ ನಗು ಮತ್ತು ಸಂದೇಶಗಳನ್ನು ಹಂಚಿಕೊಂಡಿದ್ದರು.

ಕುಡುಕನ ಪಾತ್ರಗಳಿಂದ ಪ್ರೇಕ್ಷಕರ ಮನ ಗೆದ್ದ ಕಲಾವಿದ Raju Talikoti :

ರಾಜು ತಾಳಿಕೋಟೆಯವರು (Raju Talikoti) ವಿಶೇಷವಾಗಿ ಕುಡುಕನ ಪಾತ್ರಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಅವರ ವಿಶಿಷ್ಟ ದೇಹಭಾಷೆ, ಮುಖಾಭಿನಯ ಮತ್ತು ನೈಸರ್ಗಿಕ ಹಾಸ್ಯಭಾವವು ಪ್ರೇಕ್ಷಕರ ಮನಸೆಳೆಯುತ್ತಿತ್ತು.

ಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಎಂಬ ನಾಟಕಗಳು ಅವರ ಅತ್ಯಂತ ಜನಪ್ರಿಯ ಕೃತಿಗಳಾಗಿದ್ದು, ಅವುಗಳ ಆಡಿಯೋ ಕ್ಯಾಸೆಟ್‌ಗಳು ಆ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಪ್ರಸಾರಗೊಂಡು ಮನೆಮಾತಾದುವು.

ನೀರು ಕಾಯಿಸಲು Rod ಬಳಸುತ್ತೀರಾ? ಹಾಗಾದರೆ ಈ ಎಚ್ಚರಿಕೆಯ ಸುದ್ದಿ ಓದಿ.!
ಚಿತ್ರರಂಗದಲ್ಲೂ ಗುರುತಿಸಿಕೊಂಡ ಹಾಸ್ಯನಟ :

ರಂಗಭೂಮಿಯಲ್ಲಿ ಅಪಾರ ಅನುಭವ ಗಳಿಸಿದ ನಂತರ ಅವರು ಕನ್ನಡ ಚಲನಚಿತ್ರರಂಗದಲ್ಲಿಯೂ ತಮ್ಮ ಗುರುತು ಮೂಡಿಸಿದರು.

ಯೋಗರಾಜ್ ಭಟ್ ನಿರ್ದೇಶನದ ‘ಮನಸಾರೆ’ (2009) ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಾಜು ತಾಳಿಕೋಟೆ, ತಮ್ಮ ಹಾಸ್ಯ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದರು. ನಂತರ ಅವರು ‘ಪಂಚರಂಗಿ’, ‘ಮತ್ತೊಂದ್ ಮದುವೇನಾ’, ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಾಜು  (Raju Talikoti) ಅಭಿನಯಿಸಿದರು.

ಅವರ ಹಾಸ್ಯ ಪಾತ್ರಗಳು, ಗ್ರಾಮೀಣ ಉಚ್ಚಾರಣೆ ಮತ್ತು ನೈಸರ್ಗಿಕ ಅಭಿನಯವು ಕನ್ನಡ ಚಲನಚಿತ್ರರಂಗದಲ್ಲಿ ವಿಭಿನ್ನ ಸ್ಥಾನ ಗಳಿಸಿತು.

IPPB ನಲ್ಲಿ 348 ಹುದ್ದೆಗಳ ನೇಮಕಾತಿ ; ಇಲ್ಲಿದೆ ಸಂಪೂರ್ಣ ವಿವರ.!
ಚಿತ್ರರಂಗದ ಶೋಕದ ಅಲೆ :

ರಾಜು ತಾಳಿಕೋಟೆಯವರ (Raju Talikoti) ನಿಧನದ ಸುದ್ದಿ ತಿಳಿದ ಕೂಡಲೇ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಮತ್ತು ಹಾಸ್ಯ ಲೋಕಕ್ಕೆ ಇದು ದೊಡ್ಡ ನಷ್ಟವೆಂದು ಅವರು ಹೇಳಿದ್ದಾರೆ. ಅವರ ಅಂತಿಮ ವಿಧಿವಿಧಾನಗಳು ತಾಳಿಕೋಟಿ ನಗರದಲ್ಲಿ ನಡೆಯಲಿವೆ ಎಂದು ಕುಟುಂಬದವರು ತಿಳಿಸಿದ್ದಾರೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments