Sunday, September 8, 2024
spot_img
spot_img
spot_img
spot_img
spot_img
spot_img
spot_img

ಮುಖ್ಯ ಶಿಕ್ಷಕನಿಂದ ಅತ್ಯಾಚಾರ ; 7ನೇ class ವಿದ್ಯಾರ್ಥಿನಿ 3 ತಿಂಗಳ ಗರ್ಭಿಣಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ (Sidlaghatta) 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮುಖ್ಯ ಶಿಕ್ಷಕನೇ (Physical assault) ಅತ್ಯಾಚಾರವೆಸಗಿದ ಘಟನೆ ನಡೆದಿದೆ.

ಮುಖ್ಯ ಶಿಕ್ಷಕ ವೆಂಕಟೇಶ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಪೊಲೀಸರು ಆತನನ್ನು ಅರೆಸ್ಟ್ ಮಾಡಲಾಗಿದೆ. ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ (head master) ವೆಂಕಟೇಶ ಸಂತ್ರಸ್ತೆಗೆ ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಗಾಯಗೊಂಡವರನ್ನು ಕಣ್ಣೆತ್ತಿ ನೋಡದೆ ಮದ್ಯದ ಬಾಟಲಿಗಳನ್ನು ಎತ್ತಾಕ್ಕೊಂಡು ಹೋದ ಜನ ; video viral.!

ಮುಖ್ಯ ಶಿಕ್ಷಕ 7ನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (sexual harassment) ನೀಡಿದ್ದು, ಆಕೆ 3 ತಿಂಗಳ ಗರ್ಭಿಣಿಯಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಐದು ತಿಂಗಳಿಂದ ಮುಟ್ಟಾಗದೇ ಇರುವುದರಿಂದ ಆತಂಕಗೊಂಡ ಬಾಲಕಿ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಗರ್ಭಿಣಿಯಾಗಿರುವುದಾಗಿ (pregnant) ತಿಳಿಸಿದ್ದಾರೆ.

ಇನ್ನೂ ಮಗಳು ಗರ್ಭಿಣಿಯಾಗಿದ್ದು ತಿಳಿದು ಪಾಲಕರು ಆಘಾತಗೊಂಡಿದ್ದು, ದೂರು ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆಯಿಂದ ವಿದ್ಯಾರ್ಥಿನಿಯನ್ನು ರಕ್ಷಿಸಿ ಆಪ್ತ ಸಮಾಲೋಚನೆ (Intimate consultation) ಮಾಡಲಾಗುತ್ತಿದೆ.

ಇನ್ನೂ ಕಾಮುಕ ಶಿಕ್ಷಕ ಬಾಲಕಿಯ ಮೈ-ಕೈ, ಎದೆ ಭಾಗವನ್ನು ಮುಟ್ಟಿ ಮಾತನಾಡುತ್ತಿದ್ದನು ಎನ್ನಲಾಗಿದೆ. ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದಾಗ, ಏನು ತೊಂದರೆ ಆಗುವುದಿಲ್ಲ ಅಂತ ಹೇಳಿ ಆಫೀಸ್‌ ರೂಮಿನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ (rape) ನಡೆಸಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಷರತ್ತು ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸದ್ಯ ಬಾಲಕಿ ನೀಡಿರುವ ಹೇಳಿಕೆ ಮೇರೆಗೆ ಆರೋಪಿ ಶಿಕ್ಷಕನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಶಿಕ್ಷಕ ವೆಂಕಟೇಶ್‌ ವಿರುದ್ಧ ಪೋಕ್ಸೋ 376 ಅಡಿ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img