ಜನಸ್ಪಂದನ ನ್ಯೂಸ್, ಆರೋಗ್ಯ : ಕಳೆದ ಕೆಲ ವರ್ಷಗಳಲ್ಲಿ ಜನಪ್ರಿಯತೆ ಪಡೆಯುತ್ತಿರುವ ರಂಬುಟಾನ್ ಹಣ್ಣು (Fruit) ತನ್ನ ವಿಶಿಷ್ಟ ಆಕರ್ಷಕ ಬಣ್ಣ ಮತ್ತು ಆರೋಗ್ಯಕಾರಿ ಗುಣಗಳಿಗಾಗಿ ಹೆಸರುವಾಸಿಯಾಗಿದೆ. ಈ ಹಣ್ಣು ನೋಡಲು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಮುಳ್ಳು ಮುಳ್ಳಾದ ಚರ್ಮವನ್ನು ಹೊಂದಿರುತ್ತದೆ.
ಅದರ ಒಳಗೆ ಬಿಳಿ ಜೆಲ್ಲಿ ತರಹದ ಮೃದುವಾದ ಪಲ್ಪ ಇರುತ್ತದೆ. ಮಲೇಷ್ಯಾ, ಇಂಡೋನೇಷ್ಯಾ ಹಾಗೂ ಆಗ್ನೇಯ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಈ ಹಣ್ಣು ಹೆಚ್ಚು ದೊರೆಯುತ್ತದೆ.
ಅಕ್ಟೋಬರ್ 1ರಿಂದ ದೇಶಾದ್ಯಂತ 10 Free ಸರ್ಕಾರಿ ಸೇವೆಗಳು ; ಜನಜೀವನಕ್ಕೆ ಹೊಸ ಬದಲಾವಣೆ.!
ಪೋಷಕಾಂಶಗಳ ಸಮೃದ್ಧಿ :
ರಂಬುಟಾನ್ ಹಣ್ಣಿ (Fruit) ನಲ್ಲಿ ಕಬ್ಬಿಣ, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು, ಕ್ಯಾಲ್ಸಿಯಂ, ವಿಟಮಿನ್‌ಗಳು (ಪ್ರಮುಖವಾಗಿ B3), ಪ್ರೋಟೀನ್, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಹಲವಾರು ಕಾಯಿಲೆಗಳನ್ನು ತಡೆಯಲು ಸಹಕಾರಿ.
ಹೃದಯದ ಆರೋಗ್ಯ :
ನಿಯಮಿತ ಪ್ರಮಾಣದಲ್ಲಿ ರಂಬುಟಾನ್ ಹಣ್ಣು (Fruit) ಸೇವನೆಯಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಅಸ್ತಮಾ ಸಮಸ್ಯೆ ತಡೆಯಲು ಕೂಡ ಇದು ಉಪಯುಕ್ತವೆಂದು ನಂಬಲಾಗಿದೆ.
Scam Alert : ಭಾರತದಲ್ಲಿ ಹಗರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಟಾಪ್ 10 ಫೋನ್ ನಂಬರುಗಳು.!
ಜೀರ್ಣಕ್ರಿಯೆ ಮತ್ತು ಮಲಬದ್ಧತೆ ನಿವಾರಣೆ :
ಈ ಹಣ್ಣಿ (Fruit) ನ ಪಲ್ಪ್‌ನಲ್ಲಿ ಫೈಬರ್ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಇದು ಸಹಕಾರಿ. ಫೈಬರ್ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಲು ಸಹಾಯಮಾಡುತ್ತದೆ.
ಕಿಡ್ನಿ ಮತ್ತು ರೋಗನಿರೋಧಕ ಶಕ್ತಿ :
ರಂಬುಟಾನ್‌ನಲ್ಲಿ ನೀರಿನಂಶ ಹೆಚ್ಚಿರುವುದರಿಂದ ಕಿಡ್ನಿ ಕಲ್ಲುಗಳನ್ನು ಕರಗಿಸಲು ಇದು ಸಹಕಾರಿ ಎನ್ನಲಾಗುತ್ತದೆ. ಜೊತೆಗೆ, ವಿಟಮಿನ್ C ಸಮೃದ್ಧವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಯಮಿತವಾಗಿ ಸೇವಿಸಿದರೆ ದೇಹವು ವೈರಸ್ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆಯುತ್ತದೆ.
ಮದುವೆಗೆ ಒಪ್ಪದ Boyfriend ಹತ್ಯೆ ಮಾಡಿದ 16 ವರ್ಷದ ಗರ್ಭಿಣಿ ಅಪ್ರಾಪ್ತೆ.!
ಚರ್ಮದ ಆರೋಗ್ಯ :
ರಂಬುಟಾನ್ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಆರೋಗ್ಯಕರವಾಗಿಡುತ್ತವೆ. ಚರ್ಮದ ಸುಕ್ಕುಗಳನ್ನು ತಡೆಯುವಲ್ಲಿ ಹಾಗೂ ಅಕಾಲಿಕ ವಯಸ್ಸಾಗುವುದನ್ನು ತಡೆಯುವಲ್ಲಿ ಇದು ಸಹಕಾರಿ. ಚರ್ಮವು ಕಂಗೊಳಿಸುವಂತೆ ಮಾಡಲು ಸಹ ಈ ಹಣ್ಣು ನೆರವಾಗುತ್ತದೆ.
ಎಚ್ಚರಿಕೆ :
ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ಈ ಹಣ್ಣು (Fruit) ಗರ್ಭಿಣಿಯರು, ಮಧುಮೇಹಿಗಳು ಹಾಗೂ ಅಧಿಕ ರಕ್ತದೊತ್ತಡ ಹೊಂದಿರುವವರು ಸೇವಿಸುವುದನ್ನು ತಪ್ಪಿಸಿಕೊಳ್ಳುವುದು ಒಳಿತು. ಏಕೆಂದರೆ ಇದರಿಂದ ದೇಹದಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆ ಇರುತ್ತದೆ.
ಸೀಸನ್ :
ರಂಬುಟಾನ್ ಹಣ್ಣಿನ ಸೀಸನ್ ಪ್ರತಿ ವರ್ಷ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಇರುತ್ತದೆ. ಈ ಸಮಯದಲ್ಲಿ ಹಣ್ಣು (Fruit) ತಾಜಾ ಸ್ಥಿತಿಯಲ್ಲಿ ದೊರೆಯುತ್ತದೆ.
SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
👉 ಗಮನಿಸಿ: ಈ ಲೇಖನದಲ್ಲಿ ನೀಡಿರುವ ಮಾಹಿತಿಗಳು ಮನೆಮದ್ದುಗಳು ಮತ್ತು ಸಾಮಾನ್ಯ ಆರೋಗ್ಯ ಮಾಹಿತಿ ಆಧಾರಿತವಾಗಿವೆ. ಇದು ವೈದ್ಯಕೀಯ ಸಲಹೆಯ ಪರ್ಯಾಯವಲ್ಲ. ಯಾವುದೇ ಹೊಸ ಆಹಾರ ಅಥವಾ ಚಿಕಿತ್ಸೆ ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ.
SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಜನಸ್ಪಂದನ ನ್ಯೂಸ್, ನೌಕರಿ : Staff Selection Commission (SSC) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಮಟ್ಟದಲ್ಲಿ ಒಟ್ಟು 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತು ಹುದ್ದೆಗಳ ವಿವರ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.
RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಇಲಾಖೆ ಹೆಸರು :
- ಸಿಬ್ಬಂದಿ ಆಯ್ಕೆ ಆಯೋಗ (SSC).
ಒಟ್ಟು ಹುದ್ದೆಗಳ ಸಂಖ್ಯೆ :
- 509 ಹುದ್ದೆಗಳು.
ಹುದ್ದೆಗಳ ಹೆಸರು :
- ಹೆಡ್ ಕಾನ್ಸ್‌ಟೇಬಲ್ (ಪುರುಷ) : 341 ಹುದ್ದೆಗಳು.
- ಹೆಡ್ ಕಾನ್ಸ್‌ಟೇಬಲ್ (ಮಹಿಳೆ) : 168 ಹುದ್ದೆಗಳು.
Scam Alert : ಭಾರತದಲ್ಲಿ ಹಗರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಟಾಪ್ 10 ಫೋನ್ ನಂಬರುಗಳು.!
ಉದ್ಯೋಗ ಸ್ಥಳ :
- ಅಖಿಲ ಭಾರತ.
ಅಪ್ಲಿಕೇಶನ್ ಮೋಡ್ :
- ಆನ್‌ಲೈನ್.
SSC ವಯಸ್ಸಿನ ಮಿತಿ :
- ಕನಿಷ್ಠ : 18 ವರ್ಷ.
- ಗರಿಷ್ಠ : 25 ವರ್ಷ.
ವಯೋಮಿತಿ ಸಡಿಲಿಕೆ :
- OBC ಅಭ್ಯರ್ಥಿಗಳಿಗೆ : 3 ವರ್ಷಗಳು.
- SC/ST ಅಭ್ಯರ್ಥಿಗಳಿಗೆ : 5 ವರ್ಷಗಳು.
- PWD (UR/EWS) ಅಭ್ಯರ್ಥಿಗಳಿಗೆ : 10 ವರ್ಷಗಳು.
- PWD (OBC) ಅಭ್ಯರ್ಥಿಗಳಿಗೆ : 13 ವರ್ಷಗಳು.
- PWD (SC/ST) ಅಭ್ಯರ್ಥಿಗಳಿಗೆ : 15 ವರ್ಷಗಳು
Minor ಬಾಲಕಿಯರ ಶೋಷಣೆ ಪ್ರಕರಣ ಬಯಲು ; ಇಬ್ಬರು ಬಂಧನ, ಬಾಲಕಿ ರಕ್ಷಣೆ.!
SSC ಶೈಕ್ಷಣಿಕ ಅರ್ಹತೆ :
- ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್ ಆಗಿರಬೇಕು.
ವೇತನ ಶ್ರೇಣಿ:
- ರೂ.25,500 – ರೂ.81,100 (ಪ್ರತಿ ತಿಂಗಳು)
ಅರ್ಜಿ ಶುಲ್ಕ :
- SC/ST/ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು : ಶುಲ್ಕ ವಿನಾಯಿತಿ
- ಇತರ ಅಭ್ಯರ್ಥಿಗಳು : ರೂ.100/-
ಆಯ್ಕೆ ಪ್ರಕ್ರಿಯೆ :
- ಕಂಪ್ಯೂಟರ್ ಆಧಾರಿತ ಪರೀಕ್ಷೆ.
- ದೈಹಿಕ ಸಹಿಷ್ಣುತೆ ಹಾಗೂ ಅಳತೆ ಪರೀಕ್ಷೆ.
- ಕಂಪ್ಯೂಟರ್‌ನಲ್ಲಿ ಟೈಪಿಂಗ್ ಟೆಸ್ಟ್.
- ಕಂಪ್ಯೂಟರ್ ಫಾರ್ಮ್ಯಾಟಿಂಗ್ ಟೆಸ್ಟ್.
SSC : 3073 ಸಬ್-ಇನ್‌ಸ್ಪೆಕ್ಟರ್ (GD and Executive) ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ (SSC) ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
- ಫಾರ್ಮ್‌ನಲ್ಲಿ ಸರಿಯಾದ ಮಾಹಿತಿಯನ್ನು ನಮೂದಿಸಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ಅರ್ಜಿ ಸಲ್ಲಿಸುವ ಮೊದಲು ಮತ್ತೊಮ್ಮೆ ಪರಿಶೀಲಿಸಿ.
- ಸಲ್ಲಿಸಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ : 29 ಸೆಪ್ಟೆಂಬರ್ 2025.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 ಅಕ್ಟೋಬರ್ 2025.
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ PDF – ಇಲ್ಲಿ ಕ್ಲಿಕ್ ಮಾಡಿ.
- ಆನ್‌ಲೈನ್ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್‌ಸೈಟ್ : ssc.gov.in