Tuesday, October 14, 2025

Janaspandhan News

HomeViral VideoElephant : "ಆನೆಗಳ ನಿಸ್ವಾರ್ಥ ಪ್ರೀತಿಯ ಹೃದಯಸ್ಪರ್ಶಿ ವಿಡಿಯೋ ವೈರಲ್".!
spot_img
spot_img
spot_img

Elephant : “ಆನೆಗಳ ನಿಸ್ವಾರ್ಥ ಪ್ರೀತಿಯ ಹೃದಯಸ್ಪರ್ಶಿ ವಿಡಿಯೋ ವೈರಲ್”.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರಾಣಿಗಳ ಪ್ರೀತಿ ಯಾವಾಗಲೂ ನಿಷ್ಕಲ್ಮಶ ಮತ್ತು ನಿರೀಕ್ಷೆಗಳಿಲ್ಲದದ್ದು. ವಿಶೇಷವಾಗಿ ಸಾಕುಪ್ರಾಣಿಗಳು ತಮ್ಮ ಮಾಲೀಕರಿಗೆ ಅಪಾರವಾದ ನಿಷ್ಠೆಯನ್ನು ತೋರಿಸುತ್ತವೆ.

ಇಂತಹ ಒಂದು ಮುದ್ದಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆ (elephant) ಯೊಂದು ಮಳೆಯಲ್ಲಿ ತನ್ನ ಮಾಲಕಿ ನೆನೆಯುದರಿಂದ ಕಾಪಾಡಿದ ದೃಶ್ಯವು ಲಕ್ಷಾಂತರ ಜನರ ಮನಸ್ಸು ಗೆದ್ದಿದೆ.

ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 
ವೈರಲ್ ವಿಡಿಯೋದಲ್ಲಿ ಏನಿದೆ? :

ಇನ್ಸ್ಟಾಗ್ರಾಂ ಬಳಕೆದಾರ ಲೆಕ್ ಚೈಲರ್ಟ್ (Lek Chailert) ಅವರು ವಿಡಿಯೋ ಹಂಚಿಕೊಂಡಿದ್ದು, ವೈರಲ್ ವಿಡಿಯೋದಲ್ಲಿ, ಮಳೆಯ ಸಮಯದಲ್ಲಿ ಎರಡು ಆನೆಗಳು (elephants) ತಮ್ಮ ಮಾಲಕಿಯ ಹತ್ತಿರ ಬರುತ್ತಿರುವುದನ್ನು ಕಾಣಬಹುದು. ‌“ಚಾಬಾ” ಮತ್ತು “ಥಾಂಗ್” ಎಂದು ಕರೆಯಲ್ಪಡುವ ಈ ಆನೆಗಳು ಮಳೆಯ ತೀವ್ರತೆಯಿಂದ ಆಕೆಯನ್ನು ಕಾಪಾಡಲು ತಮ್ಮ ದೇಹವನ್ನು ಕೊಡೆಯಂತೆ ಬಳಕೆ ಮಾಡುತ್ತವೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ಮಾಲಕಿ ರೇನ್‌ಕೋಟ್ ಧರಿಸುತ್ತಿದ್ದ ವೇಳೆ, “ಚಾಬಾ” ಎಂಬ ಆನೆ (elephant) ತನ್ನ ಸೊಂಡಿಲಿನಿಂದ ನಿಧಾನವಾಗಿ ಆಕೆಯನ್ನು ಮುಟ್ಟುತ್ತಾ, ಎಲ್ಲವೂ ಸರಿಯಾಗುತ್ತದೆ ಎಂಬಂತೆ ಸಿಹಿ ಮುತ್ತನ್ನೂ ನೀಡುತ್ತದೆ. ಈ ಕ್ಷಣವು ನೆಟ್ಟಿಗರ ಮನಸ್ಸು ತಟ್ಟಿದ್ದು, ಸಾವಿರಾರು ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋಗೆ ಈಗಾಗಲೇ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳಾಗಿವೆ (ಸದ್ಯ ಈ ವಿಡಿಯೋ 198,892 likes ಪಡೆದಿದೆ). ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು,

  • “ಇದು ನಿಜವಾದ ಪ್ರೀತಿ, ಇದಕ್ಕಿಂತ ಸುಂದರವಾದದ್ದು ಏನೂ ಇಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
  • “ಆನೆಗಳ (elephants) ಪ್ರೀತಿ ಮತ್ತು ಕಾಳಜಿ ಅಸಾಧಾರಣ, ಇಂತಹ ಪ್ರಾಣಿಗಳನ್ನು ಹೊಂದಿರುವುದು ಅದೃಷ್ಟ” ಎಂದು ಮತ್ತೊಬ್ಬರು ಹೇಳಿದ್ದಾರೆ.
  • “ಅವುಗಳು ಪ್ರತಿಯೊಂದು ಕ್ಷಣದಲ್ಲೂ ನಿಮ್ಮನ್ನು ಕಾಪಾಡಲು ಸಿದ್ದವಾಗಿವೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಆನೆಗಳ (elephants) ನಿಸ್ವಾರ್ಥ ಪ್ರೀತಿ :

ತಜ್ಞರ ಪ್ರಕಾರ, ಆನೆಗಳು (elephants) ಅತ್ಯಂತ ಭಾವನಾತ್ಮಕ ಪ್ರಾಣಿಗಳು. ಒಮ್ಮೆ ಯಾರನ್ನಾದರೂ ನಂಬಿದರೆ, ಆ ವ್ಯಕ್ತಿಯನ್ನು ಕುಟುಂಬದ ಸದಸ್ಯರಂತೆ ಕಾಣುತ್ತವೆ. ಈ ವಿಡಿಯೋ ಅದಕ್ಕೆ ಜೀವಂತ ಸಾಕ್ಷಿಯಾಗಿದೆ. ಮಳೆಯಲ್ಲಿಯೇ ತಮ್ಮ ಮಾಲಕಿಗೆ ಆಸರೆಯಾಗಿರುವ ಈ ಆನೆಗಳ ನಡೆ, ಪ್ರಾಣಿಗಳ ನಿಸ್ವಾರ್ಥ ಪ್ರೀತಿಯನ್ನು ಮತ್ತೊಮ್ಮೆ ನೆನಪಿಸಿದೆ.

ವಿಡಿಯೋ :

 

View this post on Instagram

 

A post shared by Lek Chailert (@lek_chailert)

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Sugar : “ಬೆಳಗ್ಗೆ ಎದ್ದಾಗ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಶುಗರ್‌ ಲೆವಲ್‌ ಹೆಚ್ಚಾಗಿದೆ ಎಂಬ ಸಂಕೇತ”

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧುಮೇಹ ಅಥವಾ ಸಕ್ಕರೆ (Sugar) ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವ ಹಾಗೂ ಜೀವನಪರ್ಯಂತ ಗಮನ ನೀಡಬೇಕಾದ ಆರೋಗ್ಯ ಸಮಸ್ಯೆ. ಈ ಕಾಯಿಲೆಯನ್ನು ಶೇಕಡಾ 100 ರಷ್ಟು ಗುಣಪಡಿಸಲು ಸಾಧ್ಯವಿಲ್ಲವಾದರೂ, ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಸಾಧ್ಯ.

ತಜ್ಞರ ಪ್ರಕಾರ, ಮಧುಮೇಹ ರೋಗಿಗಳಲ್ಲಿ ಪದೇಪದೇ ಮೂತ್ರ ವಿಸರ್ಜನೆ, ತೀವ್ರ ದಾಹ, ಹಸಿವು ಏರಿಳಿತ, ಅನಿರೀಕ್ಷಿತವಾಗಿ ಬಳಲಿದಂತೆ ಕಾಣುವುದು, ಬೆವರುವುದು ಮತ್ತು ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!

ಈ ರೀತಿಯ ಸೂಚನೆಗಳನ್ನು ನಿರ್ಲಕ್ಷಿಸಿದರೆ ಮಧುಮೇಹವು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬೆಳಗಿನ ಜಾವ ಎದ್ದ ಕೂಡಲೇ,

  • ತುಂಬಾ ದಣಿದಂತೆ ಅನುಭವಿಸುವುದು,
  • ಗಂಟಲು ಒಣಗುವುದು,
  • ಹಸಿವು ಏಕಾಏಕಿ ಹೆಚ್ಚುವುದು ಅಥವಾ ಕಡಿಮೆಯಾಗುವುದು ಇವೇಲ್ಲಾ ಮಧುಮೇಹದ ಪ್ರಮುಖ ಎಚ್ಚರಿಕೆ ಲಕ್ಷಣಗಳಾಗಿವೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಇಂತಹ ಸಂದರ್ಭಗಳಲ್ಲಿ ತಕ್ಷಣವೇ ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಈ ಪರೀಕ್ಷೆಯನ್ನು ಮನೆಯಲ್ಲಿ ಗ್ಲುಕೋಮೀಟರ್ ಮೂಲಕ ಅಥವಾ ಲ್ಯಾಬ್‌ನಲ್ಲಿ ಮಾಡಿಸಿಕೊಳ್ಳಬಹುದು.

ಮಧುಮೇಹ ನಿಯಂತ್ರಣಕ್ಕಾಗಿ ಕೇವಲ ಔಷಧಿ ಮಾತ್ರವಲ್ಲ, ಜೀವನಶೈಲಿಯಲ್ಲಿಯೂ ಬದಲಾವಣೆ ಮಾಡುವುದು ಬಹಳ ಮುಖ್ಯ. ದಿನವೂ ಕನಿಷ್ಠ ಅರ್ಧ ಗಂಟೆ ನಡೆದುಬರುವುದು ಅಥವಾ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ (Sugar) ಮಟ್ಟ ಸಮತೋಲನದಲ್ಲಿರುತ್ತದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಜೊತೆಗೆ ಅತಿಯಾಗಿ ಸಕ್ಕರೆ (Sugar) , ಹಿಟ್ಟು ಹಾಗೂ ಉಪ್ಪಿನ ಸೇವನೆ ತಪ್ಪಿಸುವುದು ಉತ್ತಮ. ಮಾನಸಿಕ ಒತ್ತಡ ಕಡಿಮೆ ಮಾಡುವುದು, ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಕನಿಷ್ಠ ಎಂಟು ಗಂಟೆಗಳ ನಿದ್ರೆ ಪಡೆಯುವುದು ಆರೋಗ್ಯ ಕಾಪಾಡುವ ಪ್ರಮುಖ ಅಂಶಗಳು.

ಅದರ ಜೊತೆಗೆ ಆಹಾರದಲ್ಲಿ ಸಮತೋಲನ ಕಾಪಾಡುವುದು ಬಹಳ ಮುಖ್ಯ. ವಿವಿಧ ಪೌಷ್ಟಿಕಾಂಶಗಳಿರುವ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್‌ಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ತಜ್ಞರ ಸಲಹೆಯಂತೆ, ಬೆಳಗ್ಗೆ ಚುರುಕು ಜೀವನಶೈಲಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ ದೇಹದ ಹಾರ್ಮೋನ್ ಲಯ ಸಹಜವಾಗಿ ನಿಯಂತ್ರಣದಲ್ಲಿರುತ್ತದೆ ಮತ್ತು ಸಕ್ಕರೆ (Sugar) ಮಟ್ಟ ಕೂಡ ಸಮತೋಲನದಲ್ಲಿರುತ್ತದೆ.

ಆದ್ದರಿಂದ, ಮಧುಮೇಹವು ಗಂಭೀರ ಕಾಯಿಲೆ ಎಂಬುದನ್ನು ಮನಗಂಡು, ಆಹಾರ, ವ್ಯಾಯಾಮ ಮತ್ತು ನಿದ್ರೆಯಲ್ಲಿ ಸಮತೋಲನ ಸಾಧಿಸುವ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments