Sunday, September 8, 2024
spot_img
spot_img
spot_img
spot_img
spot_img
spot_img
spot_img

ಇನ್ಸ್‌ಪೆಕ್ಟರ್ ಹಾಗೂ ACPಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾನ್ಸ್‌ಟೇಬಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದಲ್ಲಿ, ಪ್ರಕರಣವೊಂದರಲ್ಲಿ ಕರ್ತವ್ಯ ಲೋಪ (dereliction of duty) ಎಸಗಿದ ಆರೋಪದಲ್ಲಿ ಅಮಾನತಿಗೆ ಶಿಪಾರಸು ಮಾಡಿದ ಇನ್‌ಸ್ಪೆಕ್ಟರ್‌ ಹಾಗೂ ಎಸಿಪಿಗೆ ಕಾನ್‌ಸ್ಟೇಬಲ್ ಒರ್ವರು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಬಾಣಸವಾಡಿ ಠಾಣೆಯ ಕಾನ್‌ಸ್ಟೇಬಲ್ ರೇಣುಕ ನಾಯಕ್ ಮೇಲೆ ಆರೋಪ ಬಂದಿದ್ದು, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ (ordered).

ಇದನ್ನು ಓದಿ : 10 ನೇ ತರಗತಿ ಪಾಸಾಗಿದ್ದೀರಾ.? ರಕ್ಷಣಾ ಸಚಿವಾಲಯದಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ನೌಕರಿ.!

ಕೆಲ ದಿನಗಳ ಹಿಂದೆ ಬಾಣಸವಾಡಿ ವ್ಯಾಪ್ತಿಯಲ್ಲಿ ರೌಡಿ ಕಾರ್ತಿಕೇಯನ್ ಕೊಲೆಯಾಗಿತ್ತು.

ಈ ಕೃತ್ಯದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಕಾನ್‌ಸ್ಟೇಬಲ್‌ಗಳಾದ ಸಂತೋಷ್, ಪುಟ್ಟಸ್ವಾಮಿ ಹಾಗೂ ವಿನೋದ್ ಅವರನ್ನು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್.ಆರ್.ಜೈನ್ ಸಸ್ಪೆಂಡ್ ಮಾಡಿದ್ದರು.

ಅಮಾನತು ಶಿಕ್ಷೆಗೆ (suspend) ಶಿಫಾರಸುಗೊಂಡಿದ್ದ ಇನ್ನೋರ್ವ ಸಿಬ್ಬಂದಿ ರೇಣುಕ ನಾಯಕ್‌ಗೆ ಮಾತ್ರ ಕಡ್ಡಾಯ ರಜೆ (Compulsory leave) ಶಿಕ್ಷೆ ವಿಧಿಸಲಾಗಿತ್ತು.

ತನ್ನ ಹೆಸರನ್ನು ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ ಕಾರಣಕ್ಕೆ ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿದ ರೇಣುಕ ನಾಯಕ್, ಚಾಕುವಿನಿಂದ ಇರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : Accident : ಕಾಂಗ್ರೆಸ್ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತ.!

ಇದರಿಂದ ಆತಂಕಗೊಂಡ ಎಸಿಪಿ, ಕೊನೆ ಕ್ಷಣದಲ್ಲಿ ಶಿಫಾರಸು ವರದಿಯನ್ನು ಹಿಂಪಡೆದಿದ್ದಾರೆ (withdrawn) ಎನ್ನಲಾಗಿದೆ. ಅಲ್ಲದೆ, ಕಾನ್‌ಸ್ಟೇಬಲ್ ರೇಣುಕಾ ನಾಯಕ್‌ಗೆ 1 ತಿಂಗಳ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ಈ ವಿಚಾರ ತಿಳಿದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಪೊಲೀಸ್‌ ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಆದೇಶಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img