Saturday, July 27, 2024
spot_img
spot_img
spot_img
spot_img
spot_img
spot_img

7 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಯಂತ್ರ ಧ್ವಂಸಗೊಳಿಸಿದ ಶಾಸಕ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅಂಧ್ರಪ್ರದೇಶದ ಅಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಶಾಸಕರೊಬ್ಬರು (Congress MLA) ಮತಗಟ್ಟೆಯಲ್ಲಿ ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರವನ್ನು ಎತ್ತಿಕೊಂಡು ನೆಲಕ್ಕೆ ಎಸೆದ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಅಚ್ಚರಿ ಮೂಡಿಸಿದೆ.

ಏಳು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ)ಗಳನ್ನು ಶಾಸಕ ಧ್ವಂಸಪಡಿಸಿದ್ದಾನೆ.

ಇದನ್ನು ಓದಿ : ತುಂಬಾ ಸಂತೋಷವಾದಾಗ ಹೀಗೂ ಸೆಲೆಬ್ರೇಷನ್ ಮಾಡ್ತಾರಾ.? Videio ನೋಡಿ.!

ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗ (Election Commission) ಹೇಳಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಅಲ್ಲದೇ ಶಾಸಕನನ್ನು ಆರೋಪಿ ಎಂದು ಪರಿಗಣಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಇಂಥಹ ಕೃತ್ಯಕ್ಕೆ ಆ ಶಾಸಕ ಹಾಗೂ ವೈಎಸ್ ಆರ್ ಸಿಪಿಗೆ ಸೋಲಿನ ಭೀತಿಯೇ (Fear of failure) ಕಾರಣ ಎಂದು ವಿರೋಧ ಪಕ್ಷವಾದ ತೆಲುಗುದೇಶಂ ಹೇಳಿದೆ ಎನ್ನಲಾಗಿದೆ.

ಈ ವಿಡಿಯೋ ತುಣುಕಿನಲ್ಲಿ ವೈಎಸ್ ಆರ್ ಸಿಪಿ ಮುಖಂಡ ಹಾಗೂ ಮಚ್ಲೇರಾ ಶಾಸಕ ಪಿನ್ನೇಲಿ ರಾಮಕೃಷ್ಣ ರೆಡ್ಡಿ, ಪಲ್ವಾಲಿ ಗೇಟ್ ಮತಗಟ್ಟೆಗೆ ಹೋದ ವೇಳೆ ಚುನಾವಣಾ ಅಧಿಕಾರಿಗಳು ಗೌರವ ಸೂಚಕವಾಗಿ (sign of respect) ಎದ್ದು ನಿಂತಿರುವುದನ್ನು ನೋಡಬಹುದು.

ಇದನ್ನು ಓದಿ : Special news : ಮದುವೆಯಾಗದೇ ಏಕಾಂಗಿ ಜೀವನ ನಡೆಸಲು ಇಷ್ಟ ಪಡುತ್ತಾರೆ ಈ 4 ರಾಶಿಯವರು.!

ಆದರೆ ಶಾಸಕ ಏನೂ ಮಾತನಾಡದೇ ಮತದಾನ ಮಾಡುವ ಇವಿಎಂ ಇದ್ದ ಜಾಗಕ್ಕೆ ತೆರಳಿ ವಿವಿಪ್ಯಾಟ್ ಎತ್ತಿಕೊಂಡು ನೆಲಕ್ಕೆ ಎಸೆದಿದ್ದಾನೆ.

ಮತಗಟ್ಟೆಯಲ್ಲಿದ್ದ ಒಬ್ಬ ವ್ಯಕ್ತಿ, ಶಾಸಕನ ಸಹಚರನೊಬ್ಬನನ್ನು ಹೊಡೆದು ರೆಡ್ಡಿ ಬಳಿಗೆ ಬರುತ್ತಿದ್ದಾನೆ. ಆತನನ್ನು ಹಿಡಿದು ನಿಲ್ಲಿಸಿದ ಸಂದರ್ಭದಲ್ಲಿ ಶಾಸಕ ಇವಿಎಂ ಕಂಟ್ರೋಲ್ ಯುನಿಟನ್ನು ಒದೆಯುತ್ತಿರುವುದು (kick) ಕಾಣಿಸುತ್ತಿದೆ. ಹೊರಹೋಗುವ ಮುನ್ನ ಶಾಸಕ ದಾಳಿಕೋರನಿಗೆ ಎಚ್ಚರಿಕೆ ನೀಡಿದ್ದಾರೆ.

spot_img
spot_img
- Advertisment -spot_img