ಜನಸ್ಪಂದನ ನ್ಯೂಸ್, ಆರೋಗ್ಯ : ಹೃದಯದ ಆರೋಗ್ಯ ಸಮಸ್ಯೆಗಳು ಇಂದಿನ ದಿನಗಳಲ್ಲಿ ಹಿರಿಯರಲ್ಲಿ ಮಾತ್ರವಲ್ಲದೆ, ಯುವಕರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕಾರಿ ಸಂಗತಿ.
ಹಿಂದೆ ಸಾಮಾನ್ಯವಾಗಿ 50-60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ (Heart Attack) ದ ಅಪಾಯ ಇತ್ತು, ಆದರೆ ಈಗ 25-40 ವರ್ಷದ ನಡುಹರೆಯವರಲ್ಲಿಯೂ ಹೃದ್ರೋಗ ಮತ್ತು ಹೃದಯಾಘಾತ (Heart Attack) ಪ್ರಕರಣಗಳು ವರದಿಯಾಗುತ್ತಿವೆ. ತಜ್ಞರ ಪ್ರಕಾರ ಜೀವನಶೈಲಿ, ಒತ್ತಡ, ಅಸ್ವಸ್ಥ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆ ಇದರ ಪ್ರಮುಖ ಕಾರಣಗಳಾಗಿವೆ.
Snake : ಹಾವಿನ ಜೊತೆ ಸ್ಟಂಟ್ ಮಾಡಲು ಯತ್ನಿಸಿದ ಯುವಕ : ದಾರುಣ ಅಂತ್ಯದ ವಿಡಿಯೋ.!
ಆದರೆ ಅದಕ್ಕಿಂತ ಹೆಚ್ಚು ಅಪಾಯಕಾರಿ ಅಂಶವೆಂದರೆ – ಹೃದಯಾಘಾತ (Heart Attack) ವನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆಯಲು ಕಾರಣವಾದ ಲಕ್ಷಣಗಳು ಬಹುತೇಕ ಸಾಮಾನ್ಯ ಅಸ್ವಸ್ಥತೆಗಳಂತೆ ತೋರುತ್ತವೆ. ಜನರು ಇವುಗಳನ್ನು ನಿರ್ಲಕ್ಷಿಸುವುದರಿಂದ ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ
ಹೃದಯಾಘಾತ (Heart Attack) ದ ಪ್ರಮುಖ 7 ಎಚ್ಚರಿಕೆ ಲಕ್ಷಣಗಳನ್ನು ತಿಳಿದುಕೊಳ್ಳುವುದು ಅಗತ್ಯ :
1. ನಿರಂತರ ಕೆಮ್ಮು :
ಹಠಾತ್ ಉಂಟಾಗುವ ಹಾಗೂ ದಿನದಿಂದ ದಿನಕ್ಕೆ ಮುಂದುವರಿಯುವ ಕೆಮ್ಮು ಹೃದಯದ ಸಮಸ್ಯೆಗೆ ಸೂಚನೆಯಾಗಿರಬಹುದು. ಕೆಲವೊಮ್ಮೆ ಕೆಮ್ಮಿನೊಂದಿಗೆ ಬಿಳಿ ಅಥವಾ ಗುಲಾಬಿ ಬಣ್ಣದ ಲೋಳೆಯೂ ಬರುತ್ತದೆ. ಹೃದಯವು ಸರಿಯಾಗಿ ರಕ್ತ ಪಂಪ್ ಮಾಡದಿದ್ದರೆ ಶ್ವಾಸಕೋಶದಲ್ಲಿ ದ್ರವ ಸಂಗ್ರಹವಾಗುತ್ತದರಿಂದ ಈ ತೊಂದರೆ ಕಾಣಿಸಬಹುದು. ಇದನ್ನು ಸಾಮಾನ್ಯ ಶೀತ ಎಂದು ತಪ್ಪಾಗಿ ನಿರ್ಲಕ್ಷಿಸಬಾರದು.
72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!
2. ವಾಕರಿಕೆ ಅಥವಾ ಅಜೀರ್ಣ :
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಲಕ್ಷಣವನ್ನು ಹಲವರು ಆಹಾರ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ಮರುಮರು ಕಾಣಿಸಿಕೊಳ್ಳುವ ವಾಕರಿಕೆ, ವಾಂತಿ, ಎದೆಯುರಿ ಅಥವಾ ಅಜೀರ್ಣ ಹೃದಯಾಘಾತ (Heart Attack) ದ ಪ್ರಾರಂಭಿಕ ಸೂಚನೆಯಾಗಿರಬಹುದು.
3. ತಲೆತಿರುಗುವಿಕೆ ಮತ್ತು ಆಯಾಸ :
ರಕ್ತ ಸರಿಯಾದ ಪ್ರಮಾಣದಲ್ಲಿ ಮೆದುಳಿಗೆ ತಲುಪದಿದ್ದರೆ ಹಠಾತ್ ತಲೆತಿರುಗುವುದು, ದೌರ್ಬಲ್ಯ ಅಥವಾ ಸುಸ್ತು ಕಾಣಿಸಬಹುದು. ಇದು ಹೃದಯಾಘಾತ (Heart Attack), ಅಸಮರ್ಪಕ ಹೃದಯ ಕವಾಟ ಅಥವಾ ಅನಿಯಮಿತ ಹೃದಯ ಬಡಿತದಿಂದಲೂ ಉಂಟಾಗಬಹುದು.
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!
4. ಉಸಿರಾಟದ ತೊಂದರೆ :
ನಡಿಗೆ, ಮೆಟ್ಟಿಲೇರುವುದು ಅಥವಾ ಸಣ್ಣ ಗೃಹಕಾರ್ಯಗಳಲ್ಲಿಯೂ ಉಸಿರಾಟದ ಸಮಸ್ಯೆ ಎದುರಾದರೆ, ಅದು ಹೃದಯದ ದುರ್ಬಲತೆಯ ಸೂಚನೆ. ದೇಹಕ್ಕೆ ಬೇಕಾದಷ್ಟು ಆಮ್ಲಜನಕ ಸರಬರಾಜು ಆಗದ ಕಾರಣ ದಿನವಿಡೀ ಆಯಾಸ ಮತ್ತು ದೌರ್ಬಲ್ಯ ತೋರುತ್ತದೆ.
5. ನಿದ್ದೆಯಲ್ಲಿರುವಾಗ ಗೊರಕೆ ಹೊಡೆಯುವುದು :
ಜೋರಾಗಿ ಗೊರಕೆ ಹೊಡೆಯುವುದು ಹಾಗೂ ಕೆಲವೊಮ್ಮೆ ಉಸಿರಾಟ ನಿಲ್ಲುವುದು (Sleep Apnea) ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ ಏರಿ, ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು.
6. ಅನಿಯಮಿತ ಹೃದಯ ಬಡಿತ :
ಹೃದಯ ಬಡಿತ ಅಸಹಜವಾಗಿರುವುದು, ಅಲುಗಾಡುವಂತೆ ಅಥವಾ ಜೋರಾಗಿ ಹೊಡೆಯುವಂತೆ ಅನಿಸುವುದು ಸಹ ಹೃದಯಾಘಾತ (Heart Attack) ದ ಸೂಚನೆ ಆಗಬಹುದು. ಇದು ತಾತ್ಕಾಲಿಕವಾಗಿದ್ದರೂ, ಇತರ ಲಕ್ಷಣಗಳೊಂದಿಗೆ ಸೇರಿಕೊಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿಗೆ 30 ವರ್ಷ ಶಿಕ್ಷೆ.!
7. ಕಾಲು, ಪಾದಗಳಲ್ಲಿ ಊತ :
ಕಾಲು, ಪಾದ ಅಥವಾ ಕಣಕಾಲುಗಳಲ್ಲಿ ಏಕಾಏಕಿ ಉಂಟಾಗುವ ಊತ ದೇಹದಲ್ಲಿ ದ್ರವ ಸಂಗ್ರಹವಾಗುತ್ತಿರುವ ಸೂಚನೆಯಾಗಬಹುದು. ಇದು ಹೃದಯದ ದುರ್ಬಲ ಪಂಪಿಂಗ್ ಸಾಮರ್ಥ್ಯದಿಂದಲೂ ಸಂಭವಿಸಬಹುದು.
👉 ಮುಖ್ಯ ಎಚ್ಚರಿಕೆ:
ಈ ಲಕ್ಷಣಗಳಲ್ಲಿ ಒಂದೇ ಆದರೂ ನಿರಂತರವಾಗಿ ಕಾಣಿಸಿದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. ಹೃದಯದ ಕಾಯಿಲೆಗಳು ಮುಂಚಿತವಾಗಿ ಪತ್ತೆಯಾಗಿದ್ರೆ ಚಿಕಿತ್ಸೆ ಸುಲಭವಾಗುತ್ತದೆ ಮತ್ತು ಪ್ರಾಣಾಪಾಯ ತಪ್ಪಬಹುದು.
ಹಕ್ಕು ನಿರಾಕರಣೆ (Disclaimer) :
ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಇಲ್ಲಿ ನೀಡಿರುವ ಮಾಹಿತಿಯನ್ನು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಪರಿಗಣಿಸಬಾರದು. ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಕಡ್ಡಾಯ.
Snake : ಹಾವಿನ ಜೊತೆ ಸ್ಟಂಟ್ ಮಾಡಲು ಯತ್ನಿಸಿದ ಯುವಕ : ದಾರುಣ ಅಂತ್ಯದ ವಿಡಿಯೋ.!
ಜನಸ್ಪಂದನ ನ್ಯೂಸ್, ಮುಜಾಫರ್‌ನಗರ (ಉ.ಪ್ರ) : ಸಾಮಾಜಿಕ ಜಾಲತಾಣಗಳಲ್ಲಿ ಹಾವಿ (Snake) ನೊಂದಿಗೆ ವಿಡಿಯೋ ಮಾಡುವ ಹುಚ್ಚಿನಲ್ಲಿ 24 ವರ್ಷದ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೊರ್ನಾ ತಾಲೂಕಿನ ಭೊಪಾ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನನ್ನು ಮೋಹಿತ್ ಕುಮಾರ್ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಮಂಗಲ್ ಪ್ರಜಾಪತಿ ಎಂಬುವರ ಮನೆಯಲ್ಲಿ ಹಾವು (Snake) ಕಂಡುಬಂದಾಗ ಜನರು ಅಂಜಿ ಬೊಬ್ಬೆ ಹೊಡೆದಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಮೋಹಿತ್ ತನ್ನ ಕೈಗಳಿಂದಲೇ ಹಾವನ್ನು ಹಿಡಿದಿದ್ದಾನೆ.
72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!
ಹಾವ (Snake) ನ್ನು ಹಿಡಿದ ನಂತರ ಆತ ಅದನ್ನು ಚೀಲಕ್ಕೆ ತುಂಬದೆ, ಜನರ ಮುಂದೆ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಹಾವನ್ನು ಕೊರಳಿಗೆ ಸುತ್ತಿಕೊಂಡು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಸಲು ಪ್ರಾರಂಭಿಸಿದ್ದ. ಈ ವೇಳೆ ಬೆದರಿದ ಹಾವು ಆತನ ಕೈಗೆ ಎರಡು ಬಾರಿ ಕಚ್ಚಿತು.
ಕಚ್ಚಿದ ನಂತರವೂ ಹಾವ (Snake) ನ್ನು ಚೀಲಕ್ಕೆ ಹಾಕಿದ ಮೋಹಿತ್, ಕೆಲವು ನಿಮಿಷಗಳಲ್ಲಿ ಅಸ್ವಸ್ಥನಾದ. ತಕ್ಷಣವೇ ಕುಟುಂಬದವರು ಅವನನ್ನು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೋಹಿತ್ ಮೃತಪಟ್ಟಿದ್ದಾನೆ.
ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್ ಸೇವಿಸಿ.!
ಪೊಲೀಸರು ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದು, “ಅವನು ಹಾವ (Snake) ನ್ನು ಹಿಡಿದು ನೇರವಾಗಿ ಕಾಡಿಗೆ ತೆರಳಿ ಬಿಟ್ಟು ಬಂದಿದ್ದರೆ ಬದುಕುಳಿಯಬಹುದಿತ್ತು. ಆದರೆ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ” ಎಂದು ತಿಳಿಸಿದ್ದಾರೆ.
ವೈರಲ್ ವೀಡಿಯೋ ಹುಚ್ಚಿನ ದುಷ್ಪರಿಣಾಮ :
ಇತ್ತೀಚೆಗೆ ವೈರಲ್ ಆಗಲು ಯುವಕರು ಅತಿಯಾದ ಸಾಹಸಗಳಿಗೆ ಮುಂದಾಗುತ್ತಿರುವುದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳು, ರೈಲು ಹಳಿ, ಕಟ್ಟಡಗಳ ಮೇಲ್ಛಾವಣಿ ಇತ್ಯಾದಿ ಅಪಾಯಕಾರಿ ಸ್ಥಳಗಳಲ್ಲಿ ವೀಡಿಯೋ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ತಾವು ಮಾತ್ರವಲ್ಲ ಇತರರ ಜೀವಕ್ಕೂ ಅಪಾಯ ಉಂಟುಮಾಡುತ್ತಿದ್ದಾರೆ.
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!
ಇದೇ ರೀತಿ, ಮೋಹಿತ್ ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ದುರ್ಭಾಗ್ಯವಶಾತ್ ಸಾವಿಗೀಡಾದ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.
ವಿಡಿಯೋ :
मुजफ्फरनगर के भोपा क्षेत्र में एक युवक को कोबरा सांप के साथ खेलना इतना भारी पड़ा कि कोबरा के काटने पर युवक की मौत हो गई। @NavbharatTimes pic.twitter.com/fCim5K03iu
— NBT Uttar Pradesh (@UPNBT) September 21, 2025