Tuesday, October 14, 2025

Janaspandhan News

HomeBelagavi NewsMinor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!
spot_img
spot_img
spot_img

Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆ (Minor) ಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೆಳಗಾವಿಯ ಪೋಕ್ಸೊ ವಿಶೇಷ ಶೀಘ್ರಗತಿ ನ್ಯಾಯಾಲಯವು ಗಂಭೀರ ತೀರ್ಪು ನೀಡಿದೆ. ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಲಾಗಿದೆ.

ಪ್ರಕರಣದ ವಿವರ :

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು, ಯಡಹಳ್ಳಿ ಗ್ರಾಮದ ಪರಶುರಾಮ ಚಲವಾದಿ (28) ಶಿಕ್ಷೆಗೆ ಗುರಿಯಾದ ಆರೋಪಿ. 2021ರ ಸೆಪ್ಟೆಂಬರ್ 20ರಂದು ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅಪ್ರಾಪ್ತೆ (Minor) ಹುಡುಗಿ ಕಾಣೆಯಾಗಿದ್ದಳು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಬಳಿಕ, ಆರೋಪಿ ಅಪ್ರಾಪ್ತೆ (Minor) ಯನ್ನು ಪ್ರೀತಿಸುತ್ತಿದ್ದ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಯಿತು.

ಇಬ್ಬರೂ ತಮ್ಮಷ್ಟಕ್ಕೆ ತಾವೇ ದೇವರ ಗುಡಿಯ ಮುಂದೆ ಮದುವೆಯಾಗಿರುವಂತೆ ನಾಟಕವಾಡಿ, ನಂತರ ಗಂಡ-ಹೆಂಡತಿ ರೀತಿಯಲ್ಲಿ ವಾಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಆರೋಪಿ ಅಪ್ರಾಪ್ತೆ (Minor) ಯ ಮೇಲೆ ಹಲವಾರು ಬಾರಿ ದೈಹಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಕರಣದಲ್ಲಿ ಸಾಬೀತಾಗಿದೆ.

ಕಾನೂನು ಕ್ರಮ :

ಘಟನೆ ನಂತರ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಎಸ್.ಪಿ. ಉನ್ನದ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ನಂತರ ರಾಯಬಾಗ ಸಿಪಿಐ ಎಂ.ಎಂ. ತಹಶೀಲ್ದಾರ ಆರೋಪದ ಕುರಿತು ಹೆಚ್ಚಿನ ತನಿಖೆ ನಡೆಸಿ, ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದರು.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!
ನ್ಯಾಯಾಲಯದ ತೀರ್ಪು :

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರು. ಜೊತೆಗೆ, ರೂ.10,000 ದಂಡ ಪಾವತಿಸಲು ಆದೇಶಿಸಿದರು. ದಂಡದ ಮೊತ್ತ ಪಾವತಿಸದಿದ್ದರೆ ಆರೋಪಿಗೆ ಇನ್ನೂ ಒಂದು ವರ್ಷ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

ಇದರ ಜೊತೆಗೆ, ನೊಂದ ಅಪ್ರಾಪ್ತೆ (Minor) ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.

ಸರಕಾರದ ಪರ ವಾದ :

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

👉 ಈ ತೀರ್ಪು ಅಪ್ರಾಪ್ತೆ (Minor) ಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಾನೂನು ಎಷ್ಟು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ.

POCSO refers to the Protection of Children from Sexual Offences Act, 2012, a special law in India that protects children from sexual assault, harassment, and pornography by providing for severe punishments for offenders and establishing child-friendly legal procedures.

The Act aims to create a comprehensive framework for dealing with all aspects of child sexual abuse, including gender-neutral protection for all minor children and compensation for victims, and was further strengthened with more stringent punishments through a 2019 amendment. 


ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!

Uric Acid

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ಒತ್ತಡದ ಕಾರಣ ಅನೇಕರು ಹೆಚ್ಚಿನ ಯೂರಿಕ್ ಆಮ್ಲ (Uric Acid) ದ ಸಮಸ್ಯೆ ಎದುರಿಸುತ್ತಿದ್ದಾರೆ.

ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ, ಅದು ಕಿಡ್ನಿ ಸಮಸ್ಯೆ, ಸಂಧಿವಾತದ ನೋವು ಹಾಗೂ ಇತರ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯೂರಿಕ್ ಆಮ್ಲ (Uric Acid) ವನ್ನು ನಿಯಂತ್ರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!
ವಿಟಮಿನ್ ‘ಸಿ’ಯಲ್ಲಿ ಸಮೃದ್ಧ ಹಣ್ಣುಗಳು :

ವಿಟಮಿನ್ ‘ಸಿ’ ದೇಹದಿಂದ ಯೂರಿಕ್ ಆಮ್ಲ (Uric Acid) ವನ್ನು ಹೊರಹಾಕುವಲ್ಲಿ ಸಹಾಯಕ. ಕಿತ್ತಳೆ, ಸಿಹಿ ನಿಂಬೆಹಣ್ಣು, ಟ್ಯಾಂಗರಿನ್, ಅನಾನಸ್ ಮತ್ತು ಕಿವಿ ಹಣ್ಣುಗಳು ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಲು ಪರಿಣಾಮಕಾರಿ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಆಪಲ್ ಸೈಡರ್ ವಿನೆಗರ್ :

ಆಪಲ್ ಸೈಡರ್ ವಿನೆಗರ್ ಯೂರಿಕ್ ಆಮ್ಲ (Uric Acid) ನಿವಾರಣೆಗೆ ಜನಪ್ರಿಯ ಮನೆಮದ್ದು. ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದು ಉತ್ತಮ. ಆದರೆ, ಇದನ್ನು ನಿಯಮಿತವಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!
ಒಮೆಗಾ-3 ಕೊಬ್ಬಿನಾಮ್ಲಗಳು :

ಒಮೆಗಾ-3 ಕೊಬ್ಬಿನಾಮ್ಲಗಳು ಯೂರಿಕ್ ಆಮ್ಲ (Uric Acid) ದ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಅಗಸೆ ಬೀಜ, ಚಿಯಾ ಬೀಜ ಮತ್ತು ವಾಲ್ನಟ್ ಮುಂತಾದ ಆಹಾರಗಳಲ್ಲಿ ಒಮೆಗಾ-3 ಸಮೃದ್ಧವಾಗಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದು ಸಂಧಿವಾತದ ಸಮಸ್ಯೆ ಕಡಿಮೆ ಮಾಡುವುದಲ್ಲದೆ ಹೃದಯ ಆರೋಗ್ಯಕ್ಕೂ ಸಹಾಯಕ.

ನೀರಿನ ಮಹತ್ವ :

ದಿನಪೂರ್ತಿ ಸಮರ್ಪಕ ಪ್ರಮಾಣದ ನೀರು ಸೇವನೆ ಕೂಡ ಅತ್ಯಂತ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಗೆ ಹೋಗಿ, ಯೂರಿಕ್ ಆಮ್ಲ (Uric Acid) ಕಡಿಮೆಯಾಗಲು ಸಹಕಾರಿಯಾಗುತ್ತದೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
ಜೀವನಶೈಲಿ ಬದಲಾವಣೆ ಅಗತ್ಯ :

ಆಹಾರ ಮಾತ್ರವಲ್ಲ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಒತ್ತಡ ನಿಯಂತ್ರಣ ಕೂಡ ಯೂರಿಕ್ ಆಮ್ಲದ ಸಮಸ್ಯೆ ನಿವಾರಣೆಗೆ ಅವಶ್ಯಕ. ಫಾಸ್ಟ್‌ಫುಡ್, ಅತಿಯಾದ ಮದ್ಯಪಾನ ಹಾಗೂ ಹೆಚ್ಚು ಪ್ಯೂರಿನ್ ಅಂಶ ಇರುವ ಆಹಾರಗಳನ್ನು (ಹೆಚ್ಚು ಕೆಂಪು ಮಾಂಸ, ಸಮುದ್ರ ಆಹಾರ) ತೊರೆಯುವುದು ಉತ್ತಮ.

👉 ಯೂರಿಕ್ ಆಮ್ಲ ನಿಯಂತ್ರಣಕ್ಕೆ ಈ ಆಹಾರ ಹಾಗೂ ಪಾನೀಯಗಳನ್ನು ಸರಿಯಾದ ಪ್ರಮಾಣದಲ್ಲಿ ಆಹಾರ ಯೋಜನೆಯಲ್ಲಿ ಸೇರಿಸಿಕೊಳ್ಳಿ. ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳಬಹುದು.

Disclaimer : This article is based on reports and information available on the internet. Janaspandhan News is not affiliated with it and is not responsible for it.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments