Sunday, September 8, 2024
spot_img
spot_img
spot_img
spot_img
spot_img
spot_img
spot_img

Urine : ನಿಮ್ಮ ಮೂತ್ರದ ಬಣ್ಣದಿಂದಲೇ ತಿಳಿಯುತ್ತೇ ನಿಮ್ಮ ಆರೋಗ್ಯದ ಹೇಗಿದೆ ಎಂದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಆರೋಗ್ಯ : ವಿಸರ್ಜನೆಗೆ ಹೋಗುವಾಗ ಮೂತ್ರ ಯಾವ ಬಣ್ಣದಲ್ಲಿದೆ ಎಂದು ಗಮನಿಸುತ್ತೀರಾ.? ಮೂತ್ರದ ಬಣ್ಣ ನೋಡಿ ನಿಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಯಬಹುದು.

ಮೂತ್ರ ಎನ್ನುವುದು ನಮ್ಮ ದೇಹದಿಂದ ಹೊರಹೋಗುವ ದ್ರವರೂಪದ ತ್ಯಾಜ್ಯವಾಗಿದೆ. ಮೂತ್ರವು ನೀರು, ಯೂರಿಯಾ, ಉಪ್ಪಿನ ಮಿಶ್ರಣವಾಗಿದೆ. ಇದು ಕಿಡ್ನಿಯ ಮೂಲಕ ಮೂತ್ರಕೋಶಕ್ಕೆ ಬಂದು ನಂತರ ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಹೊರಹಾಕಲ್ಪಡುತ್ತದೆ.

ಇದನ್ನು ಓದಿ : BHEL Recruitment : ಡಿಪ್ಲೋಮಾ ಪಾಸಾದವರಿಗೆ ಬಂಪರ್ ಉದ್ಯೋಗಾವಕಾಶ.!

ಎಷ್ಟು ಪ್ರಮಾಣದ ನೀರು ನಮ್ಮ ದೇಹಕ್ಕೆ ಅಗತ್ಯವಿದೆ ಎಂದು ಕಂಡು ಹಿಡಿಯುವುದು ಹೇಗೆ?

ನೀವು ಕುಡಿದ ನೀರು ನಿಮ್ಮ ದೇಹಕ್ಕೆ ಸಾಕಾಗಿದೆಯೇ ಎಂಬುವುದನ್ನು ಮೂತ್ರದ ಬಣ್ಣ ಗಮನಿಸಿ ಕಂಡು ಹಿಡಿಯಬಹುದು. ಮೂತ್ರ ಹಳದಿ ಬಣ್ಣದಲ್ಲಿದ್ದರೆ ನೀರು ಸಾಕಾಗಿಲ್ಲವೆಂದು ಅರ್ಥ. ಅದೇ ಮೂತ್ರ ಬಣ್ಣ ರಹಿತವಾಗಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾದ ನೀರು ನೀವು ಕುಡಿದ್ದೀರಿ ಎಂದು ತಿಳಿಯಬಹುದು. ಈ ಮೂಲಕ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.

ಇಲ್ಲಿ ಮೂತ್ರದ ಯಾವ ಬಣ್ಣ ಏನನ್ನು ಸೂಚಿಸುತ್ತದೆ ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ :

1.ಹಳದಿ ಬಣ್ಣ : ಮೂತ್ರ ತೆಳು ಹಳದಿ ಬಣ್ಣದಲ್ಲಿದಲ್ಲಿದ್ದರೆ ನೀವು ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿದ್ದೀರಿ ಎಂದು ಅರ್ಥ. ದೇಹದಲ್ಲಿ ನೀರಿನಂಶ ಸರಿಯಾಗಿ ಇದ್ದರೆ ಮೂತ್ರ ತೆಳು ಹಳದಿ ಬಣ್ಣದಲ್ಲಿದ್ದು ಮೂತ್ರ ಮಾಡುವಾಗ ಹೆಚ್ಚಿನ ದುರ್ವಾಸನೆ ಬಿರುವುದಿಲ್ಲ. ನಿಮ್ಮ ಮೂತ್ರ ಕಡು ಹಳದಿ ಬಣ್ಣದಲ್ಲಿದ್ದರೆ ಆರೋಗ್ಯಕ್ಕೇನು ತೊಂದರೆಯಿಲ್ಲ, ಆದರೆ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುತ್ತಿಲ್ಲವೆಂದು ಅರ್ಥ. ಈ ಮೂತ್ರ ಹೆಚ್ಚು ದುರ್ವಾಸನೆ ಹೊಂದಿರುತ್ತದೆ. ಮೂತ್ರ ಈ ರೀತಿ ಕಂಡು ಬಂದಾಗ ಸಾಕಷ್ಟು ನೀರು ಕುಡಿಯಿರಿ.

2. ಕಿತ್ತಳೆ ಬಣ್ಣ : ಇನ್ನು ಕ್ಯಾರೆಟ್, ಬೀಟಾ ಕೆರೋಟಿನ್ ಅಧಿಕವಿರುವ ಆಹಾರ ತಿಂದಾಗ ಮೂತ್ರ ಕಿತ್ತಳೆ ಬಣ್ಣದಲ್ಲಿರುತ್ತದೆ, ಆಹಾರದಿಂದಾಗಿ ಮೂತ್ರದ ಬಣ್ಣದ ಬದಲಾಗಿದ್ದರೆ ಈ ಬಣ್ಣ ಒಂದು ದಿನ ಇರುತ್ತದೆ ಅಷ್ಟೇ. ಇನ್ನು ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾದಾಗ ಕೂಡ ಕಡು ಕಿತ್ತಳೆ ಬಣ್ಣದಲ್ಲಿರುತ್ತದೆ. ಆಗ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ಇನ್ನು ಕೆಲವೊಂದು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇನ್ನು ವಿಟಮಿನ್ ಸಿ ತೆಗೆದುಕೊಳ್ಳುವುದರಿಂದ ಮೂತ್ರ ಕಿತ್ತಳೆ ಬಣ್ಣದಲ್ಲಿರುವುದು. ಕಿಡ್ನಿ ಸೋಂಕು, ಕಿಡ್ನಿಯಲ್ಲಿ ಕಲ್ಲು, ಕಿಡ್ನಿ ಸಂಬಂಧಿತ ಕಾಯಿಲೆಗಳು ಇದ್ದಾಗಲೂ ಮೂತ್ರ ಕಿತ್ತಳೆ ಬಣ್ಣದಲ್ಲಿರುತ್ತದೆ.

3. ಕೆಂಪು ಬಣ್ಣ : ಪಿಂಕ್ ಅಥವಾ ಕೆಂಪು ಬಣ್ಣದ ಮೂತ್ರವು ನೀವು ತಿಂದ ಆಹಾರದಿಂದಾಗಿ ಉಂಟಾಗಿರುತ್ತದೆ. ಬೀಟ್‌ರೂಟ್, ಬ್ಲ್ಯಾಕ್‌ಬೆರ್ರಿ, ಕೆಲವು ಕ್ಯಾಂಡಿ ಇವುಗಳಿಂದಾಗಿ ಉಂಟಾಗಿರುತ್ತದೆ. ಈ ಬಣ್ಣ ಒಂದು ದಿನಕ್ಕಿಂತ ಹೆಚ್ಚು ಇರುವುದಿಲ್ಲ. ಇನ್ನು ಕೆಲವು ಮನೆಮದ್ದುಗಳು, ಔಷಧಿಗಳಿಂದಲೂ ಮೂತ್ರದ ಬಣ್ಣ ಕೆಂಪು ಅಥವಾ ಪಿಂಕ್ ಬಣ್ಣಕ್ಕೆ ತಿರುಗುತ್ತದೆ. ಇನ್ನು ಮೂತ್ರದಲ್ಲಿ ರಕ್ತ ಕಂಡು ಬರುವುದಾದರೆ ಗಮನಿಸಿ. ಮುಟ್ಟಿನ ಸಮಯದಲ್ಲಿ ರಕ್ತ ಕಂಡ ಬರುವುದು. ಇನ್ನು ಮೂತ್ರಕೋಶ ಅಥವಾ ಕಿಡ್ನಿಯಲ್ಲಿ ಗಡ್ಡೆಗಳಿದ್ದರೆ ಮೂತ್ರದಲ್ಲಿ ರಕ್ತ ಕಂಡು ಬರುವುದು. ಇನ್ನು ಸಿಸ್ಟ್ ಹಾಗೂ UTI ಸಮಸ್ಯೆ ಇದ್ದಾಗಲೂ ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಕಂಡು ಬರುವುದು. ಕಿಡ್ನಿ ಸ್ಟೋನ್, ಕಿಡ್ನಿ ಸೋಂಕು, ಪ್ರೊಸ್ಟೇಟ್‌ ಸಮಸ್ಯೆಯಿದ್ದಾಗಲೂ ಮೂತ್ರ ಪಿಂಕ್ ಬಣ್ಣಕ್ಕೆ ತಿರುಗುತ್ತದೆ.

4. ಕಡು ಕಂದು ಬಣ್ಣ : ಆಹಾರಕ್ರಮ, ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಅತಿಯಾಗಿ ವ್ಯಾಯಾಮ ಮಾಡಿದಾಗ ಮೂತ್ರ ಈ ಬಣ್ಣಕ್ಕೆ ತಿರುಗು ವುದು. ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ ಆ್ಯಂಟಿ ಬ್ಯಾಕ್ಟಿರಿಯಾ ಡ್ರಗ್ಸ್ ತೆಗೆದುಕೊಂಡಾಗ, ಕಬ್ಬಿಣದಂಶವಿರುವ ಮಾತ್ರೆಗಳು , ಇನ್ನು ಅತ್ಯಧಿಕ ನ್ಯೂಟ್ರಿಷಿಯನ್ ಅಥವಾ ಗಿಡ ಮೂಲಿಕೆಗಳನ್ನು ತೆಗೆದುಕೊಂಡಾಗ ಮೂತ್ರದ ಬಣ್ಣ ಕಡು ಕಂದು ಬಣ್ಣಕ್ಕೆ ತಿರುಗುವುದು.

ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನುವುದರಿಂದ ಏನು ಪ್ರಯೋಜನ ಗೊತ್ತೇ.?

5. ನಿಯೋನ್ ಬಣ್ಣ : ಮೂತ್ರದ ಬಣ್ಣ ನಿಯೋನ್‌ನಲ್ಲಿದ್ದರೆ ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲವೆಂದರ್ಥ. ಡಯಟ್‌ನಿಂದ ಈ ರೀತಿ ಬಣ್ಣ ಬದಲಾಗದಿದ್ದರೆ ಆರೋಗ್ಯ ಸಮಸ್ಯೆಯಿಂದಾಗಿ ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು. UTI ಸಮಸ್ಯೆಯಿದ್ದಾಗ, ಅಂಗಾಂಗ ವೈಫಲ್ಯ, ಕ್ಯಾನ್ಸರ್ ಈ ರೀತಿಯ ಸಮಸ್ಯೆಯಿದ್ದಾಗಲೂ ಮೂತ್ರ ನಿಯೋನ್‌ ಬಣ್ಣದಲ್ಲಿರುತ್ತದೆ.

6. ಹಸಿರು ಬಣ್ಣ : ಶತಾವರಿ ತಿಂದಾಗ ಮೂತ್ರ ಹಸಿರು ಬಣ್ಣದಲ್ಲಿರುತ್ತದೆ. ಇನ್ನು ಕೃತಕ ಬಣ್ಣ ಹಾಕಿರುವ ಆಹಾರ ತಿಂದಾಗಲೂ ಮೂತ್ರದಲ್ಲಿ ವ್ಯತ್ಯಾಸ ಕಂಡು ಬರುವುದು. ಇನ್ನು ಕೆಲವೊಮ್ಮೆ ಕ್ಯಾನ್ಸರ್ ಮದ್ದುಗಳು, ಇನ್ನು ರಕ್ತ ಸಂಬಂಧಿ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳಿಂದಲೂ ಮೂತ್ರ ಹಸಿರು ಬಣ್ಣಕ್ಕೆ ತಿರುಗುತ್ತದೆ. ಇನ್ನು ವಿಟಮಿನ್ ಬಿ ಅತ್ಯಧಿಕ ತೆಗೆದುಕೊಳ್ಳುವುದರಿಂದ ಮೂತ್ರ ತೆಳು ಹಸಿರು ಬಣ್ಣಕ್ಕೆ ತಿರುಗುವುದು. ಮೂತ್ರ ಹಸಿರು ಬಣ್ಣದಲ್ಲಿದ್ದ ನೋವು, ಜ್ವರ, ರಕ್ತಸ್ರಾವ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇನ್ನು UTI ಉಂಟಾದಾಗ ಮೂತ್ರ ಮಾಡುವಾಗ ಉರಿ, ವಾಸನೆ ಇರುವುದು ಹಾಗೂ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು.

7. ನೀಲಿ ಬಣ್ಣ : ಕೆಲವೊಂದು ಆಹಾರಗಳನ್ನು ತಿಂದಾಗ ಮೂತ್ರ ನೀಲಿ ಬಣ್ಣಕ್ಕೆ ತಿರುಗುತ್ತದೆ. ಮೂತ್ರ ನೀಲಿ ಬಣ್ಣಕ್ಕೆ ತಿರುಗುವುದು ತುಂಬಾ ಅಪರೂಪ. ಪೋರ್ಫೈರಿಯಾದಂಥ ತುಂಬಾ ಅಪರೂಪದ ಅನುವಂಶಿಕ ಕಾಯಿಲೆ ಕಾಣಿಸಿಕೊಂಡಾಗ ಈ ರೀತಿ ಮೂತ್ರ ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಈ ಕಾಯಿಲೆಯಲ್ಲಿ ಮೂತ್ರ ನೇರಳೆ ಬಣ್ಣದಲ್ಲಿರುತ್ತದೆ, ಕೆಲವರು ಅದನ್ನು ನೀಲಿ ಬಣ್ಣವೆಂದು ತಿಳಿಯುತ್ತಾರೆ.

ಇದನ್ನು ಓದಿ : Job : ರಾಜ್ಯ ಸರ್ಕಾರದಿಂದ ನರ್ಸ್​ ಮೆಂಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

8. ಮೂತ್ರದಲ್ಲಿ ರಕ್ತ ಕಂಡು ಬರುವುದು : ಮೂತ್ರದಲ್ಲಿ ರಕ್ತ ಕಾಣಿಸಿದರೆ ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ. ಇದು ಕಿಡ್ನಿ, ಗರ್ಭಕೋಶ, ಮೂತ್ರಕೋಶ ತೊಂದರೆ ಇದ್ದರೆ ಈ ರೀತಿ ಮೂತ್ರದಲ್ಲಿ ರಕ್ತ ಕಂಡು ಬರುವುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಯಾವ ಕಾರಣಕ್ಕೆ ರಕ್ತ ಬರುತ್ತಿದೆ ಎಂದು ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

9. ಬಣ್ಣ ರಹಿತ ಮೂತ್ರ : ಬಣ್ಣ ರಹಿತ ಮೂತ್ರ ಆರೋಗ್ಯದ ಸಂಕೇತ ಅಂತ ನೀವು ಅಂದುಕೊಂಡಿರಬಹುದು, ನಿಮ್ಮ ಮೂತ್ರ ನೀರಿನ ಬಣ್ಣದಲ್ಲಿದ್ದರೆ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದರ್ಥ. ನೀರನ್ನು ಕಡಿಮೆ ಕುಡಿದರೆ ಮಾತ್ರವಲ್ಲ, ಹೆಚ್ಚಾಗಿ ಕುಡಿದರೂ ಒಳ್ಳೆಯದಲ್ಲ. ಸಕ್ಕರೆ ಕಾಯಿಲೆಯ ವಿಧದಲ್ಲಿ ಬಹುಅಪರೂಪದ ಕಾಯಿಲೆಯಾದ ಇನ್ಸಿಪಿಡಸ್ ಮಧುಮೇಹವಿದ್ದರೆ ಮೂತ್ರ ಬಣ್ಣ ರಹಿತವಾಗಿರುತ್ತದೆ. ನೀವು ನೀರು ಕಡಿಮೆ ಕುಡಿದರೂ ಮೂತ್ರ ಬಣ್ಣ ರಹಿತವಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.  (ಎಜೇನ್ಸಿಸ್)

Disclaimer : ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನಾವೂ ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img