Wednesday, May 22, 2024
spot_img
spot_img
spot_img
spot_img
spot_img
spot_img

Health : ಶೇಂಗಾವನ್ನು ನೆನಸಿಟ್ಟು ತಿನ್ನುವುದರಿಂದ ಏನು ಪ್ರಯೋಜನ ಗೊತ್ತೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಶೇಂಗಾ ಅಥವಾ ನೆಲಗಡಲೆಯನ್ನು ಬಡವರ ಬಾದಾಮಿ (almond) ಅಂತಾನೇ ಕರೆಯಲಾಗುತ್ತದೆ. ಇದು ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ.

ಶೇಂಗಾದಲ್ಲಿ (Peanut) ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಸಮೃದ್ಧವಾಗಿವೆ. ಅವು ಹೃದಯಕ್ಕೆ ಆರೋಗ್ಯಕರ ಕೊಬ್ಬುಗಳಾಗಿವೆ. ಅವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು (Heart Problem) ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ : SSLC ಪಾಸಾಗಿದ್ದೀರಾ : ಕರ್ನಾಟಕದಲ್ಲಿದೆ ಪೋಸ್ಟ್ ಆಫೀಸ್‌ನಲ್ಲಿ ಉದ್ಯೋಗ ; ನಾಳೆಯೇ ಕೊನೆಯ ದಿನ.!

ಶೇಂಗಾ ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಈ ಶೇಂಗಾವನ್ನು ನೇರವಾಗಿ ಸೇವಿಸುವುದಕ್ಕಿಂತ ನೆನಸಿಟ್ಟು ತಿನ್ನವುದರಿಂದ ಆರೋಗ್ಯ ಪ್ರಯೋಜನಗಳು (benefits) ಹೆಚ್ಚಾಗುತ್ತವೆ.

* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಂಟಿಆಕ್ಸಿಡೆಂಟ್‌ಗಳು ಶೇಂಗಾದಲ್ಲಿ ಹೇರಳವಾಗಿವೆ. ಇದರ ಪರಿಣಾಮವಾಗಿ, ಅನೇಕ ಸೋಂಕುಗಳು (Infections) ಮತ್ತು ರೋಗಗಳನ್ನು ತಡೆಯಬಹುದಾಗಿದೆ.

* ಪ್ರತಿದಿನ ಬೆಳಿಗ್ಗೆ ನೆನೆಸಿದ ಶೇಂಗಾ ತಿನ್ನುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು (risk) ಕಡಿಮೆ ಮಾಡುತ್ತದೆ.

* ಶೇಂಗಾದಲ್ಲಿ ಕಂಡುಬರುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ಗಳು ದೃಷ್ಟಿ ಸುಧಾರಣೆಗೆ ಸಹಾಯ ಮಾಡುತ್ತದೆ.

* ಶೇಂಗಾ ಉತ್ಕರ್ಷಣ ನಿರೋಧಕಗಳ (antioxidant) ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಹಲವಾರು ರೋಗಗಳು ಮತ್ತು ಸೋಂಕುಗಳನ್ನು ನಿಯಂತ್ರಿಸಬಹುದು.

* ಸೋಡಾ ಮತ್ತು ಇತರ ಕಾರ್ಬೊನೇಟೆಡ್ ಪಾನೀಯಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಇಂಗಾಲದ ಡೈಆಕ್ಸೈಡ್ (carbon dioxide) ಬಿಡುಗಡೆಯಾಗುವುದರಿಂದ ಅನಿಲ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು.

* ಖಾಲಿ ಹೊಟ್ಟೆಯಲ್ಲಿ ನೆನೆಸಿದ ಶೇಂಗಾ ತಿನ್ನುವುದರಿಂದ ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನು ಓದಿ : ಇಂದು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೆಚ್ಚು ಮಳೆ ನಿರೀಕ್ಷೆ ; Yellow alert ಘೋಷಣೆ.!

* ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಶೇಂಗಾವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img