ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಕುಶಿನಗರದಲ್ಲಿ ಶಾಲೆ ಹಾಗೂ ಕಾಲೇಜುಗಳ ಹೊರಗೆ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಾ, ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಅವರದೇ ಆದ ಶೈಲಿಯಲ್ಲಿ ಗುಂಡೇಟು (Gunshot) ಕೊಟ್ಟು ವಶಕ್ಕೆ ಪಡೆದಿದ್ದಾರೆ.
ಗುಂಡೇಟು (Gunshot) ಕೊಟ್ಟು ವಶಕ್ಕೆ ಪಡೆದಿರುವ ಆರೋಪಿಗಳನ್ನು ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊರ್ವಾನ್ ಬರ್ಕಾ ಟೋಲಾ ನಿವಾಸಿಗಳಾದ ಅಸ್ಲಾಂ ಮತ್ತು ಜುಲ್ಫಿಕರ್ ಎಂದು ಗುರುತಿಸಲಾಗಿದೆ.
ಈ ಯುವಕರು ದಿನನಿತ್ಯ ಶಾಲಾ – ಕಾಲೇಜುಗಳ ಗೇಟ್ ಬಳಿ ನಿಂತುಕೊಂಡು ವಿದ್ಯಾರ್ಥಿನಿಯರಿಗೆ ಅದರಲ್ಲೂ ಹಿಂದೂ ಹೆಣ್ಣು ಮಕ್ಕಳಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದರು.
ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?
ಇವರ ವಿರುದ್ಧ ಅನೇಕ ದೂರುಗಳು ದಾಖಲಾಗಿದ್ದವು. ಶಾಲಾ-ಕಾಲೇಜುಗಳ ಬಳಿ ನಿಂತು ವಿದ್ಯಾರ್ಥಿನಿಯರಿಗೆ ಅಶ್ಲೀಲ ಕಾಮೆಂಟ್ ಮಾಡುವುದರಿಂದ ಪೋಷಕರು ಮತ್ತು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಬ್ಬರೂ ತಲೆಮರೆಸಿಕೊಂಡಿದ್ದರು. ಪೊಲೀಸರು ಇವರ ಬಂಧನಕ್ಕಾಗಿ 25 ಸಾವಿರ ರೂ. ಬಹುಮಾನ ಘೋಷಿಸಿದ್ದರು. ಪೊಲೀಸ್ ತಂಡವು ರಾಮ್‌ಕೋಲಾ ಠಾಣೆಯ ಕುಸುಮಹಾ ಪುಲಿಯ ಬಳಿ ನಿಗಾವಳಿ ಮಾಡಿ ತಪಾಸಣೆ ಆರಂಭಿಸಿತು. ಈ ವೇಳೆ ಒಂದು ಮೋಟಾರ್‌ಸೈಕಲ್ ಬರುತ್ತಿರುವುದು ಕಂಡು ಬಂತು.
ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕಾನ್ಸ್‌ಟೇಬಲ್ ಪತಿ.!
ಪೊಲೀಸರ ತಂಡವು ಅದನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಬೈಕ್ ಸವಾರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮವಾಗಿ ಇಬ್ಬರು ಗುಂಡೇಟಿನಿಂದ (Gunshot) ದುಷ್ಕರ್ಮಿಗಳು ಗಾಯಗೊಂಡಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡೇಟು (Gunshot) ತಿಂದು ಬಂಧಿತರಿಂದ 2 ಅಕ್ರಮ ದೇಶೀ ಪಿಸ್ತೂಲ್‌ಗಳು, 5 ಜೀವಂತ ಮತ್ತು 2 ಬಳಸಿದ ಕಾರ್ಟ್ರಿಡ್ಜ್‌ಗಳು, ನಂಬರ್ ಇಲ್ಲದ ಬೈಕ್ ಹಾಗೂ 1100 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಜನಸ್ಪಂದನ ನ್ಯೂಸ್, ಆರೋಗ್ಯ : ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲಿ ವಿಷದಿಂದ ಮುಕ್ತವಾಗಿರೋ ಹಣ್ಣು ಎಂದ್ರೆ ಇವೆರಡೇ ನೋಡಿ.! ಬನ್ನಿ ಇಂದು ಆ ಎರಡು ಹಣ್ಣುಗಳು (Fruits) ಯಾವವು.? ಅವುಗಳಿಂದಾಗುವ ಪರಿಣಾಮಗಳೇನು ಅಂತ ತಿಳಿಯೋಣ.!
ಇಂದಿನ ಪರಿಸ್ಥಿತಿಯಲ್ಲಿ ಹಣ್ಣು-ತರಕಾರಿಗಳನ್ನು ತಾಜಾ ಎಂದು ಮಾರುಕಟ್ಟೆಯಿಂದ ಖರೀದಿಸುವಾಗ ನಾವು ತಿಳಿಯದೆ ವಿಷವನ್ನು ಸೇವಿಸುತ್ತಿರುವುದೇ ಹೆಚ್ಚು. ವೈದ್ಯರು ಹಣ್ಣು-ತರಕಾರಿ ಸೇವನೆ ಆರೋಗ್ಯಕ್ಕೆ ಮುಖ್ಯ ಎಂದು ಹೇಳಿದರೂ, ಮಾರುಕಟ್ಟೆಯ ಬಹುತೇಕ ಉತ್ಪನ್ನಗಳು ರಾಸಾಯನಿಕ ಸಿಂಪಡಣೆ ಮತ್ತು ಕೃತಕ ಬಣ್ಣದಿಂದ ತುಂಬಿರುತ್ತವೆ.
Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ತರಕಾರಿ ಮತ್ತು ಸೊಪ್ಪು ಹಸಿರು ಹಸಿರಾಗಿ ಕಾಣಲು ವಿಶೇಷ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ತೊಳೆದಾಗ ಬಣ್ಣ ಬಿಟ್ಟುಕೊಳ್ಳುವುದು ಸಾಮಾನ್ಯ. ಇದೇ ರೀತಿ ಪ್ಯಾಕೆಟ್‌ಗಳಲ್ಲಿ ಲಭ್ಯವಿರುವ ಬಟಾಣಿ ಕಾಳುಗಳಲ್ಲಿ ಕೂಡ ಕೃತಕ ಬಣ್ಣದ ಬಳಸಿರುವುದು ಕಾಣಬಹುದು.
ಮತ್ತೊಂದೆಡೆ, ರೈತರು ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದರೆ ಅದನ್ನು ಜನರು ಸ್ವೀಕರಿಸುವಲ್ಲಿ ಹಿಂಜರಿಯುತ್ತಾರೆ. ಕಾರಣ, ಆ ತರಕಾರಿಗಳಲ್ಲಿ ಹುಳು ಕಾಣಿಸಬಹುದು ಅಥವಾ ನೋಡಲು ಅಷ್ಟು ಆಕರ್ಷಕವಾಗಿರುವುದಿಲ್ಲ. ಇದರಿಂದ ಮಾರುಕಟ್ಟೆಯ ಒತ್ತಡಕ್ಕೆ ಬಿದ್ದು ಹಲವರು ರಾಸಾಯನಿಕ ಬಳಕೆ ಮಾಡಲೇಬೇಕಾದ ಪರಿಸ್ಥಿತಿ ಎದುರಿಸುತ್ತಾರೆ.
Lover : ಪ್ರಿಯಕರನೊಂದಿಗೆ ಹೊರಟ ತಾಯಿ ; “ಹೋಗಬೇಡಮ್ಮ” ಎಂದು ಕಣ್ಣೀರಿನಿಂದ ಬೇಡಿಕೊಂಡ ಮಕ್ಕಳು.!
ಹಣ್ಣುಗಳ (Fruits) ವಿಷಯದಲ್ಲೂ ಪರಿಸ್ಥಿತಿ ಭಿನ್ನವಲ್ಲ. ದ್ರಾಕ್ಷಿಯಂಥ ಹಣ್ಣುಗಳಿಗೆ (Fruits) ನೇರವಾಗಿ ಕ್ರಿಮಿನಾಶಕ ಸಿಂಪಡಿಸಲಾಗುತ್ತದೆ. ಸೇಬು ಹಣ್ಣಿನ ಮೇಲೂ ರಾಸಾಯನಿಕ ಸಿಂಪಡಣೆ ಸಾಮಾನ್ಯ. ಅದೇ ಕಾರಣಕ್ಕೆ ಸೇಬಿನ ಸಿಪ್ಪೆ ತೆಗೆದು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಆದರೆ, ಕೆಲವು ಹಣ್ಣುಗಳು ಮಾತ್ರ ರಾಸಾಯನಿಕದ ಪರಿಣಾಮವನ್ನು ಸಹಿಸುವುದಿಲ್ಲ. ತಜ್ಞರ ಪ್ರಕಾರ, ಬಾಳೆಹಣ್ಣು ಮತ್ತು ಪೇರಲೆ (ಸೀಬೆ) ಹಣ್ಣುಗಳನ್ನು (Fruits) ಹೆಚ್ಚಾಗಿ ರಾಸಾಯನಿಕವಿಲ್ಲದೇ ಸೇವಿಸಬಹುದು. ಬಾಳೆ ಎಲ್ಲೆಡೆ ಸಾಮಾನ್ಯವಾಗಿದ್ದು, ಪೇರಲೆಯನ್ನು “ಬಡವರ ಸೇಬು” ಎಂದು ಕರೆಯಲಾಗುತ್ತದೆ.
POCSO : ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದ ದೌರ್ಜನ್ಯ ; ಬಾಲಕಿ 2 ತಿಂಗಳು ಗರ್ಭಿಣಿ.!
ಇದರಿಂದಾಗಿ, ದೇಹಕ್ಕೆ ಹಾನಿ ಮಾಡದ, ಆರೋಗ್ಯಕರ ಹಣ್ಣುಗಳನ್ನು (Fruits) ಆಯ್ಕೆ ಮಾಡಬೇಕೆಂದರೆ ಬಾಳೆ ಮತ್ತು ಪೇರಲೆ ಉತ್ತಮ ಆಯ್ಕೆ ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.