Tuesday, September 16, 2025

Janaspandhan News

HomeGeneral Newsಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!
spot_img
spot_img
spot_img

ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಒಂದೇ ಕೋಣೆಯಲ್ಲಿದ್ದ ಪತ್ನಿ ಹಾಗೂ ಅವಳ ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಕಾನ್ಸ್‌ಟೇಬಲ್‌ (Constable) ಪತಿ ಹಿಡಿದಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ ಮದುವೆಯ ನಂತರ ಅಕ್ರಮ ಸಂಬಂಧದ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳು ಬಹಿರಂಗವಾದಾಗ ಕೆಲವೊಮ್ಮೆ ಪತಿ ಅಥವಾ ಪತ್ನಿ ಜೀವ ಕಳೆದುಕೊಳ್ಳುವ ಘಟನೆಗಳು ನಡೆಯುತ್ತವೆ. ಕೆಲವೆಡೆ, ಪತಿ ತನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪ್ರಕರಣಗಳೂ ಕಂಡುಬಂದಿವೆ.

BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!

ಇತ್ತೀಚೆಗೆ ಕುಶೀನಗರದಲ್ಲಿ ನಡೆದ ಘಟನೆ ಇದಕ್ಕೆ ಹೊಸ ಉದಾಹರಣೆ. ಪತಿ ತನ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದಾಗ, ಕೋಣೆಯೊಳಗೆ ಪತ್ನಿ ಮತ್ತೊಬ್ಬ ಕಾನ್ಸ್‌ಟೇಬಲ್‌ (Constable) ಜೊತೆ ರಾಸಲೀಲೆ ನಡೆಸುತ್ತಿರುವುದನ್ನು  ನೋಡಿ ಬೆಚ್ಚಿಬಿದ್ದನು.

ಕೂಡಲೇ ಯಾರೋ ತನ್ನ ಪತ್ನಿಯನ್ನು ಕೋಣೆಯಲ್ಲಿ ಬಂಧಿಸಿದ್ದಾರೆ ಮತ್ತು ಬಾಗಿಲು ಬಡಿದ ನಂತರವೂ ಅವಳು ತೆರೆಯುತ್ತಿಲ್ಲ ಎಂದು ಪತಿ ಯುಪಿ ಪೊಲೀಸ್ 112 ಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದರು ಬಾಗಿಲು ತೆರೆಯಲಿಲ್ಲ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ಕೆಲವು ಸಮಯದ ನಂತರ ಬಾಗಿಲು ತೆರೆಯಲ್ಪಟ್ಟಾಗ, ಮಹಿಳಾ ಕಾನ್ಸ್‌ಟೇಬಲ್‌ (women Constable) ಪೊಲೀಸ್ ಸಮವಸ್ತ್ರದಲ್ಲೇ ಹೊರಬಂದರು. ಈ ಸಂದರ್ಭದಲ್ಲಿ ಪತಿ, ಪತ್ನಿಯ ಜೊತೆ ಇನ್ನೋರ್ವ ಇದ್ದುದನ್ನು ಕಂಡು ಬಂದಿತು.

ವಿಶೇಷವೆಂದರೆ, ಮಹಿಳೆ ಸ್ವತಃ ಪೋಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದು, ಇನ್ನು ಆಕೆಯ ಜೊತೆಗಿದ್ದ ಪ್ರಿಯಕರನೂ ಕೂಡಾ ಪೊಲೀಸ್ (Constable) ಇಲಾಖೆಯವನಾಗಿದ್ದಾನೆ.

Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!

ಮಾಹಿತಿಯ ಪ್ರಕಾರ, 2016ರ ಬ್ಯಾಚ್‌ನ ಈ ದಂಪತಿ ಕುಶೀನಗರದ ಕಶ್ಯ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪತಿ ಬಲ್ಲಿಯಾ ಮೂಲದ ಕಾನ್ಸ್‌ಟೇಬಲ್‌ (Constable) ಪೊಲೀಸ್ ಲೈನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಪತ್ನಿ ಸ್ಥಳೀಯ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಡಿಯೋ :

ಈ ಘಟನೆ ಸ್ಥಳೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂದಿನ ಕ್ರಮದ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ.


Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!

Fat

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಮತ್ತು ಸೊಂಟದ ಸುತ್ತಮುತ್ತ ಹೆಚ್ಚುವರಿ ಕೊಬ್ಬು (Fat) ಕೇವಲ ಬೊಜ್ಜಿನ ಲಕ್ಷಣ ಮಾತ್ರವಲ್ಲ, ಇದು ಅನಾರೋಗ್ಯಕರ ಜೀವನಶೈಲಿ ಮತ್ತು ಅಸಮತೋಲನ ಆಹಾರದ ಪರಿಣಾಮವೂ ಆಗಿದೆ.

ಹೊಟ್ಟೆಯಲ್ಲಿ ನಿಧಾನವಾಗಿ ಹೆಚ್ಚುವ ಕೊಬ್ಬು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ತಜ್ಞರ ಪ್ರಕಾರ, ಹೊಟ್ಟೆಯ ಕೊಬ್ಬನ್ನುವಿಸ್ಸರಲ್ ಫ್ಯಾಟ್ ಎಂದು ಕರೆಯಲಾಗುತ್ತದೆ.

Car : ಗಣೇಶೋತ್ಸವ ಮೆರವಣಿಗೆಯಲ್ಲಿ ಕಾರು ಡಿಕ್ಕಿ : 2 ಸಾವು, ಮೂವರಿಗೆ ಗಂಭೀರ ಗಾಯ.!

ಇದು ಯಕೃತ್ತು, ಮೂತ್ರಪಿಂಡಗಳು, ಕರುಳಿನಂತಹ ಆಂತರಿಕ ಅಂಗಗಳ ಸುತ್ತಲೂ ಸಂಗ್ರಹವಾಗುತ್ತಿದ್ದು, ಅವುಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತದೆ.

ಪರಿಣಾಮವಾಗಿ ಮಧುಮೇಹ, ಹೃದಯ ಸಮಸ್ಯೆಗಳು, ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಮಹಿಳೆಯರಲ್ಲಿ ಪಿಸಿಒಡಿ ಮತ್ತು ಹಾರ್ಮೋನು ಅಸಮತೋಲನಕ್ಕೂ ಹೊಟ್ಟೆಯ ಕೊಬ್ಬು (Fat) ಕಾರಣವಾಗಬಹುದು.

“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”

ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಅವರ ಪ್ರಕಾರ, ಹೊಟ್ಟೆಯ ಕೊಬ್ಬು (Fat) ಹೆಚ್ಚಾಗಲು ಮುಖ್ಯ ಕಾರಣಗಳು ಇವು:

  • ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ – ಅತಿಯಾಗಿ ಅನ್ನ, ರೊಟ್ಟಿ, ಬ್ರೆಡ್ ಸೇವನೆಯಿಂದ ಕೊಬ್ಬು ಶೇಖರಣೆಯಾಗುತ್ತದೆ.
  • ಸಂಸ್ಕರಿತ ಆಹಾರಗಳು – ಪ್ಯಾಕ್ ಮಾಡಿದ ಅಥವಾ ಪ್ರಾಸೆಸ್ಡ್ ಫುಡ್‌ಗಳಲ್ಲಿ ಫೈಬರ್ ಕಡಿಮೆಯಾಗಿದ್ದು, ಕೊಬ್ಬು (Fat) ಬೇಗನೆ ಜಮೆಯಾಗುತ್ತದೆ.
  • ವ್ಯಾಯಾಮದ ಕೊರತೆ – ನಿಧಾನ ನಡಿಗೆ ಸಾಕಾಗದೇ, ಚುರುಕಾದ ನಡಿಗೆ, ಓಟ ಅಥವಾ ಕಾರ್ಡಿಯೋ ವ್ಯಾಯಾಮ ಅಗತ್ಯ.
  • ಒತ್ತಡ ಮತ್ತು ನಿದ್ರಾಹೀನತೆ – ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಿ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.
  • ಆನುವಂಶಿಕ ಕಾರಣಗಳು – ಕೆಲವರಲ್ಲಿ ಕುಟುಂಬ ಪರಂಪರೆಯಿಂದಲೂ ಹೊಟ್ಟೆಯ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇದೆ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ಹೊಟ್ಟೆಯ ಕೊಬ್ಬಿನಿಂದ (Fat) ರಕ್ಷಿಸಿಕೊಳ್ಳುವ ಮಾರ್ಗಗಳು :
  • ಪ್ರತಿದಿನ ಕನಿಷ್ಠ 40 ನಿಮಿಷ ವ್ಯಾಯಾಮ ಮಾಡಿ.
  • ಆಹಾರದಲ್ಲಿ ಹಣ್ಣು-ತರಕಾರಿಗಳಂತಹ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸಿ.
  • ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಅಭ್ಯಾಸ ಮಾಡಿ.
  • ನಿದ್ರೆ ಸರಿಯಾಗಿ ಪಡೆಯುವುದು ಅತ್ಯಂತ ಅಗತ್ಯ.
  • ತಡರಾತ್ರಿ ಎಚ್ಚರವಾಗದೇ, ನಿಗದಿತ ಸಮಯದಲ್ಲಿ ಮಲಗಿ ಎಚ್ಚರವಾಗುವುದು ಆರೋಗ್ಯಕರ.
  • ಪ್ಯಾಕ್ ಮಾಡಿದ ಮತ್ತು ಜಂಕ್ ಫುಡ್ ಸೇವನೆಯನ್ನು ತಗ್ಗಿಸಿ.
Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!

ಹೊಟ್ಟೆಯ ಕೊಬ್ಬು (Fat) ಕೇವಲ ಬಾಹ್ಯ ಸೌಂದರ್ಯ ಸಮಸ್ಯೆಯಲ್ಲ, ಇದು ಗಂಭೀರ ಆರೋಗ್ಯ ಅಪಾಯಗಳಿಗೂ ಕಾರಣವಾಗಬಹುದು. ಆದ್ದರಿಂದ ಈಗಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯ.

Disclaimer : This article is based on reports and information available on the internet. Janaspandhan News is not affiliated with it and is not responsible for it.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments