ಜನಸ್ಪಂದನ ನ್ಯೂಸ್, ಆರೋಗ್ಯ : ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲಿ ವಿಷದಿಂದ ಮುಕ್ತವಾಗಿರೋ ಹಣ್ಣು ಎಂದ್ರೆ ಇವೆರಡೇ ನೋಡಿ.! ಬನ್ನಿ ಇಂದು ಆ ಎರಡು ಹಣ್ಣುಗಳು (Fruits) ಯಾವವು.? ಅವುಗಳಿಂದಾಗುವ ಪರಿಣಾಮಗಳೇನು ಅಂತ ತಿಳಿಯೋಣ.!
ಇಂದಿನ ಪರಿಸ್ಥಿತಿಯಲ್ಲಿ ಹಣ್ಣು-ತರಕಾರಿಗಳನ್ನು ತಾಜಾ ಎಂದು ಮಾರುಕಟ್ಟೆಯಿಂದ ಖರೀದಿಸುವಾಗ ನಾವು ತಿಳಿಯದೆ ವಿಷವನ್ನು ಸೇವಿಸುತ್ತಿರುವುದೇ ಹೆಚ್ಚು. ವೈದ್ಯರು ಹಣ್ಣು-ತರಕಾರಿ ಸೇವನೆ ಆರೋಗ್ಯಕ್ಕೆ ಮುಖ್ಯ ಎಂದು ಹೇಳಿದರೂ, ಮಾರುಕಟ್ಟೆಯ ಬಹುತೇಕ ಉತ್ಪನ್ನಗಳು ರಾಸಾಯನಿಕ ಸಿಂಪಡಣೆ ಮತ್ತು ಕೃತಕ ಬಣ್ಣದಿಂದ ತುಂಬಿರುತ್ತವೆ.
Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
ತರಕಾರಿ ಮತ್ತು ಸೊಪ್ಪು ಹಸಿರು ಹಸಿರಾಗಿ ಕಾಣಲು ವಿಶೇಷ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ತೊಳೆದಾಗ ಬಣ್ಣ ಬಿಟ್ಟುಕೊಳ್ಳುವುದು ಸಾಮಾನ್ಯ. ಇದೇ ರೀತಿ ಪ್ಯಾಕೆಟ್‌ಗಳಲ್ಲಿ ಲಭ್ಯವಿರುವ ಬಟಾಣಿ ಕಾಳುಗಳಲ್ಲಿ ಕೂಡ ಕೃತಕ ಬಣ್ಣದ ಬಳಸಿರುವುದು ಕಾಣಬಹುದು.
ಮತ್ತೊಂದೆಡೆ, ರೈತರು ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದರೆ ಅದನ್ನು ಜನರು ಸ್ವೀಕರಿಸುವಲ್ಲಿ ಹಿಂಜರಿಯುತ್ತಾರೆ. ಕಾರಣ, ಆ ತರಕಾರಿಗಳಲ್ಲಿ ಹುಳು ಕಾಣಿಸಬಹುದು ಅಥವಾ ನೋಡಲು ಅಷ್ಟು ಆಕರ್ಷಕವಾಗಿರುವುದಿಲ್ಲ. ಇದರಿಂದ ಮಾರುಕಟ್ಟೆಯ ಒತ್ತಡಕ್ಕೆ ಬಿದ್ದು ಹಲವರು ರಾಸಾಯನಿಕ ಬಳಕೆ ಮಾಡಲೇಬೇಕಾದ ಪರಿಸ್ಥಿತಿ ಎದುರಿಸುತ್ತಾರೆ.
Lover : ಪ್ರಿಯಕರನೊಂದಿಗೆ ಹೊರಟ ತಾಯಿ ; “ಹೋಗಬೇಡಮ್ಮ” ಎಂದು ಕಣ್ಣೀರಿನಿಂದ ಬೇಡಿಕೊಂಡ ಮಕ್ಕಳು.!
ಹಣ್ಣುಗಳ (Fruits) ವಿಷಯದಲ್ಲೂ ಪರಿಸ್ಥಿತಿ ಭಿನ್ನವಲ್ಲ. ದ್ರಾಕ್ಷಿಯಂಥ ಹಣ್ಣುಗಳಿಗೆ (Fruits) ನೇರವಾಗಿ ಕ್ರಿಮಿನಾಶಕ ಸಿಂಪಡಿಸಲಾಗುತ್ತದೆ. ಸೇಬು ಹಣ್ಣಿನ ಮೇಲೂ ರಾಸಾಯನಿಕ ಸಿಂಪಡಣೆ ಸಾಮಾನ್ಯ. ಅದೇ ಕಾರಣಕ್ಕೆ ಸೇಬಿನ ಸಿಪ್ಪೆ ತೆಗೆದು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಆದರೆ, ಕೆಲವು ಹಣ್ಣುಗಳು ಮಾತ್ರ ರಾಸಾಯನಿಕದ ಪರಿಣಾಮವನ್ನು ಸಹಿಸುವುದಿಲ್ಲ. ತಜ್ಞರ ಪ್ರಕಾರ, ಬಾಳೆಹಣ್ಣು ಮತ್ತು ಪೇರಲೆ (ಸೀಬೆ) ಹಣ್ಣುಗಳನ್ನು (Fruits) ಹೆಚ್ಚಾಗಿ ರಾಸಾಯನಿಕವಿಲ್ಲದೇ ಸೇವಿಸಬಹುದು. ಬಾಳೆ ಎಲ್ಲೆಡೆ ಸಾಮಾನ್ಯವಾಗಿದ್ದು, ಪೇರಲೆಯನ್ನು “ಬಡವರ ಸೇಬು” ಎಂದು ಕರೆಯಲಾಗುತ್ತದೆ.
POCSO : ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದ ದೌರ್ಜನ್ಯ ; ಬಾಲಕಿ 2 ತಿಂಗಳು ಗರ್ಭಿಣಿ.!
ಇದರಿಂದಾಗಿ, ದೇಹಕ್ಕೆ ಹಾನಿ ಮಾಡದ, ಆರೋಗ್ಯಕರ ಹಣ್ಣುಗಳನ್ನು (Fruits) ಆಯ್ಕೆ ಮಾಡಬೇಕೆಂದರೆ ಬಾಳೆ ಮತ್ತು ಪೇರಲೆ ಉತ್ತಮ ಆಯ್ಕೆ ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
Disclaimer : This article is based on reports and information available on the internet. Janaspandhan News is not affiliated with it and is not responsible for it.
WCR : ಪಶ್ಚಿಮ ಮಧ್ಯ ರೈಲ್ವೆಯಲ್ಲಿ 2865 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ.!
ಜನಸ್ಪಂದನ ನ್ಯೂಸ್, ನೌಕರಿ : ಪಶ್ಚಿಮ ಮಧ್ಯ ರೈಲ್ವೆ (WCR) ವತಿಯಿಂದ 2025 ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳಿಗಾಗಿ ಭಾರೀ ನೇಮಕಾತಿ ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (WCR) ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Lover : ಪ್ರಿಯಕರನೊಂದಿಗೆ ಹೊರಟ ತಾಯಿ ; “ಹೋಗಬೇಡಮ್ಮ” ಎಂದು ಕಣ್ಣೀರಿನಿಂದ ಬೇಡಿಕೊಂಡ ಮಕ್ಕಳು.!
WCR ಹುದ್ದೆಗಳ ವಿವರ :
- ಒಟ್ಟು ಹುದ್ದೆಗಳು : 2865.
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಉದ್ಯೋಗ ಸ್ಥಳ : ಅಖಿಲ ಭಾರತ.
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
WCR ವಿಭಾಗಗಳು :
- ಜಬಲ್ಪುರ ವಿಭಾಗ : 1136 ಹುದ್ದೆಗಳು.
- ಭೋಪಾಲ್ ವಿಭಾಗ : 558 ಹುದ್ದೆಗಳು.
- ಕೋಟಾ ವಿಭಾಗ : 865 ಹುದ್ದೆಗಳು.
- CRWS ಭೋಪಾಲ್ : 136 ಹುದ್ದೆಗಳು.
- WRS ಕೋಟಾ : 151 ಹುದ್ದೆಗಳು.
- ಪ್ರಧಾನ ಕಚೇರಿ ಜಬಲ್ಪುರ : 19 ಹುದ್ದೆಗಳು.
Police : ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!
ವಯೋಮಿತಿ :
- ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 15 ವರ್ಷಗಳು, ಗರಿಷ್ಠ 24 ವರ್ಷ ಮೀರಬಾರದು.
ಶೈಕ್ಷಣಿಕ ಅರ್ಹತೆ :
- ಯಾವುದೇ ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಸಮಾನ ಪರೀಕ್ಷೆ ಪಾಸ್ ಆಗಿರಬೇಕು.
- ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಪ್ರಮಾಣಪತ್ರ ಹೊಂದಿರಬೇಕು.
ಆಯ್ಕೆ ವಿಧಾನ :
- ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಆಧಾರಿತವಾಗಿ ಆಯ್ಕೆ ಮಾಡಲಾಗುವುದು.
Police : ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ (WCR) ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಹಾಗೂ ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ವಿವರಗಳನ್ನು ಸರಿಯಾಗಿ ನಮೂದಿಸಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿ (ಅಗತ್ಯವಿದ್ದರೆ).
- ಅರ್ಜಿ ಸಲ್ಲಿಸಿ ಹಾಗೂ ಮುದ್ರಿಸಿಕೊಳ್ಳಿ.
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ : 30 ಆಗಸ್ಟ್ 2025.
- ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ : 29 ಸೆಪ್ಟೆಂಬರ್ 2025.
Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
ಪ್ರಮುಖ ಲಿಂಕ್‌ಗಳು :
- ಅಧಿಸೂಚನೆ PDF : [ಇಲ್ಲಿ ಕ್ಲಿಕ್ ಮಾಡಿ]
- ಅರ್ಜಿಗೆ ಲಿಂಕ್ : [ಇಲ್ಲಿ ಕ್ಲಿಕ್ ಮಾಡಿ]
- ಅಧಿಕೃತ WCR ವೆಬ್‌ಸೈಟ್ : wcr.indianrailways.gov.in
Disclaimer : The above given information is available On online, candidates should check it properly before applying. This is for information only.